ಕೊರೋನಾ ವಿರುದ್ಧ ಹೋರಾಟಕ್ಕೆ 10 ಲಕ್ಷ ನೆರವಿತ್ತ ಗಾಯಕ ವಿಜಯ್ ಪ್ರಕಾಶ್

ಎಲ್ಲೆಲ್ಲೂ ಈಗ ಕೊರೋನಾ ಹಾವಳಿಯದೇ ಸುದ್ದಿ, ದೇಶಾದ್ಯಂತ ಕೊರೋನಾ ಹರಡುವಿಕೆ ತಡೆಗೆ ಲಾಕ್ ಡೌನ್ ಮಾಡಲಾಗಿದ್ದು ಚಿತ್ರರಂಗದ ಗಣ್ಯಾತಿಗಣ್ಯರು ಮನೆಗಳಲ್ಲೇ ಉಳಿಯುವಂತಾಗಿದೆ. ಇನ್ನು ಅನೇಕ ನಟ, ನಿರ್ಮಾಪಕರು ದೇಶದ ಈ ಸಂಕಷ್ಟ ಪರಿಸ್ಥಿತಿಗೆ ನೆರವಾಗಲು ಮುಂದೆ ಬಂದಿದ್ದಾರೆ. ಇದರಲ್ಲಿ ಕನ್ನಡದ ಹೆಸರಾಂತ ಗಾಯಕ ವಿಜಯ್ ಪ್ರಕಾಶ್ ಸಹ ಒಬ್ಬರು. ಗಾಯಕ ವಿಜಯ್ ಪ್ರಕಾಶ್ ತಾವು ಮುಖ್
ಗಾಯಕ ವಿಜಯ್ ಪ್ರಕಾಶ್
ಗಾಯಕ ವಿಜಯ್ ಪ್ರಕಾಶ್

ಎಲ್ಲೆಲ್ಲೂ ಈಗ ಕೊರೋನಾ ಹಾವಳಿಯದೇ ಸುದ್ದಿ, ದೇಶಾದ್ಯಂತ ಕೊರೋನಾ ಹರಡುವಿಕೆ ತಡೆಗೆ ಲಾಕ್ ಡೌನ್ ಮಾಡಲಾಗಿದ್ದು ಚಿತ್ರರಂಗದ ಗಣ್ಯಾತಿಗಣ್ಯರು ಮನೆಗಳಲ್ಲೇ ಉಳಿಯುವಂತಾಗಿದೆ. ಇನ್ನು ಅನೇಕ ನಟ, ನಿರ್ಮಾಪಕರು ದೇಶದ ಈ ಸಂಕಷ್ಟ ಪರಿಸ್ಥಿತಿಗೆ ನೆರವಾಗಲು ಮುಂದೆ ಬಂದಿದ್ದಾರೆ. ಇದರಲ್ಲಿ ಕನ್ನಡದ ಹೆಸರಾಂತ ಗಾಯಕ ವಿಜಯ್ ಪ್ರಕಾಶ್ ಸಹ ಒಬ್ಬರು. ಗಾಯಕ ವಿಜಯ್ ಪ್ರಕಾಶ್ ತಾವು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹತ್ತು ಲಕ್ಷ ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

"ಕೆರೆಯ ನೀರನು ಕೆರೆಗೆ ಚೆಲ್ಲೀ ವರವ ಪಡೆದವರಂತೆ ಕಾಣಿರೊ. ಜನರು ನನಗೆ ನೀಡಿರುವ ಪ್ರೀತಿಯ ಬೊಗಸೆಯಿಂದ ಚಿಕ್ಕ ಸೇವೇ. ನಾವೆಲ್ಲರೊ ಕೈ ಜೋಡಿಸಿದರೇ ಕರೊನಾ ನ ಗೆಲ್ಲಬಹುದು." ಎ<ದು ಟ್ವೀಟ್ ಮಾಡಿರುವ ವಿಜಯ್ ಪ್ರಕಾಶ್ ಪಿಎಂ ಪ್ರೈಹಾರ ನಿಧಿ ಹಾಗೂ ಇನ್ನೂ ಕೆಲ ರಾಜ್ಯಗಳ ಪರಿಹಾರ ನಿಧಿಗೆ ಸಹ ಒಂದು ಅಳಿಲು ದೇಣಿಗೆ ನಿಡಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ಈ ಸಮಯದಲ್ಲಿ ನಾವೆಲ್ಲರೂ ಕೈಜೋಡಿಸಿ ನಿಂತರೆ ಕೊರೋನಾ ಮಹಾಮಾರಿಯನ್ನು ಗೆದ್ದು ಮೊದಲಿನಂತೆಯೇ ಸಮಾಯಜದಲ್ಲಿ ಸುಖವಾಗಿ, ಸಂತೋಷವಾಗಿ ಬದುಕಲು ಸಾಧ್ಯ ಎಂದು ಸಹ ವಿಜಯ್ ಪ್ರಕಾಶ್ ನುಡಿದಿದ್ದಾರೆ.

ಇತ್ತ ಸಿಎಂ ಬಿಎಸ್ ಯಡಿಯೂರಪ್ಪ ಗಾಯಕ ವಿಜಯ್ ಪ್ರಕಾಶ್ ಹಾಗೂ ಇತರರಿಗೆ 'ಮುಖ್ಯಮಂತ್ರಿ ಪರಿಹಾರ ನಿಧಿ'ಗೆ ದೇಣಿಗೆ ನೀಡಿ ಕೋವಿಡ್ ಹೋರಾಟಕ್ಕೆ ಕೈಜೋಡಿಸಿರುವ ಎಲ್ಲರಿಗೆ ಧನ್ಯವಾದ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com