'ದಿಯಾ' ನಾಯಕ ಪ್ರಥ್ವಿ ಕಥೆಗೆ ಆಕ್ಷನ್ ಕಟ್ ಹೇಳಲಿರುವ ದರ್ಶನ್ ಅಪೂರ್ವ

ದಿಯಾ ನಂತರ ಆದಿ ಎಂದೇ ಖ್ಯಾತವಾಗಿರುವ ನಟ ಪೃಥ್ವಿ ಅಂಬರ್ ಪ್ರಸ್ತುತ ತಮ್ಮ ಬರವಣಿಗೆಯ ಕೌಶಲ್ಯ ಅಭಿವೃದ್ದಿಯತ್ತ ಗಮನ ಹರಿಸಿದ್ದಾರೆ.
ದರ್ಶನ್ ಅಪೂರ್ವಾ
ದರ್ಶನ್ ಅಪೂರ್ವಾ

ದಿಯಾ ನಂತರ ಆದಿ ಎಂದೇ ಖ್ಯಾತವಾಗಿರುವ ನಟ ಪೃಥ್ವಿ ಅಂಬರ್ ಪ್ರಸ್ತುತ ತಮ್ಮ ಬರವಣಿಗೆಯ ಕೌಶಲ್ಯ ಅಭಿವೃದ್ದಿಯತ್ತ ಗಮನ ಹರಿಸಿದ್ದಾರೆ. ಲಾಕ್‌ಡೌನ್ ವೇಳೆ ತಮ್ಮ ಊರು ಕಾಸರಗೋಡಿನಲ್ಲಿರುವ ಅವರು ನವೀನ್ ದ್ವಾರಕನಾಥ್ ನಿರ್ದೇಶಿಸಲಿರುವ ಫಾರ್ ರೆಗ್ ಎಂಬ ಕಾಮಿಡಿ ಫ್ಯಾಮಿಲಿ ಎಂಟರ್ಟೈನರ್ ನಲ್ಲಿ ಕಾಣಿಸಿಕೊಳ್ಲುತ್ತಿದ್ದಾರೆ. ಇದಾದ ನಂತರ ಅವರು ಹೊಸ ಯೋಜನೆ ಪ್ರಾರಂಭಿಸಲಿದ್ದು ಅದೊಂದು ಲವ್ ಡ್ರಾಮಾ ಆಗಿರಲಿದೆಯಂತೆ. ಅಪೂರ್ವ ಈ ಚಿತ್ರದ ನಿರ್ದೇಶಕರಾಗಲಿದ್ದಾರೆ. 6-5=2 ಮತ್ತು ದಿಯಾ ಚಿತ್ರಗಳಲ್ಲಿ ನಿರ್ದೇಶಕ ಕೆ.ಎಸ್.ಅಶೋಕ ಜತೆ ಕೆಲಸ ಮಾಡಿದ್ದ ಅಪೂರ್ವ ಪಾಲಿಗಿದು ಮೊದಲ ಸ್ವತಂತ್ರ ನಿರ್ದೇಶನದ ಚಿತ್ರವಾಗಿರಲಿದೆ.

ಇನ್ನು ಈ ಚಿತ್ರವು ಅಶೋಕ ನಿರ್ದೇಶನದ ಪ್ರಮುಖ ಪಾತ್ರಗಳಾದ ದಿಯಾ ಮತ್ತು ಆದಿಯನ್ನು ಮತ್ತೆ ಬೆಳ್ಳಿತೆರೆ ಮೇಲೆ ತರುವ ಸಾಧ್ಯತೆ ಇದೆ. ಇತೀಚೆಗೆ ಕೇಳಿಬಂದ್ಂತೆ ಖುಷಿ ಪ್ರಥ್ವಿಗೆ ಜೋಡಿಯಾಗಲಿದ್ದಾರೆ.  ಆದರೆ, ಈ ಬಗ್ಗೆ ಪೃಥ್ವಿ  ಹೇಳುವುದು ಹೀಗಿದೆ- “ಪ್ರಸ್ತುತ, ನಾನು ಬರವಣಿಗೆಯನ್ನು ಮಾಡುತ್ತಿದ್ದೇನೆ.  ಇದು ನನ್ನ ಕಥೆ, ಮತ್ತು ದರ್ಶನ್ ಅಪೂರ್ವ ಮತ್ತು ನಾನು ಕುಳಿತು ಚಿತ್ರಕಥೆ ಮಾಡುತ್ತಿದ್ದೇವೆ. ಉದ್ಯಮದ ಭಾಗವಾಗಿರುವ ಸ್ನೇಹಿತರ ಗುಂಪಿನಿಂದ ಹೂಡಿಕೆ ಮಾಡಿಸಿ ಚಿತ್ರವನ್ನು ನಿರ್ಮಿಸಲಾಗುವುದು. ದಿಯಾದಲ್ಲಿ ಖುಷಿ ಹಾಗೂ ನನ್ನ ಜೋಡಿಯನ್ನು ನೋಡಿದ್ದ ವೀಕ್ಷಕರು ಮತ್ತೊಮ್ಮೆ ನಾವಿಬ್ಬರೂ ತೆರೆಮೇಲೆ ಒಟ್ತಾಗಿ ಕಾಣಿಸಿಕೊಳ್ಳಬೇಕೆಂದು ಬಯಸಿದ್ದಾರೆ. ನಾವಿಬ್ಬರೂ ಸಹ ಅಷ್ಟೇ ಉತ್ಸುಕರಾಗಿದ್ದೇವೆ. ಹೇಗಾದರೂ, ನಾವು ಲಾಕ್ ಡೌನ್ ಮುಗಿದ ನಂತರ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರುತ್ತೇವೆ"

ತುಳು ಚಿತ್ರೋತ್ಸವದಲ್ಲಿ  ಪ್ರಸಿದ್ಧ ಹೆಸರಾಗಿರುವ ಈ ನಟ ಪ್ರಸಿದ್ಧ ಹೆಸರಾಗಿರುವ ಈ ನಟಜನೆಯ ಕಥೆ ದಿಯಾ ಮತ್ತು ಫಾರ್ ರೆಗ್‌ ಗಳಿಗೆ ವ್ಯತಿರಿಕ್ತವಾಗಿರಲಿದೆ. “ಇದು ಥ್ರಿಲ್ಲರ್‌ನ ಅಂಶಗಳೊಂದಿಗೆ ಬರುವ ವಿಶಿಷ್ಟ ಪ್ರೇಮಕಥೆಯಾಗಲಿದೆ. ಇಡೀ ಚಿತ್ರವು ಕಾಪುವಿನಲ್ಲಿ ಶೂಟಿಂಗ್ ಮಾಡಲಾಗುತ್ತದೆ ನಾವು ಕರಾವಳಿ ಪ್ರದೇಶದ ಸ್ಥಳೀಯ ಉಡುಪಿ ಆಸುಪಾಸಿನ ಭಾಷೆಯನ್ನು ಬಳಸಲಿದ್ದೇವೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು  ಎಲ್ಲವೂ ಯೋಜನೆಯಂತೆ ನಡೆದರೆ, ಆಗಸ್ಟ್‌ನಲ್ಲಿ ಶೂಟಿಂಗ್ ಪ್ರಾರಂಭಿಸಲು ನಾವು ಯೋಜಿಸುತ್ತಿದ್ದೇವೆ,” ಎಂದು ಅವರು ಹೇಳುತ್ತಾರೆ.

“ನಾನು ನನ್ನ ಸ್ನಾತಕೋತ್ತರ ಶಿಕ್ಷಣವನ್ನು ಮಾಡುವಾಗ ನಿರ್ದೇಶನದತ್ತ ಆಸಕ್ತಿ ತಳೆದೆ. ಉತ್ತಮ ಚಲನಚಿತ್ರಗಳನ್ನು ಮಾಡಬೇಕೆಂದು ಯೋಚಿಸಿದೆ. ನಾನು ನಟನಾಗುತ್ತೇನೆ ಎಂದು ನಾನು ಎಂದೂ ಭಾವಿಸಿರಲಿಲ್ಲ. 

“ಮೊದಲಿಗೆ, ನಾನು ಡ್ಯಾನ್ಸರ್ ಆಗಿದ್ದೆ. ಕ್ಯಾಮೆರಾವನ್ನು ಎದುರಿಸುವ ವಿಶ್ವಾಸವಿದೆ ಎಂದು ನಾನು ಭಾವಿಸಿದಾಗ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳಲು ತೊಡಗಿದೆ. ನಾನು ಕಲಾವಿದನಾಗಿ ರೂಪುಗೊಂಡಿದ್ದಾದರೂ ಮನಸ್ಸಿನಲ್ಲಿ ನಿರ್ದೇಶಕನಾಗಲು ಹಂಬಲವಿದೆ.  ಆದರೆ ತಕ್ಷಣವೇ ಅಲ್ಲ. ನನ್ನ ಪ್ರಸ್ತುತ ಗಮನವು ನಟನೆಯ ಮೇಲಿದ್ದು . ಮಾಸ್ ಕಮ್ಯುನಿಕೇಷನ್ ನಾನು ಅಧ್ಯಯನ ಮಾಡಿದ ವಿಷಯವಾಗಿರುವುದರಿಂದ ಮತ್ತು ನನ್ನ ಕೊನೆಯ ಸೆಮಿಸ್ಟರ್‌ನಲ್ಲಿ ಚಲನಚಿತ್ರಗಳ ವಿಚಾರವೂ ಬಂದಿತ್ತು" ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com