#MeToo ದೂರು ನೀಡಿರುವ ಬಗೆಗೆ ಹೆಮ್ಮೆ ಇದೆ, ವಿಷಾದವಿಲ್ಲ: ಶೃತಿ ಹರಿಹರನ್

 #MeToo ಅಭಿಯಾನದಲ್ಲಿ ಪಾಲ್ಗೊಂಡು ತಾನು ಸಹ "ಮೀಟೂ" ದೂರು ನೀಡಿರುವ ಬಗೆಗೆ ನನಗೆ ಹೆಮ್ಮೆ ಇದೆ, ಯಾವ ವಿಷಾದ ಭಾವನೆ ಇಲ್ಲ ಎಂದು ನಟಿ ಶ್ರುತಿ ಹರಿಹರನ್ ಹೇಳಿದ್ದಾರೆ.
ಶ್ರುತಿ ಹರಿಹರನ್
ಶ್ರುತಿ ಹರಿಹರನ್
Updated on

ಬೆಂಗಳೂರು: #MeToo ಅಭಿಯಾನದಲ್ಲಿ ಪಾಲ್ಗೊಂಡು ತಾನು ಸಹ "ಮೀಟೂ" ದೂರು ನೀಡಿರುವ ಬಗೆಗೆ ನನಗೆ ಹೆಮ್ಮೆ ಇದೆ, ಯಾವ ವಿಷಾದ ಭಾವನೆ ಇಲ್ಲ ಎಂದು ನಟಿ ಶ್ರುತಿ ಹರಿಹರನ್ ಹೇಳಿದ್ದಾರೆ.

"ನಾನು ಅರ್ಜುನ್ ಸರ್ಜಾ ಮೇಲೆ ದೂರು ನಿಡಿದ ಬಳಿಕ ನನಗೆ ಚಿತ್ರರಂಗದಲ್ಲಿ ಅವಕಾಶ ಕಡಿಮೆಯಾಗಿದೆ, ಆದರೆ ಅದಕ್ಕಾಗಿ ವಿಷಾದ ಇಲ್ಲ" ನಗರದ ಅಶೋಕ್ ಲಲಿತ್ ಹೋಟೆಲ್‌ನಲ್ಲಿ ಫೇಸ್‌ಬುಕ್ ವತಿಯಿಂದ ಹಿರಿಯ ಪತ್ರಕರ್ತೆ ಬರ್ಖಾ ದತ್ ನೇತೃತ್ವದಲ್ಲಿ ನಡೆದ ವಿ ದಿ ವುಮೆನ್(ನಾವು ಮಹಿಳೆಯರು)ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಟಿ ಮೇಲಿನ ಹೇಳಿಕೆ ನೀಡಿದ್ದಾರೆ.

ಸಧ್ಯ ನನ್ನ ಕೈಯಲ್ಲಿ ಯಾವ ಚಿತ್ರಗಳಿಲ್ಲ.ನನ್ನ ಮೂರು ತಿಂಗಳ ಮಗಳು ಹಾಗೂ ಪತಿಯೊಡನೆ ಖುಷಿಯಾಗಿದ್ದೇನೆ. ಈ ಸಾಲಿನ ಚಲನಚಿತ್ರ ರಾಷ್ಟ್ರಪ್ರಶಸ್ತಿ ಬಂದ ಕಾರಣ ಪುನಃ ಚಿತ್ರರಂಗದಲ್ಲಿ ಅವಕಾಶ ಸಿಕ್ಕುವ ಆಶಾಭಾವನೆ ಹೊಂದಿದ್ದೇನೆ ಎಂದು ಅವರು ಹೇಳೀದ್ದಾರೆ.

"ಮೀಟೂ" ಪ್ರಕರಣದಲ್ಲಿ ನಿಜಕ್ಕೂ ಯಾವ ಪ್ರತ್ಯಕ್ಷ ಸಾಕ್ಷಿಗಳಿರುವುದಿಲ್ಲ. ಅಂತಹವನ್ನು ಧೈರ್ಯದಿಂದ ಎದುರಿಸಬೇಕು" ಶ್ರುತಿ ನುಡಿದರು.

"ಮೀಟೂ" ದೂರು ನೀಡಿ ಒಂದು ವಷವಾದ ಹಿನ್ನೆಲೆಯಲ್ಲಿ ಶ್ರುತಿಯವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com