ನಿರ್ದೇಶಕ ಲೋಹಿತ್ ರಿಂದ ಮತ್ತೆ ಹಾರರ್ ಚಿತ್ರ: 'ಬ್ರಹ್ಮರಾಕ್ಷಸ' ನಿರ್ಮಿಸುತ್ತಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ

ಬ್ರಹ್ಮರಾಕ್ಷಸ ಚಿತ್ರದ ಮೂಲಕ ನಿರ್ದೇಶಕ ಲೋಹಿತ್ ಹೆಚ್ ಮತ್ತು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಒಂದಾಗುತ್ತಿದ್ದಾರೆ. ಮಮ್ಮಿ ಸೇವ್ ಮಿ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟ ಲೋಹಿತ್ ನಂತರ ದೇವಕಿ ಚಿತ್ರ ಮಾಡಿದರು. ಬ್ರಹ್ಮರಾಕ್ಷಸ ಅವರ ಮೂರನೇ ಚಿತ್ರವಿದು.
ಲೋಹಿತ್ ಹೆಚ್
ಲೋಹಿತ್ ಹೆಚ್

ಬ್ರಹ್ಮರಾಕ್ಷಸ ಚಿತ್ರದ ಮೂಲಕ ನಿರ್ದೇಶಕ ಲೋಹಿತ್ ಹೆಚ್ ಮತ್ತು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಒಂದಾಗುತ್ತಿದ್ದಾರೆ. ಮಮ್ಮಿ ಸೇವ್ ಮಿ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟ ಲೋಹಿತ್ ನಂತರ ಪ್ರಿಯಾಂಕ ಉಪೇಂದ್ರ ಜೊತೆ ದೇವಕಿ ಚಿತ್ರ ಮಾಡಿದರು. ಬ್ರಹ್ಮರಾಕ್ಷಸ ಅವರ ಮೂರನೇ ಚಿತ್ರವಿದು.

ಹಾರರ್ ಮತ್ತು ಕ್ರೈಮ್ ಥಿಲ್ಲರ್ ಚಿತ್ರಗಳನ್ನು ಚೆನ್ನಾಗಿ ತೆಗೆಯುವ ಲೋಹಿತ್ ಅವರು ಮತ್ತೊಮ್ಮೆ ಅದೇ ರೀತಿಯ ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ. ಮೊನ್ನೆ ಲೋಹಿತ್ ಅವರ ಹುಟ್ಟುಹಬ್ಬ ದಿನ ಇದನ್ನು ನಿರ್ಮಾಪಕರು ಘೋಷಿಸಿದ್ದಾರೆ. ಬ್ರಹ್ಮರಾಕ್ಷಸ ಈ ಸೆಪ್ಟೆಂಬರ್ ನಲ್ಲಿ ಶೂಟಿಂಗ್ ಆರಂಭವಾಗಲಿದೆ ಎಂದು ಟ್ವಿಟ್ಟರ್ ನಲ್ಲಿ ಮಲ್ಲಿಕಾರ್ಜುನಯ್ಯ ಬರೆದುಕೊಂಡಿದ್ದಾರೆ.

ಸ್ಕ್ರಿಪ್ಟ್ ಜೊತೆ ಸಿದ್ದರಾಗಿರುವ ಲೋಹಿತ್ ಬ್ರಹ್ಮರಾಕ್ಷಸವನ್ನು ಬೆಂಗಳೂರಿನಲ್ಲಿಯೇ ಶೂಟಿಂಗ್ ಮಾಡಲಿದ್ದಾರೆ. ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಕಲಾವಿದರ ಆಯ್ಕೆಯಲ್ಲಿ ತಂಡ ನಿರತವಾಗಿದೆ.

ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ ಚಿತ್ರಗಳನ್ನು ತಯಾರಿಸಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಮುಂದಿನ ಚಿತ್ರಗಳು ಅವತಾರ ಪುರುಷ ಮತ್ತು 777 ಚಾರ್ಲಿಯಾಗಿವೆ. ಈ ಮಧ್ಯೆ ಬ್ರಹ್ಮರಾಕ್ಷಸ ಹಾರರ್ ಮೂವಿಯನ್ನು ನಿರ್ಮಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com