ಕಾಶ್ಮೀರ ಕಣಿವೆಯ ಚುಮುಚುಮು ಚಳಿಯಲ್ಲಿ ಪ್ರೇಮ್ 'ಏಕ್ ಲವ್ ಯಾ' ಹಾಡಿನ ಚಿತ್ರೀಕರಣ

ನಿರ್ದೇಶಕ ಪ್ರೇಮ್ ತಮ್ಮ "ಏಕ್ ಲವ್ ಯಾ" ಚಿತ್ರದ ಹಾಡೊಂದರ ಶೂಟಿಂಗ್ ಗಾಗಿ ಇದೀಗ ಕಾಶ್ಮೀರದಲ್ಲಿದ್ದಾರೆ. ದೂರವಾಣಿ ಸಂಭಾಷಣೆಯೊಂದರಲ್ಲಿ ನಿರ್ದೇಶಕರೊಂದಿಗೆ ಮಾತಿಗಿಳಿದಾಗ ತಾವು ಈ ಮುನ್ನ ಶೂಟಿಂಗ್ ಗೆ ನಿಗದಿ ಮಾಡಿದ್ದ ಸ್ಥಳದಲ್ಲಿ ಉತ್ತಮ ಹಿಮಪಾತವಾಗಿದೆ ಎಂದಿದ್ದಾರೆ.
ಕಾಶ್ಮೀರದಲ್ಲಿ ಏಕ್ ಲವ್ ಯಾ ಟೀಂ
ಕಾಶ್ಮೀರದಲ್ಲಿ ಏಕ್ ಲವ್ ಯಾ ಟೀಂ
Updated on

ನಿರ್ದೇಶಕ ಪ್ರೇಮ್ ತಮ್ಮ "ಏಕ್ ಲವ್ ಯಾ" ಚಿತ್ರದ ಹಾಡೊಂದರ ಶೂಟಿಂಗ್ ಗಾಗಿ ಇದೀಗ ಕಾಶ್ಮೀರದಲ್ಲಿದ್ದಾರೆ. ದೂರವಾಣಿ ಸಂಭಾಷಣೆಯೊಂದರಲ್ಲಿ ನಿರ್ದೇಶಕರೊಂದಿಗೆ ಮಾತಿಗಿಳಿದಾಗ ತಾವು ಈ ಮುನ್ನ ಶೂಟಿಂಗ್ ಗೆ ನಿಗದಿ ಮಾಡಿದ್ದ ಸ್ಥಳದಲ್ಲಿ ಉತ್ತಮ ಹಿಮಪಾತವಾಗಿದೆ ಎಂದಿದ್ದಾರೆ.

"ನಾವು ರಿಸ್ಕ್ ತೆಗೆದುಕೊಂಡಿದ್ದೇವೆ ಮತ್ತು ಕೆಲವು ಸುಂದರವಾದ ಶಾಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ" ಎಂದು ಪ್ರೇಮ್ ಹೇಳಿದ್ದಾರೆ. ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿ 12 ದಿನಗಳ ಶೆಡ್ಯೂ್ಲ್ ನಲ್ಲಿ ಶೂಟಿಂಗ್ ನಡೆಸಲಾಗುತ್ತದೆ "ಕಾಶ್ಮೀರದಲ್ಲಿ ಮೂರು ದಿನಗಳ ನಂತರ, ನಮ್ಮ ಮುಂದಿನ ಪ್ರಯಾಣ ಲಡಾಖ್ಇದಕ್ಕಾಗಿ ನಾವು ಮತ್ತೆ ದೆಹಲಿಗೆ ಪ್ರಯಾಣಿಸಬೇಕಾಗುತ್ತದೆ ಏಕೆಂದರೆ ಇಲ್ಲಿ ರಸ್ತೆಗಳನ್ನು ಮುಚ್ಚಿದ್ದಾರೆ. ಲಡಾಖ್‌ನಿಂದ ನಾವು ರಾಜಸ್ಥಾನಕ್ಕೆ ಹೋಗುತ್ತೇವೆ ಮತ್ತು ಕಡೆಯದಾಗಿ ಗುಜರಾತಿನಲ್ಲಿ ನಮ್ಮ ಈ ಪ್ರಯಾಣ ಅಂತ್ಯವಾಗಲಿದೆ." ಪ್ರೇಮ್ ಹೇಳಿದ್ದಾರೆ.

"ಏಕ್ ಲವ್ ಯಾ"ದಲ್ಲಿ ರನ್ನ, ರೀಷ್ಮಾ ನಾಣಯ್ಯ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ರಚಿತಾ ರಾಮ್ ಚಿತ್ರದ ಪ್ರಧಾನ ಪಾತ್ರದಲ್ಲಿದ್ದರೆ ರಕ್ಷಿತಾ ಅತಿಥಿ ಕಲಾವಿದೆಯಾಗಿ ಅಭಿನಯಿಸಿದ್ದಾರೆ.

ಚಿತ್ರೀಕರಣವನ್ನು ರೋಮ್ಯಾಂಟಿಕ್ ನಂಬರ್ ನೊಂದಿಗೆ ನೆರವೇರಿಸಲಿರುವ ನಿರ್ದೇಶಕರು, ಸಂಕ್ರಾಂತಿಯ ಸಂದರ್ಭದಲ್ಲಿ ಜನವರಿ 14 ರಂದು ಆಡಿಯೋ ಬಿಡುಗಡೆ ಮಾಡಲು ಯೋಜಿಸಿದ್ದಾರೆ. ರೊಮ್ಯಾಂಟಿಕ್ ಥ್ರಿಲ್ಲರ್ ಅನ್ನು ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಲಾಂಛನದಲ್ಲಿ ನಿರ್ಮಿಸಲಾಗಿತ್ತಿದೆ. ಅರ್ಜುನ್ ಜನ್ಯಾ ಅವರ ಸಂಗೀತ ಮತ್ತು ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಈ ನಡುವೆ ನಿರ್ದೇಶಕ ಪ್ರೇಮ್ “ಎಂ.ಎಸ್.ರಮೇಶ್ ನಿರ್ದೇಶನದ ಚಿತ್ರದ ಶೂಟಿಂಗ್ ಪ್ರಾರಂಭಿಸುತ್ತೇನೆ. ರಘು ಹಾಸನ್ ಮತ್ತು ಚಕ್ರವರ್ತಿ ಚಂದ್ರಚೂಡ್ನಾನು ಇನ್ನೆರಡು ಯೋಜನೆಗಳಲ್ಲಿ ಕೆಲಸ ಮಾಡುತ್ತೇನೆ” ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com