ನಿರಾಸೆ ಬೇಡ ಬೇಗ ನಿಮ್ಮ ಮುಂದೆ ಬರ್ತೀವಿ: ಶಿವಣ್ಣ ಭರವಸೆ

 ಕನ್ನಡ ರಾಜ್ಯೋತ್ಸವದಂದು ಸೆಂಚುರಿ ಸ್ಟಾರ್ ಅಭಿನಯದ ’ಆಯುಷ್ಮಾನ್‌ಭವ’ ತೆರೆಕಾಣುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಚಿತ್ರದ ಮುಂದೂಡಿಕೆಯಿಂದಾಗಿ ನಿರಾಸೆಯಾಗಿದೆ. 
ಶಿವರಾಜ್ ಕುಮಾರ್
ಶಿವರಾಜ್ ಕುಮಾರ್
Updated on

ಬೆಂಗಳೂರು:  ಕನ್ನಡ ರಾಜ್ಯೋತ್ಸವದಂದು ಸೆಂಚುರಿ ಸ್ಟಾರ್ ಅಭಿನಯದ ’ಆಯುಷ್ಮಾನ್‌ಭವ’ ತೆರೆಕಾಣುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಚಿತ್ರದ ಮುಂದೂಡಿಕೆಯಿಂದಾಗಿ ನಿರಾಸೆಯಾಗಿದೆ. 

ಆದರೆ "ನಿರಾಸೆ ಬೇಡ, ಈ ರಾಜ್ಯೋತ್ಸವ ಮಾಸದಲ್ಲೇ ಆಯುಷ್ಮನ್ ಭವ" ನಿಮ್ಮನ್ನು ರಂಜಿಸಲಿದೆ" ಎಂದು ಸ್ವತಃ ಶಿವರಾಜ್ ಕುಮಾರ್ ಹೇಳಿದ್ದಾರೆ. 

"ಆಯುಷ್ಮಾನ್‌ಭವ" ಚಿತ್ರ ಮುಂದೂಡಿರುವ ಹಿನ್ನೆಲೆಯಲ್ಲಿ ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಣ್ಣ, " ನವೆಂಬರ್ ೧ ರಂದೇ ಚಿತ್ರ ಬಿಡುಗಡೆ ಸಾಧ್ಯವಾಗುತ್ತೆ ಎಂಬ ಅತಿಯಾದ ಆತ್ಮವಿಶ್ವಾಸದಿಂದ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ಕೈ ಸೇರುವ ಮೊದಲೇ ದಿನಾಂಕ ಘೋಷಿಸಿದ್ದೆವು ಎಂದಿದ್ದಾರೆ. 

ಚಿತ್ರ ನಿರ್ಮಾಪಕ ಯೋಗಿ ದ್ವಾರಕೀಶ್, ಸೆನ್ಸಾರ್ ಮಂಡಳಿಯು ’ಆಯುಷ್ಮಾನ್‌ಭವ’ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ಪ್ರಮಾಣ ಪತ್ರ ಕೈಸೇರಿದ ತಕ್ಷಣ ಚಿತ್ರ ಬಿಡುಗಡೆ ದಿನಾಂಕ ಘೋಷಿಸುತ್ತೇವೆ, ಶಿವರಾಜ್ ಕುಮಾರ್ ಅಭಿಮಾನಿಗಳು ನಿರಾಶರಾಗಬೇಕಿಲ್ಲ ಎಂದರು. 

ಚಿತ್ರಕ್ಕೆ ಯು/ಎ ಪ್ರಮಾಣ ಪತ್ರವೇಕೆ ಎಂಬ ಪ್ರಶ್ನೆಗೆ, ಎರಡಕ್ಕಿಂತ ಹೆಚ್ಚು ಹೊಡೆದಾಟದ ದೃಶ್ಯಗಳಿದ್ದರೆ, ಬಾರ್ ದೃಶ್ಯವಿದ್ದರೆ ಯು/ಎ ಸರ್ಟಿಫಿಕೆಟ್ ನೀಡಲಾಗುತ್ತೆ ಎಂದು ಉತ್ತರಿಸಿದರು. ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಹಿರಿಯ ನಟ ಅನಂತನಾಗ್ ಆಯುಷ್ಮಾನ್‌ಭವ ಬಿಡುಗಡೆ ವಿಳಂಬದಿಂದ ಅಭಿಮಾನಿಗಳಿಗೆ ಬೇಸರವಾಗುವುದು ಸಹಜ. ತಾಂತ್ರಿಕ ಕಾರಣಗಳಿಂದ ಹೀಗಾಗಿದೆ. ಚಿತ್ರ ಯಾವಾಗ ಬಿಡುಗಡೆಯಾದರೂ, ಎಂದಿನಂತೆಯೇ ಪ್ರೋತ್ಸಾಹಿಸಿ ಎಂದರು. 

’ಆಯುಷ್ಮಾನ್‌ಭವ’ ದ್ವಾರಕೀಶ್ ಚಿತ್ರ ಅವರ ೫೨ನೇ ಸಿನಿಮಾ. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಸಂಗೀತ ನೀಡಿರುವ ೧೦೦ನೇ ಚಿತ್ರ ಎಂಬುದು ವಿಶೇಷ. ಪಿ. ವಾಸು ನಿರ್ದೇಶನದಲ್ಲಿ ಮೂಡಿಬಂದಿರುವ ಸಂಗೀತಮಯ ಚಿತ್ರದಲ್ಲಿ ಶಿವರಾಜ್ ಕುಮಾರ್, ರಚಿತಾರಾಮ್, ಅನಂತನಾಗ್, ಸುಹಾಸಿನಿ ಸೇರಿದಂತೆ ಬಹುದೊಡ್ಡ ತಾರಾಗಣವಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com