'ಗಿರ್ಕಿ' ಚಿತ್ರಕ್ಕೆ ವಿಲೋಕ್ ಜತೆಯಾದ ದಿವ್ಯಾ ಉರುಡುಗ

ವೀರೇಶ್ ಪಿಎಂ ಚೊಚ್ಚಲ ನಿರ್ದೇಶನದ "ಗಿರ್ಕ್"ಗೆ ನಾಯಕಿ ಆಯ್ಕೆಯಾಗಿದ್ದಾರೆ. ದಿವ್ಯಾ ಉದುಡುಗ ಈ ಚಿತ್ರದ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ದಿವ್ಯಾ ಉದುಡುಗ
ದಿವ್ಯಾ ಉದುಡುಗ

ವೀರೇಶ್ ಪಿಎಂ ಚೊಚ್ಚಲ ನಿರ್ದೇಶನದ "ಗಿರ್ಕ್"ಗೆ ನಾಯಕಿ ಆಯ್ಕೆಯಾಗಿದ್ದಾರೆ. ದಿವ್ಯಾ ಉದುಡುಗ ಈ ಚಿತ್ರದ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

"ಹುಲಿರಾಯ" ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ನಟಿ ದಿವ್ಯಾ ಬಳಿಕ "ಫೇಸ್ ಟು ಫೇಸ್", "ಧ್ವಜ", "ರಾಂಚಿ"ಯಂತಹಾ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

"ಗಿರ್ಕಿ" ನಲ್ಲಿ ದಿವ್ಯಾ ವಿಲೋಕ್ ರಾಜಾ ಅವರಿಗೆ ಜತೆಯಾಗಿ ಕಾಣಿಸಿಕೊಳ್ಳಲಿದ್ದು ಈ ಚಿತ್ರದಲ್ಲಿ ತರಂಗ ವಿಶ್ವಾಸ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಯೋಗರಾಜ್ ಭಟ್ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ್ದ ನಿರ್ದೇಶಕರು ಈ ಚಿತ್ರದೊಂದಿಗೆ ಪೂರ್ಣ ಪ್ರಮಾಣದ ನಿರ್ದೇಶಕರಾಗಲಿದ್ದಾರೆ. ಇನ್ನು ನಟ ವಿಲೋಕ್ ಸಹ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇದೊಂದು ಲವ್ ಥ್ರಿಲ್ಲರ್ ಕಥಾನಕವಾಗಿದ್ದು ಜತೆಜತೆಗೆ ಕಾಮಿಡಿ ಸಹ ಇದೆ ಎಂದು ಹೇಳಲಾಗಿದೆ.

ಎಡಿಟ್ ಫಿಲ್ಮ್ ಫ್ಯಾಕ್ಟರಿ ಮತ್ತು ವಾಸುಕಿ ಮೂವಿ ಪ್ರೊಡಕ್ಷನ್ಸ್ಅಡಿಯಲ್ಲಿ ತಯಾರಾಗುತ್ತಿರುವ "ಗಿರ್ಕಿ" ಅಕ್ಟೋಬರ್ 3ರಿಂದ ಸೆಟ್ಟೇರಲಿದೆ.ವೀರಸಮರ್ಥ್ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದರೆ ನವೀನ್ ಚಲ್ಲ ಛಾಯಾಗ್ರಹಣ ಮಾಡಲಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿರಲಿದ್ದು ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಸಾಹಿತ್ಯ ರಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com