ಹ್ಯಾಟ್ರಿಕ್ ಚಿತ್ರಕ್ಕಾಗಿ ಮತ್ತೆ ಒಂದಾದ ಪುನೀತ್ ರಾಜ್‌ಕುಮಾರ್- ಸಂತೋಷ್ ಆನಂದ್ ರಾಮ್!

ಪುನೀತ್ ರಾಜ್‌ಕುಮಾರ್- ಸಂತೋಷ್ ಆನಂದ್ ರಾಮ್ ಅವರ ಜೋಡಿಯ "ಯುವರತ್ನ" ಇನ್ನೇನು ಬಿಡುಗಡೆಯಾಗುವುದಕ್ಕೆ ಸಿದ್ದವಾಗಿರುವಾಗಲೇ ಇದೀಗ ಈ ಇಬ್ಬರೂ ಒಂದಾಗಿ ಮತ್ತೊಂದು ಚಿತ್ರ ತಯಾರಿಯಲ್ಲಿದ್ದಾರೆ ಎಂದು ಮಾಹಿತಿ ಹೊರಬಿದ್ದಿದೆ.
ಪುನೀತ್ ರಾಜ್‌ಕುಮಾರ್, ಸಂತೋಷ್ ಆನಂದ್ ರಾಮ್!
ಪುನೀತ್ ರಾಜ್‌ಕುಮಾರ್, ಸಂತೋಷ್ ಆನಂದ್ ರಾಮ್!
Updated on

ಪುನೀತ್ ರಾಜ್‌ಕುಮಾರ್- ಸಂತೋಷ್ ಆನಂದ್ ರಾಮ್ ಅವರ ಜೋಡಿಯ "ಯುವರತ್ನ" ಇನ್ನೇನು ಬಿಡುಗಡೆಯಾಗುವುದಕ್ಕೆ ಸಿದ್ದವಾಗಿರುವಾಗಲೇ ಇದೀಗ ಈ ಇಬ್ಬರೂ ಒಂದಾಗಿ ಮತ್ತೊಂದು ಚಿತ್ರ ತಯಾರಿಯಲ್ಲಿದ್ದಾರೆ ಎಂದು ಮಾಹಿತಿ ಹೊರಬಿದ್ದಿದೆ. ಈ ಹೊಸ ಚಿತ್ರ ಇವರಿಬ್ಬರ ಪಾಲಿಗೆ ಹ್ಯಾಟ್ರಿಕ್ ಚಿತ್ರವಾಗಲಿದೆ ಎನ್ನುವುದು ಮಹತ್ವದ ಸಂಗತಿ. ಪತ್ರಿಕೆಗೆ ಖಚಿತ ಮೂಲಗಳಿಂದ  ಈ ಮಾಹಿತಿ ಲಭಿಸಿದ್ದು ಇದಾಗಲೇ ನಿರ್ದೇಶಕ-ನಟರ ನಡುವೆ ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಈ ಇಬ್ಬರೂ ಇನ್ನೊಂದು ಮಾಸ್ ಎಂಟರ್ಟೈನರ್ ಗಾಗಿ ಒಂದಾಗಿತ್ತಿದ್ದಾರೆ.

"ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ" ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ಪುನೀತ್ ಒಡನಾಟ "ರಾಜಕುಮಾರ" ದಿಂದ ಮೊದಲಾಗಿತ್ತು. 2017 ರಲ್ಲಿ ತೆರೆಗೆ ಬಂದ "ರಾಜಕುಮಾರ" ಫ್ಯಾಮಿಲಿ ಎಂಟರ್‌ಟೈನರ್ ಹಾಗೂ ಬ್ಲಾಕ್ ಬಸ್ಟರ್ ಆಗಿ ಯಶಸ್ವಿಯಾಗಿತ್ತು. ಇದೀಗ "ಯುವರತ್ನ" ಬಗ್ಗೆ ಸಹ ಅಷ್ಟೇ ನಿರೀಕ್ಷೆ ಇದೆ.  ಆದರೆ ಇದೀಗ ಅವರ ಜೋಡಿಯ ಮೂರನೇ ಚಿತ್ರದ ಬಗೆಗೆ ಹೊಸ ಊಹಾಪೋಹಗಳಿಗೆ ನಾಂದಿ ಹಾಡಿದೆ.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಈ ಯೋಜನೆ ತಯಾರಾಗಲಿದೆ ಎನ್ನಲಾಗಿದೆ,  ಆದರೆ ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಬಂದಿಲ್ಲ. ಪುನೀತ್ ರಾಜ್‌ಕುಮಾರ್ ಪ್ರಸ್ತುತ ಚೇತನ್ ಕುಮಾರ್ ಅವರ :ಜೇಮ್ಸ್" ಚಿತ್ರದ ಶೂಟಿಂಗ್ ನಲ್ಲಿದ್ದಾರೆ.

ಈ ಮಧ್ಯೆ ಬುಧವಾರ ಹೊಂಬಾಳೆ ಸಂಗೀತ ಚಾನೆಲ್‌ನಲ್ಲಿ "ಯುವರತ್ನ" ಚಿತ್ರದ ಮೊದಲ ಹಾಡು "ಪವರ್ ಆಫ್ ಯೂತ್" ಬಿಡುಗಡೆಯಾಗಲಿದೆ.ಹಾಡನ್ನು ಎಸ್ ಥಮನ್ ಸಂಯೋಜಿಸಿದ್ದಾರೆ ಮತ್ತು ಸಂತೋಷ್ ಆನಂದ್ ರಾಮ್ ಅವರ ಸಾಹಿತ್ಯ ಹೊಂದಿದೆ.  ವಿಜಯ್ ಕಿರಗಂಡೂರ್ ನಿರ್ಮಿಸಿರುವ ಆಕ್ಷನ್ ಕಮರ್ಷಿಯಲ್ ಎಂಟರ್‌ಟೈನರ್ ತೆಲುಗಿನಲ್ಲೂ ಬಿಡುಗಡೆಯಾಗುತ್ತಿರುವುದಾಗಿ ಇತ್ತೀಚೆಗೆ ಘೋಷಿಸಲಾಗಿದೆ. 

"ಯುವರತ್ನ" ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ದ ಹಂತದಲ್ಲಿದೆ. ಇದರಲ್ಲಿ ಸಯೇಶಾ ನಾಯಕಿಯಾಗಿದ್ದು ಧನಂಜಯ್ ಮುಖ್ಯ ವಿಲನ್ ಪಾತ್ರದಲ್ಲಿದ್ದಾರೆ.ದಿಗಂತ್, ಸೋನು ಗೌಡ ಮತ್ತು ಪ್ರಕಾಶ್ ರಾಜ್ ಕೂಡ ಚಿತ್ರದ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com