ಇನ್‌ಸ್ಟಾಗ್ರಾಮ್ ಗೆ ಎಂಟ್ರಿ ಕೊಟ್ಟ 'ಚಿನ್ನಾರಿ ಮುತ್ತ'

ಸ್ಯಾಂಡಲ್ ವುಡ್  ನಾಯಕ ನಟ ವಿಜಯ ರಾಘವೇಂದ್ರರವರು ಇದೀಗ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ನಲ್ಲಿ ಖಾತೆ ತೆರೆದಿದ್ದಾರೆ 
ವಿಜಯ ರಾಘವೇಂದ್ರ
ವಿಜಯ ರಾಘವೇಂದ್ರ

ಕೆಲವು ತಿಂಗಳ ಹಿಂದೆ ಮುಹೂರ್ತ ಆಚರಿಸಿಕೊಂಡಿದ್ದ ವಿಜಯ ರಾಘವೇಂದ್ರ ಅಭಿನನಯದ ’ಮಾಲ್ಗುಡಿ ಡೇಸ್ ಚಿತ್ರತಂಡ ಸದ್ದಿಲ್ಲದೆ ಚಿತ್ರೀಕರಣವನ್ನು ಮುಗಿಸಿದೆ ಜೊತೆಗೆ ಮಾತಿನ ಜೋಡಣೆಯನ್ನೂ ಮುಗಿಸಿ ಆದಷ್ಟು ಬೇಗ ತೆರೆಗೆ ಬರಲು ಯೋಜನೆ ರೂಪಿಸಿದೆ ಏತನ್ಮಧ್ಯೆ ಮಾಲ್ಗುಡಿ ಡೇಸ್ ಚಿತ್ರಿಕರಣವನ್ನು ಮುಗಿಸಿ ಜಿ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿರುವ ವಿಜಯ ರಾಘವೇಂದ್ರರವರು ಇದೀಗ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ನಲ್ಲಿ ಖಾತೆ ತೆರೆದಿದ್ದಾರೆ 

ಅಧಿಕೃತವಾಗಿ ಇನ್‌ಸ್ಟಾಗ್ರಾಮ್ ಖಾತೆ ಅನ್ನು ನಾನೇ ನಿರ್ವಹಿಸುತ್ತಿದ್ದು ಇದರಿಂದ ಅಭಿಮಾನಿಗಳ ಜೊತೆ ನೇರ ಸಂಪರ್ಕ ಸಾಧ್ಯವಾಗುತ್ತದೆ ಅಲ್ಲದೆ ಇತ್ತಿಚಿನ ದಿನಗಳಲ್ಲಿ ಕಲಾವಿದರಾಗಿ ನಮ್ಮೆಲ್ಲ ದಿನ ನಿತ್ಯದ ಆಗು ಹೋಗುಗಳ ವಿಚಾರ ತಿಳಿಯಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುತ್ತಾರೆ ಹಾಗಾಗಿ ಇನ್‌ಸ್ಟಾಗ್ರಾಮ್ ಗೆ ಬಂದೆ "ಎಂದಿದ್ದಾರೆ 

ಚಿನ್ನಾರಿ ಮುತ್ತ ಇನ್ನು ಮಾಲ್ಗುಡಿ ಡೇಸ್ ಸಿನಿಮಾದ ಮೇಲಿನ ಕುತೂಹಲ ಹೆಚ್ಚಾಗಿದ್ದು ವಿಜಯ ರಾಘವೇಂದ್ರರವರ ಜೀವನದಲ್ಲಿ ಒಂದು ಮೈಲಿಗಲ್ಲು ಆಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿದೆ ವಿಜಯ ರಾಘವೇಂದ್ರ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದು ಅವರಿಗೆ ಜೋಡಿಯಾಗಿ ಗ್ರೀಷ್ಮ ಶ್ರೀಧರ್ ಅಭಿಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com