ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

'ಕೇಳಿ ಕಥೆಯ' ಆಡಿಯೊಬುಕ್ ಎರಡನೇ ಸಂಪುಟ ಬಿಡುಗಡೆ; ಖ್ಯಾತ ಕಲಾವಿದರ ಧ್ವನಿಯಲ್ಲಿ!

ಭಾರತದಲ್ಲಿ ಇತ್ತೀಚೆಗೆ ಆಡಿಯೊಬುಕ್ ಟ್ರೆಂಡ್ ಬೆಳೆಯುತ್ತಿದೆ. ಸ್ಥಳೀಯ ಭಾಷೆಗಳಲ್ಲಿ ಕೂಡ ಆಡಿಯೊಬುಕ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅದು ಈ ಲಾಕ್ ಡೌನ್ ಸಮಯದಲ್ಲಿ ಅತ್ಯಂತ ಹೆಚ್ಚು ಪ್ರಶಸ್ತನೀಯ ಎನಿಸಿಕೊಂಡಿದೆ. 
Published on

ಬೆಂಗಳೂರು: ಭಾರತದಲ್ಲಿ ಇತ್ತೀಚೆಗೆ ಆಡಿಯೊಬುಕ್ ಟ್ರೆಂಡ್ ಬೆಳೆಯುತ್ತಿದೆ. ಸ್ಥಳೀಯ ಭಾಷೆಗಳಲ್ಲಿ ಕೂಡ ಆಡಿಯೊಬುಕ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅದು ಈ ಲಾಕ್ ಡೌನ್ ಸಮಯದಲ್ಲಿ ಅತ್ಯಂತ ಹೆಚ್ಚು ಪ್ರಶಸ್ತನೀಯ ಎನಿಸಿಕೊಂಡಿದೆ. 

ಕನ್ನಡದಲ್ಲಿ ಸಾಹಿತ್ಯ ಮತ್ತು ಮನರಂಜನೆಯ ನಡುವಿನ ಅಂತರವನ್ನು ಹೋಗಲಾಡಿಸಿ ಸೇತುವೆಯಾಗಿ ಕೆಲಸ ಮಾಡುತ್ತಿದೆ ಕೇಳಿ ಕಥೆಯ ಆಡಿಯೊಬುಕ್ ಸರಣಿಗಳು. ಈ ಆಡಿಯೊಬುಕ್ ಸರಣಿಯಲ್ಲಿ ಕನ್ನಡದ ಕೆಲವು ಅತ್ಯುತ್ತಮ ಸಣ್ಣ ಕಥೆಗಳನ್ನು ಓದಬಹುದು. ಕನ್ನಡ ಚಿತ್ರರಂಗದ, ಥಿಯೇಟರ್ ಮತ್ತು ಸಂಗೀತ ಕ್ಷೇತ್ರದ ಕೆಲವು ಖ್ಯಾತ ಕಲಾವಿದರ ಧ್ವನಿಯ ಮೂಲಕ ಈ ಸಣ್ಣ ಕಥೆಗಳನ್ನು ಕೇಳಬಹುದು. 

ಈ ಕೇಳಿ ಕಥೆಯ ಆಡಿಯೊಬುಕ್ ಇದೀಗ ಎರಡು ಸಂಪುಟಗಳಲ್ಲಿ ಲಭ್ಯವಿದೆ. ಮೊದಲ ಭಾಗ 2014ರಲ್ಲಿ ಆರಂಭವಾಗಿತ್ತು. ಎರಡನೇ ಭಾಗ ಕಳೆದ ಮಂಗಳವಾರ ಖ್ಯಾತ ಕಲಾವಿದರಾದ ಬಿ ಸುರೇಶ್, ವಶಿಷ್ಟ ಸಿಂಹ, ಕಿಶೋರ್ ಮತ್ತು ಖ್ಯಾತ ಬರಹಗಾರ ವಸುದೇಂಧ್ರ ಬಿಡುಗಡೆ ಮಾಡಿದ್ದರು.

ಐಟಿ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿರುವ ವೃತ್ತಿಪರರು ಸಾಮಾನ್ಯ ಹಿತಾಸಕ್ತಿಯಿಂದ ತಯಾರಿಸಿದ ಆಡಿಯೊಬುಕ್ ಇದು. ಮೊದಲ ಭಾಗದ ಆಡಿಯೊಬುಕ್ ಮಾರಾಟದಿಂದ ಬಂದ ಹಣದಲ್ಲಿ ಗಡಿಭಾಗದ 9 ಬಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲಾಗಿತ್ತು. 

ಲೇಖಕರು, ಕಲಾವಿದರು, ಸಂಗೀತ ನಿರ್ದೇಶಕರುಗಳ ಜೊತೆ ಸಮಾಲೋಚಿಸಿ ವಿಷಯಗಳನ್ನು ತಯಾರಿಸಿ ಸಿದ್ದವಾದ ಎರಡನೇ ಸಂಪುಟದಿಂದ ಬಂದ ಆದಾಯವನ್ನು ಕೂಡ ಉತ್ತಮ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು ಎನ್ನುತ್ತಾರೆ ಕೇಳಿ ಕಥೆಯ ತಂಡದ ಮುಕುಂದ್ ಸೆಟ್ಲೂರು.

ಹೆಚ್ಚಿನ ಮಾಹಿತಿಗೆ www.kelikatheya.com ಸಂಪರ್ಕಿಸಬಹುದು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com