ಹನ್ಸಿಕಾ ಮೋಟ್ವಾನಿ ಜೊತೆಗೆ ಹಾರರ್-ಕಾಮಿಡಿ ಚಿತ್ರದಲ್ಲಿ ಕ್ರಿಕೆಟಿಗ ಶ್ರೀಶಾಂತ್!

ಹರಿ ಹರೀಶ್ ನಿರ್ದೇಶನದ ಹಾರರ್- ಕಾಮಿಡಿ ಸಿನಿಮಾವೊಂದರ ಮೂಲಕ  ಹನ್ಸಿಕಾ ಮೋಟ್ವಾನಿ ಕಾಲಿವುಡ್ ಗೆ ಮತ್ತೆ ಕಂಬ್ಯಾಕ್ ಆಗಿದ್ದಾರೆ. ಕ್ರಿಕೆಟ್ ಶ್ರೀಶಾಂತ್ ವಿಲಾನ್ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಚಿತ್ರದ ಹೈಲೈಟ್ ಆಗಿದೆ. 
ಹನ್ಸಿಕಾ ಮೋಟ್ವಾನಿ,ಶ್ರೀಶಾಂತ್
ಹನ್ಸಿಕಾ ಮೋಟ್ವಾನಿ,ಶ್ರೀಶಾಂತ್

ಚೆನ್ನೈ: ಹರಿ ಹರೀಶ್ ನಿರ್ದೇಶನದ ಹಾರರ್- ಕಾಮಿಡಿ ಸಿನಿಮಾವೊಂದರ ಮೂಲಕ  ಹನ್ಸಿಕಾ ಮೋಟ್ವಾನಿ ಕಾಲಿವುಡ್ ಗೆ ಮತ್ತೆ ಕಂಬ್ಯಾಕ್ ಆಗಿದ್ದಾರೆ. ಕ್ರಿಕೆಟ್ ಶ್ರೀಶಾಂತ್ ವಿಲಾನ್ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಚಿತ್ರದ ಹೈಲೈಟ್ ಆಗಿದೆ. 

ಇನ್ನೂ ಹೆಸರಿಡದ  ಆಕ್ಸನ್ ಚಿತ್ರದಲ್ಲಿ ಮನೋರಂಜನೆ,  ಹಾಸ್ಯದ ಮಿಶ್ರಣವಿರಲಿದ್ದು,ಹನ್ಸಿಕಾ ಮೋಟ್ವಾನಿ ಅವರ ಸಾಹಸ ಪ್ರದರ್ಶನವಿರಲಿದೆ ಎಂಬುದು ತಿಳಿದುಬಂದಿದೆ. 

ಶ್ರೀ ವಾರಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಪಿ. ರಂಗನಾಥನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.  ಡಿಸೆಂಬರ್ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದ್ದು, 2020ರ ಬೇಸಿಗೆಗೆ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದೆ. 

ಅಥರ್ವಾ ಅವರ 100 ಸಿನಿಮಾದಲ್ಲಿ ಹನ್ಸಿಕಾ ಕೊನೆದಾಗಿ ಕಾಣಿಸಿಕೊಂಡಿದ್ದರು. ಮಹಾ, ಪಾರ್ಟರ್, ಹಾಗೂ ತೆನಾಲಿ ರಾಮಕೃಷ್ಣ ಬಿಎ ಬಿಎಲ್ ಚಿತ್ರಗಳಲ್ಲಿಯೂ ಹನ್ಸಿಕಾ ಮೋಟ್ವಾನಿ ಅಭಿನಯಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com