ಐಶಾನಿ ಶೆಟ್ಟಿ
ಸಿನಿಮಾ ಸುದ್ದಿ
'ಹೊಂದಿಸಿ ಬರೆಯುತ್ತಿದ್ದಾರೆ' ವಾಸ್ತು ಪ್ರಕಾರ ಬೆಡಗಿ ಐಶಾನಿ ಶೆಟ್ಟಿ
ಯೋಗರಾಜ್ ಭಟ್ ಅವರ ವಾಸ್ತು ಪ್ರಕಾರ ಚಿತ್ರದ ಹೀರೋಯಿನ್ ಐಶಾನಿ ಶೆಟ್ಟಿಯವರ ಮುಂದಿನ ಚಿತ್ರ ಹೊಂದಿಸಿ ಬರೆಯಿರಿ. ಜಗನ್ನಾಥ್ ಎಂಬ ಚೊಚ್ಚಲ ನಿರ್ದೇಶಕರ ಚಿತ್ರವಿದು.
ಯೋಗರಾಜ್ ಭಟ್ ಅವರ ವಾಸ್ತು ಪ್ರಕಾರ ಚಿತ್ರದ ಹೀರೋಯಿನ್ ಐಶಾನಿ ಶೆಟ್ಟಿಯವರ ಮುಂದಿನ ಚಿತ್ರ ಹೊಂದಿಸಿ ಬರೆಯಿರಿ. ಜಗನ್ನಾಥ್ ಎಂಬ ಚೊಚ್ಚಲ ನಿರ್ದೇಶಕರ ಚಿತ್ರವಿದು.
ಚಿತ್ರದ ಬಗ್ಗೆ ಮಾತನಾಡಿದ ಐಶಾನಿ ಶೆಟ್ಟಿ, ಒಂದಷ್ಟು ಸ್ನೇಹಿತರು ಮತ್ತು ಅವರ ಜೀವನ ಪಯಣದ ಕಥೆಯ ಚಿತ್ರವಿದು. ಇಲ್ಲಿ ಹೀರೋ-ಹಿರೋಯಿನ್ ಕಥೆಯಲ್ಲ, ಬದಲಿಗೆ ಹಲವು ಪಾತ್ರಗಳ ಸುಂದರ ಕಥೆ ಎಂದರು.
ಚಿತ್ರದ ಮುಹೂರ್ತ ನವೆಂಬರ್ 1ಕ್ಕೆ. ನಂತರ ಎರಡನೇ ವಾರದಲ್ಲಿ ಶೂಟಿಂಗ್ ಆರಂಭವಾಗಲಿದೆ.ಈ ಮಧ್ಯೆ ಐಶಾನಿ ಶೆಟ್ಟಿ ಅಭಿನಯದ ನಮ್ ಗಣಿ ಬಿ.ಕಾಂ ಪಾಸ್ ಚಿತ್ರ ಕೂಡ ನವೆಂಬರ್ ನಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಶ್ರೀಧರ್ ಷಣ್ಮುಖ ಅವರ ಧರಣಿ ಮಂಡಲ ಮಧ್ಯದೊಳಗೆ ಚಿತ್ರದಲ್ಲಿ ಕೂಡ ಐಶಾನಿ ಶೆಟ್ಟಿ ಅಭಿನಯಿಸುತ್ತಿದ್ದು ಅವರಿಗೆ ಗುಲ್ಟೂ ಸಿನಿಮಾ ಖ್ಯಾತಿಯ ನವೀನ್ ಶಂಕರ್ ಜೋಡಿಯಾಗಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ