ಅರ್ಜುನ್ ಜನ್ಯಾ ಮತ್ತು ವಿಜಯ ಪ್ರಕಾಶ್ ಜತೆಸೇರಿ 'ಲಾಕ್ ಡೌನ್' ಟೈಮಲ್ಲಿ ಮ್ಯೂಸಿಕಲ್ ಟ್ರ್ಯಾಕ್ ತಯಾರಿಗಿಳಿದ ಭಟ್ರು!

ಕೋವಿಡ್ ಲಾಕ್‌ಡೌನ್ ನಡುವೆಯೇ ನಿರ್ದೇಶಕ ಯೋಗರಾಜ್ ಭಟ್, ಸಂಗೀತ ಸಂಯೋಜಕ ಅರ್ಜುನ್ ಜನ್ಯಾ ಮತ್ತು ಗಾಯಕ ವಿಜಯ್ ಪ್ರಕಾಶ್  ಮೂವರೂ ಸೇರಿ ಮ್ಯೂಸಿಕ್ ವಿಡಿಯೋ ಒಂದನ್ನು ಬಿಡುಗಡೆ ಮಾಡಲು ಸಿದ್ದವಾಗಿದ್ದಾರೆ.
ಅರ್ಜುನ್ ಜನ್ಯಾ ಮತ್ತು ವಿಜಯ ಪ್ರಕಾಶ್ ಜತೆಸೇರಿ ಲಾಕ್ ಡೌನ್ ಟೈಮಲ್ಲಿ ಮ್ಯೂಸಿಕಲ್ ಟ್ರ್ಯಾಕ್ ತಯಾರಿಗಿಳಿದ ಭಟ್ರು
ಅರ್ಜುನ್ ಜನ್ಯಾ ಮತ್ತು ವಿಜಯ ಪ್ರಕಾಶ್ ಜತೆಸೇರಿ ಲಾಕ್ ಡೌನ್ ಟೈಮಲ್ಲಿ ಮ್ಯೂಸಿಕಲ್ ಟ್ರ್ಯಾಕ್ ತಯಾರಿಗಿಳಿದ ಭಟ್ರು
Updated on: 

ಕೋವಿಡ್ ಲಾಕ್‌ಡೌನ್ ನಡುವೆಯೇ ನಿರ್ದೇಶಕ ಯೋಗರಾಜ್ ಭಟ್, ಸಂಗೀತ ಸಂಯೋಜಕ ಅರ್ಜುನ್ ಜನ್ಯಾ ಮತ್ತು ಗಾಯಕ ವಿಜಯ್ ಪ್ರಕಾಶ್  ಮೂವರೂ ಸೇರಿ ಮ್ಯೂಸಿಕ್ ವಿಡಿಯೋ ಒಂದನ್ನು ಬಿಡುಗಡೆ ಮಾಡಲು ಸಿದ್ದವಾಗಿದ್ದಾರೆ. ಈ  ಟ್ರ್ಯಾಕ್ ಲಾಕ್‌ಡೌನ್ ಅವಧಿಯಲ್ಲಿ ಗಾರ್ಡನ್ ಸಿಟಿಯ ಒನ್ ಲುಕ್ ಅನ್ನು ಅನಾವರಣಗೊಳಿಸಲಿದೆ.

ಸಂಗೀತಕ್ಕೆ ಎಂದಿಗೂ ಬೇಡಿಕೆ ಇದೆ ಎಂಬ ಕಾರಣಕ್ಕೆ ಈ ಹಾಡಿನ ಚಿತ್ರೀಕರಣ ಮಾಡಲು ತೀರ್ಮಾನಿಸಲಾಗಿದೆ. . ಗೀತರಚನೆಕಾರನಾಗಿ ಅಷ್ಟೇ ಜನಪ್ರಿಯವಾಗಿರುವ ಮುಂಗಾರು ಮಳೆ, ಗಾಳಿಪಟ ಖ್ಯಾತಿಯ  ನಿರ್ದೇಶಕರು ಈ ಹಾಡನ್ನು ಬರೆಯಲು ಪ್ರಾರಂಭಿಸಿದ್ದಾರೆ ಮತ್ತು ಅವರ ಪಂಚ್ ಲೈನ್ ಗಳು ಇದರಲ್ಲಿದೆ ಎಂದು ಬಿಡಿಸಿ ಹೇಳಬೇಕಿಲ್ಲವಷ್ಟೆ?

ಸಂಗೀತ ನಿರ್ದೇಶಕ  ಜನ್ಯಾ ಹಾಗೂ ಗಾಯಕ ವಿಜಯ್ ಪ್ರಕಾಶ್ ಶೀಘ್ರವೇ ಭಟ್ರ ಜತೆ ಕೈ ಸೇರಿಸಲಿದ್ದಾರೆ. ಇದಲ್ಲದೆ, ಯೋಗರಾಜ್ ಭಟ್ "ಗಾಳಿಪಟ 2" ಚಿತ್ರದ ಶೂಟಿಂಗ್ ನಡೆಸುತ್ತಿದ್ದು, ರಮೇಶ್ ರೆಡ್ಡಿ ನಿರ್ಮಿಸಿದ ಈ ಚಿತ್ರದಲ್ಲಿ ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಚಿತ್ರದ ನಿರ್ಣಾಯಕ ಭಾಗದ ಶೂಟಿಂಗ್ ಮುಗಿದಿದ್ದು ದೂರ ಪ್ರದೇಶದ ಶೂಟಿಂಗ್ ಅಷ್ಟೇ ಬಾಕಿ ಉಳಿದಿದೆ. ಆದರೆ ಈಗ ಲಾಕ್ ಡೌನ್ ಆಗಿರುವ ಕಾರಣ ಶೂಟಿಂಗ್ ಮುಂದೂಡಲ್ಪಟ್ಟಿದೆ.

ಗಾಳಿಪಟ 2 ಯೋಗರಾಜ್ ಭಟ್ ಮತ್ತು ಸಂಗೀತ ಸಂಯೋಜಕ ಅರ್ಜುನ್ ಜನ್ಯಾ ಅವರನ್ನು ಮೊದಲ ಬಾರಿಗೆ ಒಟ್ಟಿಗೆ ಸೇರಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com