'ಬ್ಲ್ಯಾಕ್ ಅಂಡ್ ವೈಟ್' ಮೂಲಕ ನಟ ಕಿಶೋರ್ ನಿರ್ದೇಶನಕ್ಕೆ!

"ಬ್ಲಾಕ್ ಆಂಡ್ ವೈಟ್" ಚಿತ್ರ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಗೆ ಸಿದ್ದವಾಗಿದ್ದು  ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಮಾಡಿದ ದ್ವಿಭಾಷಾ ಚಿತ್ರವಿದಾಗಿದೆ. ನಟ ಕಿಶೋರ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶನದ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರ ತೆಲುಗಿನಲ್ಲಿಯೂ ಡಬ್  ಆಗುತ್ತಿದ್ದು ಕೃಷಿಕರಾಗಿರುವ ಬಹುಮುಖ ಪ್ರತಿಭೆ ನಟ ಇದೀಗ ಹೊಸ ಜವಾಬ
ಬ್ಲ್ಯಾಕ್ ಅಂಡ್ ವೈಟ್ ಚಿತ್ರದ ದೃಶ್ಯ
ಬ್ಲ್ಯಾಕ್ ಅಂಡ್ ವೈಟ್ ಚಿತ್ರದ ದೃಶ್ಯ

"ಬ್ಲಾಕ್ ಆಂಡ್ ವೈಟ್" ಚಿತ್ರ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಗೆ ಸಿದ್ದವಾಗಿದ್ದು  ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಮಾಡಿದ ದ್ವಿಭಾಷಾ ಚಿತ್ರವಿದಾಗಿದೆ. ನಟ ಕಿಶೋರ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶನದ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರ ತೆಲುಗಿನಲ್ಲಿಯೂ ಡಬ್  ಆಗುತ್ತಿದ್ದು ಕೃಷಿಕರಾಗಿರುವ ಬಹುಮುಖ ಪ್ರತಿಭೆ ನಟ ಇದೀಗ ಹೊಸ ಜವಾಬ್ದಾರಿ ಹೊರಲು ತಯಾರಾಗಿದ್ದಾರೆ.

ವಿಸ್ತಾರಾ ಬ್ಯಾನರ್ ಮತ್ತು ಅನುಪಮಾ ಕುಮಾರ್ ಅವರ ಪ್ರೊಡಕ್ಷನ್ ಹೌಸ್, ಲುಕಿಂಗ್ ಗ್ಲಾಸ್ ಸಹಯೋಗದಲ್ಲಿ ಈ ಚಿತ್ರ ನಿರ್ಮಾಣಆಗಿದೆ.  ಸೈಕಲಾಜಿಕಲ್ ಥ್ರಿಲ್ಲರ್ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ಅನುಪಮಾ ನಾಯಕಿಯಾಗಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ.2010 ರ ಬ್ಲಾಕ್ ಕಾಮಿಡಿ ಸಿನೆಮಾ  ಇಷ್ಕಿಯಾದ ಮೂಲಕ ಚಿತ್ರೋದ್ಯಮಕ್ಕೆ ಪಾದಾರ್ಪಣೆ ಂಆಡಿದ್ದ ಈಕೆ ಬೆಜಾಯ್ ನಂಬಿಯಾರ್ ಅವರ ಡೇವಿಡ್, ಗೌತಮ್ ವಾಸುದೇವ್ ಮೆನನ್ ಅವರ ನಿತಾನಾ,  ಎಆರ್ ಮುರುಗದಾಸ್ ಅವರ ತುಪಕ್ಕಿ ಮುಂತಾದ ಪ್ರಮುಖ  ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಬ್ಲ್ಯಾಕ್ ಅಂಡ್ ವೈಟ್ ಸೀಮಿತ ಪಾತ್ರವರ್ಗವನ್ನು ಹೊಂದಿದ್ದು, ರೋಜರ್ ನಾರಾಯಣ್, ಶ್ರೀಕೃಷ್ಣ ದಯಾಳ್ ಮತ್ತು ಸುರೇಖಾ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ.  ಕಿಶೋರ್ ಪ್ರಸ್ತುತ ಸಂಪಾದನೆ ಕಾರ್ಯದಲ್ಲಿ ನಿರತರಾಗಿದ್ದಾರೆ.ಕೀರ್ತನ್ ಸಂಗೀತ ಸಂಯೋಜಿಸುತ್ತಿದ್ದರೆ, ತಪಸ್ ನಾಯಕ್ ಧ್ವನಿ ತಾಂತ್ರಿಕತೆಯನ್ನು ನಿರ್ವಹಿಸುತ್ತಿದ್ದಾರೆ.ನಾಗೇಶ್ ಆಚಾರ್ಯ ಚಿತ್ರಕ್ಕೆ ಕ್ಯಾಮರಾ ಕೆಲಸ ನೆರವೇರಿಸುತ್ತಾರೆ.ಚಿತ್ರವನ್ನು ಬಿಡುಗಡೆ ಮಾಡಲು ಪ್ರೊಡಕ್ಷನ್ ಹೌಸ್ ವಿವಿಧ ಒಟಿಟಿ ಪ್ಲಾಟ್‌ಫಾರ್ಮ್‌ಗಳೊಂದಿಗೆ ಮಾತುಕತೆ ನಡೆಸುತ್ತಿದೆ.

“ನಿರೂಪಣೆ ಮುಖ್ಯವಾಗಿ ಗಂಡ ಹೆಂಡತಿ ನಡುವೆಸಾಗುತ್ತದೆ, ಮಾನವನ ಮನಸ್ಸಿನ ಕಪ್ಪು ಹಾಗೂ ಬಿಳಿ ಭಾಗಗಳ ದ್ವಂದ್ವ, ಗಂಡು ಮತ್ತು ಹೆಣ್ಣು, ಒಳ್ಳೆಯ ಹಾಗೂ ಕೆಟ್ಟ ಮುಖಗಳನ್ನು ಕಪ್ಪು ಮತ್ತು ಬಿಳಿಯ ಆಧಾರದಲ್ಲಿ ತೋರಿಸಲಾಗುತ್ತದೆ"ನಾವು ವಾಸಿಸುವ ಸಮಾಜವನ್ನು ಪ್ರತಿನಿಧಿಸುವ ಹಲವಾರು ಇತರ ವಿಧಾನಗಳ ಮೂಲಕ ಮಾನವ ಅಭಿವ್ಯಕ್ತಿಗಳು ಹೇಗೆ ಕುಶಲತೆಯಿಂದ ನಿರ್ವಹಿಸಲ್ಪಡುತ್ತ, ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಜಗತ್ತು ಎದುರಿಸುತ್ತಿರುವ ಪ್ರತ್ಯೇಕತೆಯನ್ನು ಈ ಚಿತ್ರ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲಿದೆ.ಚಿತ್ರವನ್ನು ಕಪ್ಪು ಹಾಗೂ ಬಿಳಿ (ಬ್ಲಾಕ್ ಆಂಡ್ ವೈಟ್) ಮಾದರಿಯಲ್ಲಿ ಸೆರೆಹಿಡಿಯಲಾಗಿದೆ.. ಈ ಚಿತ್ರವನ್ನು ರೆಡ್ ಡ್ರ್ಯಾಗನ್ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಇಡೀ ಚಿತ್ರ ಒಂದೇ ಸ್ಥಳದಲ್ಲಿ ಚಿತ್ರೀಕರಣವಾಗಿದೆ. "

"ಕಿಶೋರ್ ಮತ್ತು ನಾನು ಆರಂಭದಲ್ಲಿ ಬ್ಲ್ಯಾಕ್ ಅಂಡ್ ವೈಟ್ ಕಥೆಯನ್ನು ಕೇಳಿದಾಗ, ಇದು ಒಂದು ಚಿತ್ರವಾಗುವ ಸಾಧ್ಯತೆ ನಮ್ಮ ಮುಂದೆ ತೆರೆದುಕೊಂಡಿತ್ತು.ಆದರೆ ಹಣಕಾಸಿನ ಸಮಸ್ಯೆ ಸೇರಿ ಅನೇಕ ಸಮಸ್ಯೆಗಳು ನಮ್ಮೆದುರಿಗಿತ್ತು.ಆದರೆ ಕಡೆಗೆ ಮಾನ ಮನಸ್ಕ ಪ್ರತಿಭಾವಂತ ಜನರನ್ನು ಭೇಟಿ ಮಾಡಿ ನಿರ್ಮಾಣದಲ್ಲಿ ಸಹ ಪಾಲ್ಗೊಂಡು ಇದೀಗ ಚಿತ್ರ ನಿರ್ಮಾಣ ಮಾಡಿದ್ದೇವೆ" ಅನುಪಮಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com