ಎರಡನೇ ಬಾರಿ ತಾಯ್ತನದ ಸುಖ ಅನುಭವಿಸಿದ್ದು ಖುಷಿ ತಂದಿದೆ: ರಾಧಿಕಾ ಪಂಡಿತ್
ಬೆಂಗಳೂರು: ಎರಡನೇ ಬಾರಿಗೆ ತಾಯ್ತನದ ಸುಖ ಅನುಭವಿಸುವ ಅವಕಾಶ ಲಭಿಸಿದ್ದು ಖುಷಿಯನ್ನು ತಂದಿದೆ ಎಂದು ಸ್ಯಾಂಡಲ್ ವುಡ್ ನಟಿ, ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಹೇಳಿದ್ದಾರೆ. ಗಂಡುಮಗುವಿಗೆ ಜನ್ಮ ನೀಡಿದ್ದ ರಾಧಿಕಾ ಪಂಡಿತ್ ಇಂದು ಫೋರ್ಟಿಸ್ಆಸ್ಪತ್ರೆಯಿಂದ ಡಿಸ್ಚಾರ್ಜ್ಆಗಿದ್ದು ಈ ವೇಳೆ ಅವರು ಮಾದ್ಯಮಗಳನ್ನುದ್ದೇಶಿಸಿ ಮಾತನಾದಿದ್ದಾರೆ.
ಅಕ್ಟೋಬರ್ 30ರಂದು ರಾಧಿಕಾ ಗಂಡುಮಗುವಿಗೆ ಜನ್ಮ ನೀಡಿದ್ದರು.ಇದಾಗಿ ಎಂಟು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ನಟಿ ಇಂದು ಮನೆಗೆ ಮರಳಿದ್ದಾರೆ.
ಇದರ ನಡುವೆ ಆಸ್ಪತ್ರೆಯಿಂದ ಮನೆಗೆ ತೆರಳುವ ಮುನ್ನ ಯಶ್ ಹಾಗೂ ರಾಧಿಕಾ ದಂಪತಿ ಮಾದ್ಯಮದೊಡನೆ ಮಾತನಾಡಿದ್ದಾರೆ. "ಇನ್ನೊಮ್ಮೆ ತಾಯ್ತನದ ಸುಖ ಅನುಭವಿಸುವ ಅವಕಾಶ ದೊರಕಿದ್ದು ತುಂಬಾ ಸಂತೋಷ ತಂದಿದೆ. ನನಗೆ ಹೆರಿಗೆಯನ್ನು ಆರಾಮದಾಯಕವಾಗುವಂತೆ ಮಾಡಿದ ವೈದ್ಯರ ತಂಡಕ್ಕೆ ಧನ್ಯವಾದ. ನನಗೆ ಶುಭಹಾರೈಸಿದ ಎಲ್ಲಾ ಅಭಿಮಾನಿಗಳಿಗೆ ನಾನು ಆಭಾರಿಯಾಗಿದ್ದೇನೆ" ರಾಧಿಕಾ ಹೇಳಿದ್ದಾರೆ.
"ತಾಯಿ-ಮಗು ಇಬ್ಬರೂ ಆರೋಗ್ಯದಿಂದಿದ್ದಾರೆ. ಈ ಬಾರಿ ಹೆರಿಗೆ ವೇಳೆ ಶೂಟ್ಂಗ್ ಎಲ್ಲಾ ಬಿಟ್ಟು ಪತ್ನಿಯೊಡನೆ ಕಾಲ ಕಳೆದಿದ್ದು ಸಂತಸವಾಗಿದೆ. ದೇವರ ದಯೆ ಈಗ ಕಂಪ್ಲೀಟ್ ಫ್ಯಾಮಿಲಿ ಆಗಿದೆ." ಯಶ್ ಹೇಳಿದ್ದು ಅಭಿಮಾನಿಗಳಿಗೆ ಸ್ಪೆಷಲ್ ಥ್ಯಾಂಕ್ಸ್ ಸಹ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ