ರಾಬರ್ಟ್ ತಂಡದಿಂದ ಮತ್ತೊಂದು ಚಿತ್ರ: ದರ್ಶನ್ ಗೆ 'ಸಿಂಧೂರ ಲಕ್ಷ್ಮಣ' ನ ಕಥೆ ಹೇಳಲಿರುವ ತರುಣ್ ಸುಧೀರ್

ಕನ್ನಡದ ಬಾಕ್ಸ್ ಆಫೀಸ್ ಸುಲ್ತಾನ ಎಂದು ಕರೆಯಲ್ಪಡುವ 'ಡಿ ಬಾಸ್ ದರ್ಶನ್' ಅವರ ಮುಂದಿನ ಸಿನಿಮಾ ಸುದ್ದಿಯಲ್ಲಿದೆ. ರಾಬರ್ಟ್ ಸಿನೆಮಾ ತಯಾರಿಸುತ್ತಿರುವ ತಂಡವೇ ಮತ್ತೊಮ್ಮೆ ಒಟ್ಟಾಗಿ ಚಿತ್ರ ಮಾಡುತ್ತಿದ್ದು ಅದರ ಹೆಸರು ಸಿಂಧೂರ ಲಕ್ಷ್ಮಣ.
ಎಡಚಿತ್ರದಲ್ಲಿ ಮೊನ್ನೆ ನೆರವೇರಿದ ಸ್ಕ್ರಿಪ್ಟ್ ಪೂಜೆ, ಬಲ ಚಿತ್ರದಲ್ಲಿ ರಾಬರ್ಟ್ ಸಿನೆಮಾದ ಸ್ಟಿಲ್
ಎಡಚಿತ್ರದಲ್ಲಿ ಮೊನ್ನೆ ನೆರವೇರಿದ ಸ್ಕ್ರಿಪ್ಟ್ ಪೂಜೆ, ಬಲ ಚಿತ್ರದಲ್ಲಿ ರಾಬರ್ಟ್ ಸಿನೆಮಾದ ಸ್ಟಿಲ್
Updated on

ಕನ್ನಡದ ಬಾಕ್ಸ್ ಆಫೀಸ್ ಸುಲ್ತಾನ ಎಂದು ಕರೆಯಲ್ಪಡುವ 'ಡಿ ಬಾಸ್ ದರ್ಶನ್' ಅವರ ಮುಂದಿನ ಸಿನಿಮಾ ಸುದ್ದಿಯಲ್ಲಿದೆ. ರಾಬರ್ಟ್ ಸಿನೆಮಾ ತಯಾರಿಸುತ್ತಿರುವ ತಂಡವೇ ಮತ್ತೊಮ್ಮೆ ಒಟ್ಟಾಗಿ ಚಿತ್ರ ಮಾಡುತ್ತಿದ್ದು ಅದರ ಹೆಸರು ಸಿಂಧೂರ ಲಕ್ಷ್ಮಣ.

ತರುಣ್ ಕಿಶೋರ್ ಸುಧೀರ್ ನಿರ್ದೇಶನದ ಉಮಾಪತಿ ಎಸ್ ನಿರ್ಮಾಣದ ಐತಿಹಾಸಿಕ ಚಿತ್ರವಿದು. ಮೊನ್ನೆ ವರ ಮಹಾಲಕ್ಷ್ಮೀ ದಿನ ತರುಣ್ ಸುಧೀರ್ ಅವರ ಕಚೇರಿಯಲ್ಲಿಯೇ ಚಿತ್ರದ ಮುಹೂರ್ತ ಪೂಜೆ ನೆರವೇರಿದೆ.

ವರ ಮಹಾಲಕ್ಷ್ಮೀ ಆಶೀರ್ವಾದದೊಂದಿಗೆ ಡಿ ಬಾಸ್ ಜೊತೆಗೆ ಮತ್ತೊಂದು ಚಿತ್ರ ಮಾಡುತ್ತಿದ್ದು ಅದರ ಸ್ಕ್ರಿಪ್ಟ್ ಕೆಲಸ ಆರಂಭ ಮಾಡುತ್ತಿದ್ದೇನೆ ಎಂದು ಮುಹೂರ್ತದ ಫೋಟೋ ಹಾಕಿ ದರ್ಶನ್ ಫ್ಯಾನ್ಸ್ ಗೆ ಖುಷಿಯ ಸುದ್ದಿಯನ್ನು ನೀಡಿದ್ದಾರೆ ತರುಣ್ ಸುಧೀರ್.

ಈ ಮೂಲಕ ರಾಬರ್ಟ್ ತಂಡ ಮತ್ತೆ ಒಂದಾಗುತ್ತಿದೆ. ಇದು ದರ್ಶನ್ ಅವರ 57ನೇ ಚಿತ್ರ. ಈ ಹಿಂದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ ಮಾಡಿ ಐತಿಹಾಸಿಕ, ಕುರುಕ್ಷೇತ್ರ ಮಾಡಿ ಪೌರಾಣಿಕ ಚಿತ್ರಗಳಲ್ಲಿ ಯಶಸ್ಸು ಕಂಡಿದ್ದ ದರ್ಶನ್, ರಾಜೇಂದ್ರ ಬಾಬು ನಿರ್ದೇಶನದ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಮದಕರಿ ನಾಯಕ ಚಿತ್ರದ ಜೊತೆಗೆ ಇದೀಗ ಮತ್ತೊಂದು ಐತಿಹಾಸಿಕ ಪಾತ್ರ ಮಾಡಲು ಮುಂದಾಗಿದ್ದಾರೆ.

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಸಿಂಧೂರ ಲಕ್ಷ್ಮಣ ಪಾತ್ರದಲ್ಲಿ ದರ್ಶನ್ ಮಿಂಚಲಿದ್ದಾರೆ. 20 ವರ್ಷಗಳ ಹಿಂದೆ ರಂಗಭೂಮಿ ಮೇಲೆ 10ರಿಂದ 15 ಸಾವಿರ ಸಲ ತರುಣ್ ಸುಧೀರ್ ಅವರ ತಂದೆ ಸುಧೀರ್ ಲಕ್ಷ್ಮಣನ ಪಾತ್ರ ಮಾಡಿ ಉತ್ತರ ಕರ್ನಾಟಕ ಮಂದಿಗೆ ಲಕ್ಷ್ಮಣನಾಗಿ ಚಿರಪರಿಚಿತರಾಗಿದ್ದರು. ಇದೀಗ ಆ ಕಥೆಯನ್ನು ಸಿಂಧೂರ-ಲಕ್ಷ್ಮಣ ಸಿನೆಮಾವಾಗಿ ತೆರೆಯ ಮೇಲೆ ತೋರಿಸಲಿದ್ದಾರೆ ತರುಣ್. ಇದು ಅವರು ಮೊದಲ ಸಲ ನಿರ್ದೇಶಿಸುತ್ತಿರುವ ಐತಿಹಾಸಿಕ ಚಿತ್ರ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com