ಜೈ ನಿರ್ದೇಶನದ ‘ಬ್ಲ್ಯಾಂಕ್’ ಸಿನಿಮಾದಲ್ಲಿ ಡ್ರಗ್ಸ್ ಗೀಳಿನ ಬಗ್ಗೆ ಹೇಳಲಾಗಿದೆ. ಆದರೆ, ಡ್ರಗ್ಸ್ ಕುರಿತ ಸಿನಿಮಾಗಳಲ್ಲಿ ಈ ಹಿಂದೆ ಹೇಳಿರದ ಮತ್ತೊಂದು ಮುಖವನ್ನು ‘ಬ್ಲ್ಯಾಂಕ್’ ಚಿತ್ರದಲ್ಲಿ ತೋರಿಸುವ ಹೊಸ ಪ್ರಯತ್ನ ಆಗಿದೆಯಂತೆ.
ಒಟ್ಟು ಮೂರು ಬಗೆಯ ಪಾತ್ರಗಳಲ್ಲಿ ಕೃಷಿ ಕಾಣಿಸಿಕೊಂಡಿದ್ದು, ಡ್ರಗ್ಸ್ ನಶೆಯಲ್ಲಿಯೂ ತೇಲಿದ್ದಾರಂತೆ. ‘ಡ್ರಗ್ಸ್ ತೆಗೆದುಕೊಂಡ ಬಳಿಕ ಏನೆಲ್ಲ ಆಗುತ್ತದೆ ಎಂಬುದನ್ನು ಬ್ಲ್ಯಾಂಕ್’ನಲ್ಲಿ ಹೇಳಿದ್ದೇವೆ. ಒಟ್ಟು ಮೂರು ಬಗೆಯ ಪಾತ್ರಗಳಲ್ಲಿ ನಾನು ಕಾಣಿಸಿಕೊಂಡಿದ್ದೇನೆ.
ಒಂದರಲ್ಲಿ ನಾರ್ಮಲ್ ಹುಡುಗಿಯಾದರೆ, ಮತ್ತೊಂದರಲ್ಲಿ ಮಾದಕ ವ್ಯಸನಿಯಾಗಿ, ಬಳಿಕ ಆಕೆ ನಶೆಯಲ್ಲಿ ಹೇಗೆಲ್ಲ ವರ್ತಿಸುತ್ತಾಳೆ ಎಂಬುದನ್ನು ತೋರಿಸುವ ಪಾತ್ರಧಾರಿಯೂ ನಾನಾಗಿದ್ದೇನೆ’ ಎನ್ನುತ್ತಾರೆ ಕೃಷಿ ತಾಪಂಡ,
ಹಾಗಂತ ಕೃಷಿ ಇಲ್ಲಿ ಡ್ರಗ್ಸ್ ಸೇವಿಸಿ ಪಾತ್ರ ಮಾಡಿಲ್ಲ. ಬದಲಿಗೆ ಮಾದಕ ವಸ್ತುಗಳು ಹೇಗೆಲ್ಲ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಂಡಿದ್ದಾರೆ, ಅದಕ್ಕಾಗಿ ಕೆಲವೊಂದಿಷ್ಟು ವಿಡಿಯೋಗಳನ್ನು ನೋಡಿದ್ದಾರೆ. ಬಳಿಕವಷ್ಟೇ ಕ್ಯಾಮರಾ ಎದುರಿಸಿದ್ದಾರೆ.
ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಚಿತ್ರತಂಡ, ಆದಷ್ಟು ಬೇಗ ಸಿನಿಮಾ ರಿಲೀಸ್ ಮಾಡುವ ಉತ್ಸಾಹದಲ್ಲಿದೆ. ಪೂರ್ಣಚಂದ್ರ ಮೈಸೂರು, ಭರತ್ ಹಾಸನ್, ಪ್ರಶಾಂತ್ ಸಿದ್ದಿ ಮುಖ್ಯಭೂಮಿಕೆಯಲ್ಲಿದ್ದಾರೆ. ಮಂಜುನಾಥ್ ಪ್ರಸನ್ನ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಪುರುಷೋತ್ತಮ್ ಛಾಯಾಗ್ರಹಣ, ಶ್ರೀ ಸಸ್ತಾ ಸಂಗೀತ ನೀಡಿದ್ದಾರೆ.
Advertisement