ಮಧ್ಯಮ ವರ್ಗದ ಆಟೋ ಚಾಲಕನ ಜೀವನದ ಕಥೆ-ಕಪಟ ನಾಟಕ ಪಾತ್ರಧಾರಿ

ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ನಾಯಕನಾಗಿ ನಟಿಸಿರುವ ಕಪಟನಾಟಕ ಪಾತ್ರಧಾರಿ ಚಿತ್ರವೀಗ ಬಿಡುಗಡೆಯ ಹಂತದಲ್ಲಿದೆ. ಆಟೋ ಚಾಲಕರ ಜೀವನದ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಕಥೆ ಎಣೆಯಲಾಗಿದೆ.
ಕಪಟ ನಾಟಕ ಪಾತ್ರಧಾರಿ ಸಿನಿಮಾ ಸ್ಠಿಲ್
ಕಪಟ ನಾಟಕ ಪಾತ್ರಧಾರಿ ಸಿನಿಮಾ ಸ್ಠಿಲ್
Updated on

ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ನಾಯಕನಾಗಿ ನಟಿಸಿರುವ ಕಪಟನಾಟಕ ಪಾತ್ರಧಾರಿ ಚಿತ್ರವೀಗ ಬಿಡುಗಡೆಯ ಹಂತದಲ್ಲಿದೆ. ಆಟೋ ಚಾಲಕರ ಜೀವನದ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಕಥೆ ಎಣೆಯಲಾಗಿದೆ.

'ಕಪಟ ನಾಟಕ ಪಾತ್ರಧಾರಿ ನಿರ್ದೇಶಕ ಕ್ರಿಶ್ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕರಾಗಿದ್ದಾರೆ, ವಾರಾಂತ್ಯದಲ್ಲಿ ಶೂಟಿಂಗ್ ಮಾಡಬೇಕಾಗಿದ್ದರಿಂದ ಸಿನಿಮಾ ಹೆಚ್ಚಿನ ಸಮಯ ತೆಗೆದುಕೊಂಡಿತು ಎಂದು ಹೇಳಿರುವ ಕ್ರಿಶ್ ಸೋಮವಾರ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದ್ದಾರೆ.

ಸಿನಿಮಾ ಯು/ಎ ಪ್ರಮಾಣ ಪತ್ರ ಸಿಕ್ಕಿದ್ದು, ಆಟೋ ಚಾಲಕರ ಜೀವನದ ಜೊತೆಗೆ ಅವರ ಲವ್ ಸ್ಟೋರಿಯನ್ನು ಈ ಕಥೆ ಹೊಂದಿದೆ, ಜೊತೆಗೆ ಸಸ್ಪೆನ್ಸ್ ಮತ್ತು ಹಾರರ್ ಮಿಶ್ರಣವೂ ಇದೆ, 

ಸಿನಿಮಾದಲ್ಲಿ ಕಮರ್ಷಿಯಲ್ ವಸ್ತುವಿನ ಮಹತ್ವದ ಬಗ್ಗೆ ನನ್ನ ಸ್ನೇಹಿತರು ನನಗೆ ತಿಳಿಸಿದ್ದಾರೆ. ಸಿನಿಮಾದಲ್ಲಿ ಮಧ್ಯಮವರ್ಗದ ಜೀವನದ ಮೌಲ್ಯಗಳಿವೆ, ಆಟೋ ಚಾಲಕ ಮತ್ತು ಗಾರ್ಮೆಂಟ್ಸ್  ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಹುಡುಗಿಯ ಪ್ರೇಮ ಕಥೆ ಇದಾಗಿದೆ, ಇಬ್ಬರು ಜೀವನದಲ್ಲಿ ಎದುರಿಸುವ ಕಠಿಣ ಸವಾಲುಗಳು, ಅನಿರೀಕ್ಷಿತವಾಗಿ ಎದುರಾಗುವ ಸಮಸ್ಯೆಗಳು ಚಿತ್ರದ ಜೀವಾಳ ಎಂದು ನಿರ್ದೇಶಕ ಕ್ರಿಶ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com