ನಟಿ ತೇಜಸ್ವಿನಿ ಪ್ರಕಾಶ್ ಗೆ ಪಿತೃ ವಿಯೋಗ

ಕನ್ನಡದ ಪ್ರಸಿದ್ದ ನಟಿಯರಲ್ಲಿ ಒಬ್ಬರಾದ ತೇಜಸ್ವಿನಿ ಪ್ರಕಾಶ್ ಅವರ ತಂದೆ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ.
ತೇಜಸ್ವಿನಿ ಪ್ರಕಾಶ್
ತೇಜಸ್ವಿನಿ ಪ್ರಕಾಶ್
Updated on

ಕನ್ನಡದ ಪ್ರಸಿದ್ದ ನಟಿಯರಲ್ಲಿ ಒಬ್ಬರಾದ ತೇಜಸ್ವಿನಿ ಪ್ರಕಾಶ್ ಅವರ ತಂದೆ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ.

ತಂದೆ ಸಾವಿನಿಂದ ದುಃಖಿತರಾಗಿರುವ ನಟಿ ತೇಜಸ್ವಿನಿ ಫೇಸ್‌ಬುಕ್‍ನಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದು RIP appa ಎಂದಿದ್ದಾರೆ.

ಇನ್ನು ದರ್ಶನ್ ಅಭಿನಯದ "ರಾಬರ್ಟ್" ಚಿತ್ರದಲ್ಲಿ ನಟಿಸುತ್ತಿರುವ ತೇಜಸ್ವಿನಿಯವರು ಈ ಹಿಂದೆ 2008ರಲ್ಲಿ ತೆರೆಕಂಡ "ಗಜ" ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದರು. ಇಷ್ಟು ಮಾತ್ರವಲ್ಲದೆ “ಮಾತಾಡ್‌ ಮಾತಾಡ್‌ ಮಲ್ಲಿಗೆ’, “ಪ್ರೀತಿ ಏಕೆ ಭೂಮಿ ಮೇಲಿದೆ’, “ಅರಮನೆ’  ಇವೇ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನೆಮಾತಾಗಿದ್ದಾರೆ.

Follow KannadaPrabha channel on WhatsApp

Download the KannadaPrabha News app to follow the latest news updates

Subscribe and Receive exclusive content and updates on your favorite topics

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com