ನಿರೂಪ್ ಭಂಡಾರಿ
ಸಿನಿಮಾ ಸುದ್ದಿ
'ಫ್ಯಾಂಟಮ್'ನಲ್ಲಿ ಸುದೀಪ್ ಗೆ ಜೊತೆಯಾದ ನಿರೂಪ್ ಭಂಡಾರಿ: ಫಸ್ಟ್ ಲುಕ್ ಬಿಡುಗಡೆ
ಕಿಚ್ಚ ಸುದೀಪ್ ಅಭಿನಯದ, ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಚಿತ್ರ ಸಾಕಷ್ಟು ಸುದ್ದಿ ಮಾಡುತ್ತಿದೆ. ಚಿತ್ರದಲ್ಲಿ ಸುದೀಪ್ ಪಾತ್ರ ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡಿರುವ ಚಿತ್ರತಂಡ ಇಂದು ಮತ್ತೊಂದು ಸುದ್ದಿ ಹೊಸ ಸುದ್ದಿ ನೀಡಿದೆ.
ಕಿಚ್ಚ ಸುದೀಪ್ ಅಭಿನಯದ, ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಚಿತ್ರ ಸಾಕಷ್ಟು ಸುದ್ದಿ ಮಾಡುತ್ತಿದೆ. ಚಿತ್ರದಲ್ಲಿ ಸುದೀಪ್ ಪಾತ್ರ ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡಿರುವ ಚಿತ್ರತಂಡ ಇಂದು ಮತ್ತೊಂದು ಸುದ್ದಿ ಹೊಸ ಸುದ್ದಿ ನೀಡಿದೆ. ನಿರೂಪ್ ಭಂಡಾರಿಯವರ ಹುಟ್ಟುಹಬ್ಬ ದಿನವಾದ ಇಂದು ಚಿತ್ರದಲ್ಲಿ ಅವರ ಪಾತ್ರವೇನು, ಅವರ ಲುಕ್ ಹೇಗಿರಲಿದೆ ಎಂಬ ಕುತೂಹಲಕ್ಕೆ ತೆರೆ ಎಳೆದಿದೆ.
ವಿಕ್ರಾಂತ್ ರಾಣಾ ಪಾತ್ರದಲ್ಲಿ ಸುದೀಪ್ ಅಭಿನಯಿಸುತ್ತಿದ್ದರೆ ಸಂಜೀವ್ ಗಂಭೀರ ಅಲಿಯಾಸ್ ಸಂಜು ಎಂಬ ಸ್ನೇಹಮಯಿ, ಸಾದಾ ಸೀದಾ ವ್ಯಕ್ತಿತ್ವದ ಪಾತ್ರ ನಿರೂಪ್ ದ್ದು. ಇಂದು ಅವರ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ನಿರೂಪ್ ಭಂಡಾರಿ ಇದೇ ಮೊದಲ ಬಾರಿಗೆ ಸುದೀಪ್ ಜೊತೆಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಿತರಂಗ, ರಾಜರಥ ಮತ್ತು ಆದಿ ಲಕ್ಷ್ಮಿ ಪುರಾಣ ಚಿತ್ರಗಳಲ್ಲಿ ನಾಯಕನ ಪಾತ್ರ ಮಾಡಿರುವ ನಿರೂಪ್ ಭಂಡಾರಿ ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ನಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ