'ಪೊಗರು' ನಲ್ಲಿ ನನ್ನದು ನಟೋರಿಯಸ್ ಕ್ಯಾರೆಕ್ಟರ್: ಧ್ರುವ ಸರ್ಜಾ

"ಅದ್ದೂರಿ", "ಬಹದ್ದೂರ್" ಹಾಗೂ "ಭರ್ಜರಿ" ಚಿತ್ರಗಳ ಹ್ಯಾಟ್ರಿಕ್ ಯಶಸ್ಸಿನ ಬಳಿಕ ಸರ್ಜಾ ಫ್ಯಾಮಿಲಿ ಕುಡಿ ಧ್ರುವ ಸರ್ಜಾ ವರೀಗ "ಪೊಗರು" ಮೂಲಕ ಮತ್ತೊಮ್ಮೆ ತೆರೆ ಮೇಲೆ ಅಬ್ಬರಿಸಲು ಬರುತ್ತಿದ್ದಾರೆ.
ಪೊಗರು
ಪೊಗರು
"ಅದ್ದೂರಿ", "ಬಹದ್ದೂರ್" ಹಾಗೂ "ಭರ್ಜರಿ" ಚಿತ್ರಗಳ ಹ್ಯಾಟ್ರಿಕ್ ಯಶಸ್ಸಿನ ಬಳಿಕ ಸರ್ಜಾ ಫ್ಯಾಮಿಲಿ ಕುಡಿ ಧ್ರುವ ಸರ್ಜಾ ವರೀಗ "ಪೊಗರು" ಮೂಲಕ ಮತ್ತೊಮ್ಮೆ ತೆರೆ ಮೇಲೆ ಅಬ್ಬರಿಸಲು ಬರುತ್ತಿದ್ದಾರೆ.
:ಇದೀಗ ನನ್ನ ನಾಲ್ಕನೇ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದರೂ ಸಹ ನನ್ನ ಪಾಲಿಗಿದು ನನ್ನ ಮೊದಲ ಚಿತ್ರ ಎಂಬಂತೆ ಭಾಸವಾಗುತ್ತಿದೆ" ಸರ್ಜಾ ಹೇಳಿದ್ದಾರೆ. "ಪೊಗರು" ಚಿತ್ರಕ್ಕೆ ನಂದಕಿಶೋರ್ ಆಕ್ಷನ್ ಕಟ್ ಹೇಳಿದ್ದು ಬಿಕೆ ಗಂಗಾಧರ್ ನಿರ್ಮಾಣ ಮಾಡುತ್ತಿದ್ದಾರೆ.
"ಚಿತ್ರದ ನಾಯಕ ನಿಜಕ್ಕೂ ಒಬ್ಬ ನಟೋರಿಯಸ್ ಪಾತ್ರ. ಮೊದಲ ಶೆಡ್ಯೂಲ್ ಚಿತ್ರೀಕರಣ ಮಾಡುವ ವೇಳೆ ಈ ಪಾತ್ರ ಮಾಡಲು ನನಗೆ ಭಯವಾಗಿತ್ತು. ಈ ಬಗ್ಗೆ ನಾನು ನಿರ್ದೇಶಕರಲ್ಲಿ ಕೂಡ ಚರ್ಚಿಸಿದೆ. ಇಂತಹಾ ಒಬ್ಬ ವ್ಯಕ್ತಿ ಈ ಭೂಮಿಯಲ್ಲಿ ಇರುವುದಕ್ಕೆ ಸಾಧ್ಯವೆ ಎಂದು ಪ್ರಶ್ನಿಸಿದ್ದೆ" 
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೂನ್ 30ರಂದು ಹೈದರಾಬಾದ್ ಗೆ ಚಿತ್ರತಂಡದವರೊಡನೆ ತೆರಳುವವರಿದ್ದು ಅಲ್ಲಿ ಜುಲೈ  3ರಿಂದ ಚಿತ್ರೀಕರಣ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ.
"ನಾನು ನನ್ನ ಚೊಚ್ಚಲ ಚಿತ್ರ "ಅದ್ದೂರಿ" ಶೂಟಿಂಗ್ ನಡೆಸುವ ವೇಳೆ ಅನುಭವಿಸಿದ ಅದೇ ಭಾವನೆಗಳನ್ನು ಈಗಲೂ ಹೊಂದಿದ್ದೇನೆ. ಇದೊಂದು ಕೌಟುಂಬಿಕ, ಆಕ್ಷನ್ ಮನರಂಜನಾ ಚಿತ್ರ. ಈ ಪಾತ್ರ ನನ್ನ ಪಾಲಿಗೆ ಅತ್ಯಂತ ಹೊಸದಾಗಿದೆ.ಪ್ರೇಕ್ಷಕರು ಸಹ ಇದುವರೆಗೆ ನನ್ನನ್ನು ಇಂತಹಾ ಪಾತ್ರಗಳಲ್ಲಿ ನೋಡಿರಲು ಸಾಧ್ಯವಿಲ್ಲ. ಪೊಗರು ಚಿತ್ರದ ನನ್ನ ಪಾತ್ರ ನನಗೆ ಸವಾಲಿನದ್ದಾಗಿದೆ." ಅವರು ಹೇಳಿದ್ದಾರೆ.
ಮುಂದಿನ ಹಂತದ ಚಿತ್ರೀಕರಣ ಹೈದರಾಬ್ದ್, ವಿಶಾಖಪಟ್ಟಣಂ ಹಾಗೂ ಬೆಂಗಳೂರಿನಲ್ಲಿ ಅಂದಾಜು 50 ದಿನಗಳ ಕಾಲ ನಡೆಸಲು ಚಿತ್ರತಂಡ ತೀರ್ಮಾನಿಸಿದೆ.ಇದರಲ್ಲಿ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಹದಿನೈದು ದಿನಗಳ ಕಾಲ ಚಿತ್ರೀಕರಣ ನಡೆಅಲಿದೆ. 
ನಾಯಕ ನಟ "ಪೊಗರು" ಚಿತ್ರಕ್ಕಾಗಿ ಗಡ್ಡ ಮತ್ತು ಉದ್ದನೆಯ ಕೂದಲನ್ನು ಬಹಳ ಸಮಯದಿಂದ ಕಾಪಾಡಿಕೊಂಡಿದ್ದಾರೆ.ಕಾಲೇಜು ಹುಡುಗ, ಶಾಲಾ ವಿದ್ಯಾರ್ಥಿಯ ಪಾತ್ರ ಮಾಡಲು ಅವರು 30 ಕೆಜಿ ತೂಕ ಇಳಿಸಿಕೊಂಡಿದ್ದಾರೆ.ಆ ನಂತರ ತೂಕವನ್ನು ಮತ್ತೆ ಮರಳಿ ಪಡೆಯಲು ಸಮಯ ಹಿಡಿದಿತ್ತು.
"ಪೊಗರು" ಚಿತ್ರದಲ್ಲಿ ಧ್ರುವ ಸರ್ಜಾ ಅವರಿಗೆ ನಾಯಕಿಯಾಗಿ ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ ಇದ್ದಾರೆ. ಧನಂಜಯ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ  ರವಿಶಂಕರ್, ಸಾಧು ಕೋಕಿಲಾ, ಚಿಕ್ಕಣ್ಣ ಮತ್ತು
ಕುರಿ ಪ್ರತಾಪ್.ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ವಿ ಹರಿರಿಕೃಷ್ಣ ಸಂಗೀತ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com