ಅಯೋಗ್ಯ ಸಿನಿಮಾ ಸಹನಟಿ ವಿರುದ್ದ ದೂರು ದಾಖಲು: ಸುಫಾರಿ ಕೊಟ್ಟು ಎಸ್ಕೇಪ್!
ಬೆಂಗಳೂರು: ಅಯೋಗ್ಯ ಚಿತ್ರದ ಸಹನಟಿ ವಿರುದ್ಧ ಜೀವಹರಣ ಮಾಡಲು ಪ್ರಯತ್ನಿಸಿದ ಆರೋಪ ಕೇಳಿಬಂದಿದ್ದು, ಹಣ ಕೊಟ್ಟಿದ್ದನ್ನು ವಾಪಸ್ ಕೇಳಿದ್ದಕ್ಕೆ ಹುಡುಗರನ್ನು ಬಿಟ್ಟು ಈ ಯತ್ನಕ್ಕೆ ಮುಂದಾಗಿದ್ದಾರೆನ್ನಲಾಗಿದೆ.
ದೃಶ್ಯ ಎಂಬ ನಟಿ ಈ ಕೃತ್ಯಕ್ಕೆ ಮುಂದಾಗಿದ್ದು, ಈಕೆ ಅಯೋಗ್ಯ ಚಿತ್ರದಲ್ಲಿ ಸಹನಟಿಯಾಗಿ ನಟಿಸಿದ್ದಳು. ರಾಜೇಶ್ ಎಂಬುವವರ ಜೀವಹರಣಕ್ಕೆ ಯತ್ನಿಸಿದ್ದು, ರಾಜೇಶ್ ದೃಶ್ಯಳಿಗೆ ಹಣ ನೀಡಿದ್ದನಂತೆ. ಆ ಹಣವನ್ನು ವಾಪಸ್ ಕೇಳಲು ಆಕೆಯ ಮನೆ ಬಳಿ ಹೋದಾಗ ದೃಶ್ಯ ಹುಡುಗರನ್ನು ಬಿಟ್ಟು ರಾಜೇಶ್ ಜೀವಹರಣಕ್ಕೆ ಯತ್ನಿಸಿದ್ದಾಳೆಂದು ಆರೋಪಿಸಲಾಗಿದೆ.
ಬಲಮುರಿ ಸಮೀಪ ರಾಜೇಶ್ ಮೇಲೆ ನಾಲ್ವರಿಂದ ಹಲ್ಲೆಯಾಗಿತ್ತು. ಈ ವೇಳೆ ರಾಜೇಶ್ ದೇಹವನ್ನು ರೇಜರ್ನಿಂದ ಕೊರೆದು ಹಾಕಲಾಗಿತ್ತು. ಈ ವೇಳೆ 'ದೃಶ್ಯ ಬಳಿ ಹಣ ಕೇಳ್ತೀಯಾ' ಎಂದು ಹಲ್ಲೆ ನಡೆಸುವವರು ಕೂಗಾಡಿರುವುದಾಗಿ ರಾಜೇಶ್ ದೂರಿನಲ್ಲಿ ತಿಳಿಸಿದ್ದಾರೆ. ಗಾಯಗೊಂಡ ರಾಜೇಶ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ನಟಿ ದೃಶ್ಯ ವಿರುದ್ಧ ಮೈಸೂರಿನ ಕೆಆರ್ಎಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ದೃಶ್ಯ ಮತ್ತು ಆಕೆಯ ತಂದೆ ಎಸ್ಕೇಪ್ ಆಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ