'ದ ಬ್ರಿಡ್ಜ್ ಮ್ಯಾನ್' ಮೂಲಕ ಸೇತುವೆ ಕಟ್ಟಿದವರ ಕಥೆ ಹೇಳಲು ಹೊರಟಿದ್ದಾರೆ ಸಂತೋಷ್ ಕೊಡಂಕೇರಿ

ಬಾಲ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಿಸರ್ಗಧಾಮದಲ್ಲಿ ನಿರ್ಮಿಸಿರುವ ಸೇತುವೆಯ ಬಳಿ ಗಂಟೆಗಟ್ಟಲೆ ಸಮಯ ಕಳೆದುದನ್ನು ಸಂತೋಷ್ ಕೊಡೆಂಕೇರಿ ನೆನಪು ಮಾಡಿಕೊಳ್ಳುತ್ತಾರೆ. ಈ ಸೇತುವೆ ಹಿಂದೆ ಸಾಕಷ್ಟು ಸ್ವಾರಸ್ಯಕರ ಕಥೆಯಿದೆ, ಈ ಸೇತುವೆ ನಿರ್ಮಾಣ ಮಾಡಿದ ಗಿರೀಶ್ ಭಾರದ್ವಾಜ್ ಅವರ ಬಗ್ಗೆ ಸಿನೆಮಾ ತಯಾರಿಸಲು ನಿರ್ಧರಿಸಿದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಾಲ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಿಸರ್ಗಧಾಮದಲ್ಲಿ ನಿರ್ಮಿಸಿರುವ ಸೇತುವೆಯ ಬಳಿ ಗಂಟೆಗಟ್ಟಲೆ ಸಮಯ ಕಳೆದುದನ್ನು ಸಂತೋಷ್ ಕೊಡೆಂಕೇರಿ ನೆನಪು ಮಾಡಿಕೊಳ್ಳುತ್ತಾರೆ. ಈ ಸೇತುವೆ ಹಿಂದೆ ಸಾಕಷ್ಟು ಸ್ವಾರಸ್ಯಕರ ಕಥೆಯಿದೆ, ಈ ಸೇತುವೆ ನಿರ್ಮಾಣ ಮಾಡಿದ ಗಿರೀಶ್ ಭಾರದ್ವಾಜ್ ಅವರ ಬಗ್ಗೆ ಸಿನೆಮಾ ತಯಾರಿಸಲು ನಿರ್ಧರಿಸಿದರು.

ದ ಬ್ರಿಡ್ಜ್ ಮ್ಯಾನ್ ಎಂಬ ಶೀರ್ಷಿಕೆಯನ್ನು ಹೊಂದಿರುವ ಚಿತ್ರ ಮುಂದಿನ ತಿಂಗಳು ತಯಾರಾಗುತ್ತಿದೆ. 2017ರಲ್ಲಿ ಗಿರೀಶ್ ಭಾರದ್ವಾಜ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಾಗಲೇ ನಾವು ಚಿತ್ರ ಮಾಡಬೇಕೆಂದು ನಿಶ್ಚಯಿಸಿದ್ದೆವು. ಜೀವನ ಚರಿತ್ರೆ ಮಾಡಲು ಸಾಕಷ್ಟು ಸಂಶೋಧನೆ ನಡೆಯಿತು ಎನ್ನುತ್ತಾರೆ ಸಂತೋಷ್. 

ಸಂತೋಷ್ ಅವರು ಸದ್ಯ ಚಿತ್ರಕ್ಕೆ ಕಲಾವಿದರು, ಸಿಬ್ಬಂದಿ, ತಂತ್ರಜ್ಞರ ತಂಡವನ್ನು ಆಯ್ಕೆ ಮಾಡುತ್ತಿದ್ದಾರೆ. ಇದಕ್ಕೆ ಕಮರ್ಷಿಯಲ್ ಅಂಶಗಳನ್ನು ಸೇರಿಸಿ ಒಂದು ಸುಂದರ ಲವ್ ಸ್ಟೋರಿ ಮತ್ತು ಎಮೋಷನ್ಸ್ ಸೇರಿಸಲು ನೋಡುತ್ತಿದ್ದಾರೆ. ದೇಶಾದ್ಯಂತ 125 ಸೇತುವೆಗಳನ್ನು ಗಿರೀಶ್ ಭಾರದ್ವಾಜ್ ಹೇಗೆ ನಿರ್ಮಿಸಿದರು ಎಂಬುದರ ಸುತ್ತ ಕಥೆ ಸುತ್ತುತ್ತದೆ. ಪಾದ ಸೇತುವೆ ಮೂಲಕ ಎರಡು ಹಳ್ಳಿಗಳ ಮಧ್ಯೆ ಸಂಪರ್ಕವನ್ನು ಹೇಗೆ ನಿರ್ಮಿಸಿದರು ಎಂಬುದನ್ನು ತೋರಿಸಲಾಗುತ್ತದೆ. ಇಲ್ಲಿ ಪ್ರಮುಖ ಪಾತ್ರ ಗಿರೀಶ್ ಭಾರದ್ವಾಜ್ ಅವರ ಊರು ಸುಳ್ಯದ ಸಮೀಪ ಪುಟ್ಟ ಹಳ್ಳಿ. ಅದಕ್ಕೆ ಉಳಿದ ಪ್ರದೇಶಗಳೊಂದಿಗೆ ಸಂಪರ್ಕವಿರಲಿಲ್ಲ. ಜನರು ದೋಣಿಗಳ ಮೂಲಕ ಶಾಲೆಗಳು, ಆಸ್ಪತ್ರೆಗಳಿಗೆ ಹೋಗಬೇಕಾಗುತ್ತಿತ್ತು.

ಭರದ್ವಾಜ್ ಅವರು ಸಾಕಷ್ಟು ಹೋರಾಟದಿಂದ ಶಿಕ್ಷಣವನ್ನು ಪೂರ್ಣಗೊಳಿಸಿ ಮೆಕ್ಯಾನಿಕಲ್ ಎಂಜಿನಿಯರ್ ಆದರು. ಪದವಿಯಲ್ಲಿ ಪ್ರಥಮ ದರ್ಜೆ ಪಡೆದರೂ ಸಂದರ್ಶನವನ್ನು ಯಶಸ್ಸುಗೊಳಿಸಲು ಅವರಿಗೆ ಸಾಧ್ಯವಾಗಲಿಲ್ಲ. ಇದು ಅವರ ಜೀವನವನ್ನು ಬದಲಿಸಿತು. ವರ್ಷಗಳ ನಂತರ ಅವೀಹ ತಮ್ಮ ಹಳ್ಳಿಗೆ ಹಿಂತಿರುಗಿದಾಗ, ಪರಿಸ್ಥಿತಿ ಹಾಗೆಯೇ ಇತ್ತು. ಆಗ ನೇತಾಡುವ ಸೇತುವೆಯನ್ನು ನಿರ್ಮಿಸುವ ಬಗ್ಗೆ ಯೋಚಿಸಿದರು. ಆದರೆ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ್ದರಿಂದ ಸೇತುವೆ ನಿರ್ಮಿಸಲು ಸಿವಿಲ್ ಎಂಜಿನಿಯರಿಂಗ್ ಬೇಕು, ಗ್ರಾಮಸ್ಥರಿಗೆ ಸೇತುವೆ ನಿರ್ಮಿಸಿಕೊಡುವ ಅವರ ಕನಸು ಮುಂದುವರಿದಿತ್ತು.

ಭರದ್ವಾಜ್ ಸೇತುವೆಗಳ ರಚನೆಯನ್ನು ಅಧ್ಯಯನ ಮಾಡಲು ಮತ್ತು ಯೋಜನೆಯಿಂದ ರಚಿಸಲು ಮುಂದಾದರು. ಸ್ಥಳೀಯ ಶಾಸಕರನ್ನು ಸಂಪರ್ಕಿಸಿದರು, ಅವರು ಈ ವಿಚಾರವನ್ನು ಕೇಳಿ ನಕ್ಕರಂತೆ. ಆಗ ಗ್ರಾಮಸ್ಥರನ್ನು ಸಂಪರ್ಕಿಸಿ ಈ ಸೇತುವೆ ಎಷ್ಟು ಮಹತ್ವದ್ದಾಗಿದೆ ಎಂದು ವಿವರಿಸಿದರು. ಕೆಲವರು ಬೆಂಬಲಿಸಿದರೆ, ಕೆಲವರು ಸೇತುವೆ ಕೆಳಗೆ ಬೀಳುವ ಭೀತಿಯಿಂದ ಆಕ್ಷೇಪಿಸಿದರು. ಸಾಕಷ್ಟು ವಿರೋಧದ ಮಧ್ಯೆ ಅವರು ಸರಳ ಸೇತುವೆಯನ್ನು ನಿರ್ಮಿಸಿದರು.

ಸೇತುವೆ ನಿರ್ಮಾಣ ಮುಗಿದಿದ್ದರೂ ಗ್ರಾಮಸ್ಥರ ವಿಶ್ವಾಸ ಗಳಿಸುವುದು ಹೆಚ್ಚು ಸವಾಲಾಗಿತ್ತು. ಭರದ್ವಾಜ್ ಎದುರಿಸಿದ ತೊಂದರೆಗಳನ್ನು ಚಿತ್ರದಲ್ಲಿ ತರಲು ಬಯಸುತ್ತೇವೆ. ಅವರು ಗ್ರಾಮಸ್ಥರ ವಿಶ್ವಾಸ ಗಳಿಸಿ ಸೇತುವೆ ನಿರ್ಮಿಸಿದ ಕಥೆಯನ್ನು ಇಲ್ಲಿ ಹೇಳುತ್ತೇವೆ ಎನ್ನುತ್ತಾರೆ ಸಂತೋಷ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com