ಡಿಜೆ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಚಿತ್ರ ನಟ ಪ್ರಥಮ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
“ಇಸ್ಲಾಂ ಧರ್ಮೀಯರ ಭಾವನೆಗೆ ಧಕ್ಕೆ ತರುವ, ಕೋಮು ಪ್ರಚೋದನಾತ್ಮಕ ಸಂದೇಶವನ್ನು ಒಳ್ಳೆ ಹುಡುಗ ಪ್ರಥಮ್ ಪೋಸ್ಟ್ ಮಾಡಿದ್ದರಿಂದ ಅವರ ವಿರುದ್ಧ ದೂರು ನೀಡಲಾಗಿದೆ” ಎಂದು ಹೇಳಲಾಗಿದೆ.
ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಪ್ರಥಮ್, ಯಾರು ಯಾರ ವಿರುದ್ಧ ಬೇಕಿದ್ರೂ ದೂರು ನೀಡಬಹುದು. ನಾನು ಕೂಡ ಕಮಿಷನರ್ ಜತೆ ಮಾತನಾಡ್ತೀನಿ ಎಂದಿದ್ದಾರೆ. ಗಲಭೆ ಪ್ರಕರಣಕ್ಕೆ ಸಂಬಂಧಿಸಿ ನಟ ಪ್ರಥಮ್ ಭಾನುವಾರ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು. ಬಳಿಕ ತಮ್ಮ ಕಚೇರಿ ನಂಬರ್ ಗೆ ಅಶ್ಲೀಲ ಸಂದೇಶ ಹಾಗೂ ಜೀವಬೆದರಿಕೆ ಬರುತ್ತಿರುವುದಾಗಿ ಆರೋಪಿಸಿದ ಪ್ರಥಮ್, ಫೇಸ್ ಬುಕ್ ನಲ್ಲಿ ಹಾಕಿದ್ದ ಪೋಸ್ಟ್ ಡಿಲೀಟ್ ಮಾಡಿದ್ದರು. ಹಾಗೂ ಮುಸ್ಲಿಂ ಸ್ನೇಹಿತರ ಮನವಿ ಮೇರೆಗೆ ಡಿಲೀಟ್ ಮಾಡಿದ್ದೇನೆಯೇ ಹೊರತು ಜೀವಬೆದರಿಕೆಗೆ ಹೆದರಿಲ್ಲ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮತ್ತು ವಾಟ್ಸಾಪ್ ನಲ್ಲಿ ಬೆದರಿಕೆಗಳು ಸೈಬರ್ ಅಪರಾಧದ ಅಡಿಯಲ್ಲಿ ಬರುತ್ತದೆ. ನಾನು ದೂರು ಕೊಟ್ರೆ ನಿಮ್ಮ ಕುಟುಂಬದವರಿಗೆ ತೊಂದರೆ ಆಗುತ್ತೆ ಅನ್ನೋ ಕಾರಣಕ್ಕೆ ಸುಮ್ಮನಿದ್ದೇನೆ. ನೀವು ಪ್ರಾಣ ತಗಿತೀನಿ ಅಂತ ಕಳಿಸಿರೋ ಸಂದೇಶ ಗಳಿಗೆ ಏನ್ ರಾಷ್ಟ ಪ್ರಶಸ್ತಿ ಕೊಡ್ತಾರೆ ಅಂದುಕೊಂಡಿದ್ದೀರಾ? ನಿಮ್ಮ ಹೆತ್ತ ಅಪ್ಪ ಅಮ್ಮನಿಗೆ ಕಷ್ಟ ಆಗುತ್ತೆ ನಾನೇನಾದ್ರೂ ಕೇಸ್ ಹಾಕಿದ್ರೆ ಅಂತ ಸುಮ್ಮನಿದ್ದೀನಿ. ನಮ್ಮ ಆಫೀಸ್ ನಂಬರ್ ಗೆ ಅಸಭ್ಯ ಸಂದೇಶ, ವಾರ್ನ್ ಮಾಡೋದು, ನಮ್ಮ ಸಿನಿಮಾಗೆ ತೊಂದರೆ ಕೊಡೋದು ನಿಲ್ಲಿಸಿ. ನಿಮಗೂ ಒಳ್ಳೆದಾಗ್ಲಿ.' ಎಂದು ಬೆದರಿಕೆ ಹಾಕುತ್ತಿರುವವರಿಗೆ ನಟ ಪ್ರಥಮ್ ಎಚ್ಚರಿಕೆ ನೀಡಿದ್ದಾರೆ.
Advertisement