ಪ್ರತಿವರ್ಷ ಸಾವಿರಾರು ಯುವಕರು ಕಾಲೇಜಿನಿಂದ ಪದವಿ ಪಡೆಯುತ್ತಾರೆ ಹಾಗೂ ಸರಿಯಾದ ಉದ್ಯೋಗ ದೊರಕದೆ ಹೋದಾಗ ಸಮಾಜದಲ್ಲಿ ಹಲ ಬಗೆಯ ಸವಾಲುಗಳನ್ನು ಎದುರಿಸುತ್ತಾರೆ. ಇದೀಗ ಸ್ಯಾಂಡಲ್ ವುಡ್ ನಲ್ಲಿ ತಯಾರಾಗುತ್ತಿರುವ ಹೊಸ ಚಿತ್ರವೊಂದರ ಕಥಾ ಹಂದರ ಇದೇ ಆಗಿದೆ. "ನಮ್ ಗಣಿ ಬಿಕಾಂ ಪಾಸ್" ಚಿತ್ರದಲ್ಲಿ ನಿರುದ್ಯೋಗಿ ಪದವೀಧರರ ಸಮಸ್ಯೆ ಬಿಂಬಿತವಾಗಿದೆಯಂತೆ. ನಾಗೇಶ್ ಕುಮಾರ್ ನಿರ್ಮಿಸಿದ ಈ ಚಿತ್ರವು ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡಬಲ್ಲವರು ಎದುರಿಸುತ್ತಿರುವ ಸಮಸ್ಯೆಗಳನ್ನೂ ಎತ್ತಿ ತೋರಿಸುತ್ತದೆ.
ಚೊಚ್ಚಲ ಚಿತ್ರವನ್ನು ನಿರ್ದೇಶಿಸುತ್ತಿರುವ ಅಭಿಷೇಕ್ ಶೆಟ್ಟಿ ಅವರು ಈ ಚಿತ್ರದ ನಿರ್ದೇಶಕರಾಗಿದ್ದು ಅವರು ಈ ಹಿಂದೆ ಹಲವಾರು ಚಿತ್ರಗಳಲ್ಲಿ ಸಂಭಾಷಣೆ ಬರಹಗಾರರಾಗಿ ಮತ್ತು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅಭಿಷೇಕ್ ಅವರ ಪ್ರಕಾರ, ಈ ಚಿತ್ರವು ಗಂಭೀರ ವಿಷಯವನ್ನು ಮಂಡಿಸುತ್ತದೆ. ಅದನ್ನು ಹಾಸ್ಯದ ಲೇಪನದೊಡನೆ ಹೇಳಲಾಗುತ್ತದೆ. “ಪ್ರತಿ ಯುವಕರಿಗೆ ಪರೀಕ್ಷಾಕಾಲ ಪದವಿ ಪರೀಕ್ಷೆಗಳು ಮುಗಿದ ನಂತರ ಪ್ರಾರಂಭವಾಗುತ್ತದೆ. ದು ವೃತ್ತಿಜೀವನವನ್ನು ಪ್ರಾರಂಭಿಸುವ ಸಮಯ. ಒಬ್ಬ ಯುವಕ ಜವಾಬ್ದಾರಿಯನ್ನು ತೆಗೆದುಕೊಳ್ಳಲು ವಿಫಲವಾದಾಗ ಏನಾಗುತ್ತದೆ ಎಂಬುದು ನಮ್ ಗಣಿ.... ಚಿತ್ರದ ತಿರುಳು. ”ಎಂದು ಅವರು ಹೇಳಿದ್ದಾರೆ. ವಿಶೇಷವೆಂದರೆ ನಿರ್ದೇಶಕ ಅಭಿಷೇಕ್ ಅವರೇ ಈ ಚಿತ್ರದ ನಾಯಕರಾಗಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ.
“ನಿರ್ದೇಶನ ಯಾವಾಗಲೂ ನನ್ನ ಗುರಿಯಾಗಿದೆ, ಆದರೆ ನಾನು ನಟನೆಗೆ ಆಕಸ್ಮಿಕವಾಗಿ ಬಂದಿದ್ದೇನೆ. ನಾನು ಕಥೆಯನ್ನು ನಿರ್ಮಾಪಕರಿಗೆ ಹೇಳಿದಾಗ ನಾಯಕನ ಹುಡುಕಾಟದಲ್ಲಿ ನಿರತವಾಗಿದ್ದೇವು. ಈ ಪ್ರಕ್ರಿಯೆ ಮೂರು ತಿಂಗಳು ತೆಗೆದುಕೊಂಡಿದೆ. ಆದರೆ ಕೆಲವರಿಗೆ ನಮಗೆ ಸಂಭಾವನೆ ನೀಡಲು ಕಠಿಣವಾಗಿತ್ತು, ಇನ್ನೂ ಕೆಲವರಿಗೆ ಸಮಯವಿರಲಿಲ್ಲ, ಈ ಹಿಂದೆ ನಾನು ನಿರ್ದೇಶಿಸಿದ್ದ ಕಿರುಚಿತ್ರಗಳಲ್ಲಿ ನಾನು ಅಭಿನಯಿಸಿದ್ದೆ. ಆ ಅನುಭವವು ನನಗಿಲ್ಲಿ ನೌಕೂಲಕ್ಕೆ ಬಂದಿದೆ. ನನ್ನ ಅಭಿನಯವನ್ನು ವೀಕ್ಷಿಸಿದ ನಿರ್ಮಾಪಕ ನಾಗೇಶ್ ಕುಮಾರ್, ನಾನು ಎರಡೂ ಜವಾಬ್ದಾರಿಗಳನ್ನು ನಿಭಾಯಿಸಬಲ್ಲೆ ಎಂದು ಭಾವಿಸಿದ್ದಾರೆ. ಕ್ಯಾಮೆರಾದ ಮುಂದೆ ಮತ್ತು ಹಿಂದೆ ಎರಡೂ ಕಡೆಗಳಲ್ಲಿ ಕೆಲಸ ಮಾಡಲು ಅನನ್ಗೆ ಅವಕಾಶ ಮಾಡಿಕೊಟ್ಟಿದ್ದಾರೆ"
ಚಿತ್ರದಲ್ಲಿ ಐಶಾನಿ ಶೆಟ್ಟಿ ನಾಯಕಿಯಾಗಿದ್ದು ಅವರು ಹೇಳಿದಂತೆ ನಮ್ ಗಣಿ....ಟೈಮ್‌ಲೆಸ್ ವಿಷಯದ ಬಗ್ಗೆ ವ್ಯವಹರಿಸುತ್ತದೆ. "ಉದ್ಯೋಗ ಭದ್ರತೆ, ಒತ್ತಡ, ದವಿ ಮುಗಿದ ನಂತರ ಯುವಕರು ತಮ್ಮ ಜೀವನವನ್ನು ಹೇಗೆ ಮುಂದುವರಿಸುತ್ತಾರೆ ಎನ್ನುವುದನ್ನು ನೋಡುತ್ತೇವೆ"ಪ್ರತಿಯೊಬ್ಬ ಯುವಕನು ಕಥೆಯೊಂದಿಗೆ ಈ ಚಿತ್ರಕ್ಕೆ ಸಂಬಂಧವಿದೆ ಎಂದು ನಟಿ ಹೇಳಿದ್ದಾರೆ.
“ಕೇವಲ ಯುವಕರು ಮಾತ್ರವಲ್ಲ, ಪೋಷಕರು ಸಹ ಪಾತ್ರಗಳಲ್ಲಿ ತಮ್ಮನ್ನು ತಾವು ಕಾಣುತ್ತಾರೆ. ಇದು ಮಧ್ಯಮ ವರ್ಗದ ಮೌಲ್ಯಗಳ ಕಥೆ. ಹಾಸ್ಯದೊಂದಿಗೆ ಸಾಮಾನ್ಯ ಸಮಸ್ಯೆಯನ್ನು ಬೆರೆಸುವುದು ಮನರಂಜನೆಯನ್ನು ನೀಡುತ್ತದೆ, ”ಐಶಾನಿ ಹೇಳಿದ್ದಾರೆ.
ಐಶಾನಿ ಅವರು ವಿಭಿನ್ನ ಪಾತ್ರಗಳನ್ನು ಮಾಡಲು ಹೊರಟಿದ್ದಾರೆ. ನಮ್ ಗಣಿ.....ಚಿತ್ರದಲ್ಲಿ ಆಕೆಯು ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಾಲಾ ವಿದ್ಯಾರ್ಥಿನಿ ಮತ್ತು ಪ್ರಬುದ್ಧ ಯುವತಿಯ ಪಾತ್ರ. ಯುವಕನ ಮೇಲೆ ಮೋಹ ಹೊಂದಿದ ಶಾಲಾ ವಿದ್ಯಾರ್ಥಿನಿಯ ಪಾತ್ರವು ನನ್ನನ್ನು 15 ವರ್ಷಗಳ ಹಿಂದಕ್ಕೆ ಕರೆದೊಯ್ಯಿತು, ಮತ್ತು ನಾನು ಶಾಲಾ ಸಮವಸ್ತ್ರ ಮತ್ತು ಹೊಳೆಯುವ ಬೂಟುಗಳೊಂದಿಗೆ ಕಾಣಿಸಿಕೊಂಡಿದ್ದೇನೆ. ಈ ಪಾತ್ರದ ಮುಗ್ಧತೆಯನ್ನುನಾನು ಖುಷಿಪಟ್ಟಿದ್ದೇನೆ ”ಎಂದು ಐಶಾನಿ ಹೇಳುತ್ತಾರೆ.
Advertisement