'ಹುಟ್ಟು ಹಬ್ಬದ ಶುಭಾಶಯಗಳು' ಹೇಳುತ್ತಿದ್ದಾರೆ ನಟ ದಿಗಂತ್ 

ನಟ ದಿಗಂತ್ ಅಭಿನಯದ ಮುಂದಿನ ಚಿತ್ರ ಹುಟ್ಟು ಹಬ್ಬದ ಶುಭಾಶಯಗಳು. ಅದರಲ್ಲಿ ದಿಗಂತ್ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ದಿಗಂತ್
ದಿಗಂತ್
Updated on

ನಟ ದಿಗಂತ್ ಅಭಿನಯದ ಮುಂದಿನ ಚಿತ್ರ ಹುಟ್ಟು ಹಬ್ಬದ ಶುಭಾಶಯಗಳು. ಅದರಲ್ಲಿ ದಿಗಂತ್ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಗರಾಜ್ ಬೆತೂರ್ ನಿರ್ದೇಶನದ ಟಿ ಆರ್ ಚಂದ್ರಶೇಖರ್ ನಿರ್ಮಾಣದ ಚಿತ್ರ ಕ್ರಿಸ್ಟಲ್ ಪಾರ್ಕ್ ಸಿನೆಮಾಸ್ ಬ್ಯಾನರ್ ನಡಿ ನಿರ್ಮಾಣಗೊಳ್ಳುತ್ತಿದೆ. ಇಲ್ಲಿ ದಿಗಂತ್ ಅವರದ್ದು ನೆಗೆಟಿವ್ ಗುಣಗಳಿರುವ ನಾಯಕನ ಪಾತ್ರ.


ದೀಪಾವಳಿಗೆ ಚಿತ್ರತಂಡ ದಿಗಂತ್ ಅವರ ಲುಕ್ ನ್ನು ಬಿಡುಗಡೆ ಮಾಡಿದೆ. ಕಾಮಿಡಿ ಥ್ರಿಲ್ಲರ್ ಚಿತ್ರದಲ್ಲಿ ದಿಗಂತ್ ಅರ್ಜುನ್ ಆಗಿ ಅಭಿನಯಿಸುತ್ತಿದ್ದು ಅವರಿಗೆ ಕವಿತಾ ಗೌಡ ನಾಯಕಿ. 


ಚಿತ್ರದ ಇಡೀ ದೃಶ್ಯಗಳನ್ನು ರಾತ್ರಿ ಹೊತ್ತು ಚಿತ್ರೀಕರಿಸಬೇಕಂತೆ.ಹೀಗಾಗಿ ಇತ್ತೀಚೆಗೆ ಭಾರೀ ಮಳೆ ಬರುತ್ತಿರುವುದರಿಂದ ಚಿತ್ರೀಕರಣವನ್ನು ಈ ತಿಂಗಳಾಂತ್ಯಕ್ಕೆ ಮುಂದೂಡಲಾಗಿದೆ. 


ಚಿತ್ರಕ್ಕೆ ಆನಂದ್ ರಾಜ್ ವಿಕ್ರಮ್ ಸಂಗೀತ, ಅಭಿಲಾಷ್ ಕಲ್ಲಟಿ ಛಾಯಾಗ್ರಹಣವಿದೆ.ಈ ಮಧ್ಯೆ ದಿಗಂತ್ ಅವರು ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ, ಗಾಳಿಪಟ-2 ಮತ್ತು ವೇರ್ ಈಸ್ ಮೈ ಕನ್ನಡ ಚಿತ್ರಗಳಲ್ಲಿ ಕೂಡ ಅಭಿನಯಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com