51ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಪನೋರಮ ವಿಭಾಗದಲ್ಲಿ ಕನ್ನಡದ ಪಿಂಕಿ ಎಲ್ಲಿ?

ಗೋವಾದಲ್ಲಿ ನಡೆಯಲಿರುವ 51ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಫನೋರಮಾ ವಿಭಾಗದಲ್ಲಿ ಕನ್ನಡದ ಪಿಂಕಿ ಎಲ್ಲಿ?, ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಚಿಚೋರೆ, ಸಾಂಡ್ ಕಿ ಆಂಖ್ ಸೇರಿದಂತೆ 23 ಚಲನಚಿತ್ರಗಳು ಹಾಗೂ 20 ಸಾಕ್ಷ್ಯಚಿತ್ರಗಳು ಪ್ರದರ್ಶನ ಕಾಣಲಿವೆ ಎಂದು ಕೇಂದ್ರ ಮಾಹಿತಿ  ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಶನಿವಾರ ತಿಳಿಸಿದ್ದಾರೆ.
ಪಿಂಕಿ ಎಲ್ಲಿ? ಚಿತ್ರದ ಪೋಸ್ಟರ್
ಪಿಂಕಿ ಎಲ್ಲಿ? ಚಿತ್ರದ ಪೋಸ್ಟರ್
Updated on

ನವದೆಹಲಿ: ಗೋವಾದಲ್ಲಿ ನಡೆಯಲಿರುವ 51ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಫನೋರಮಾ ವಿಭಾಗದಲ್ಲಿ ಕನ್ನಡದ ಪಿಂಕಿ ಎಲ್ಲಿ?, ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಚಿಚೋರೆ, ಸಾಂಡ್ ಕಿ ಆಂಖ್ ಸೇರಿದಂತೆ 23 ಚಲನಚಿತ್ರಗಳು ಹಾಗೂ 20 ಸಾಕ್ಷ್ಯಚಿತ್ರಗಳು ಪ್ರದರ್ಶನ ಕಾಣಲಿವೆ ಎಂದು ಕೇಂದ್ರ ಮಾಹಿತಿ  ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಶನಿವಾರ ತಿಳಿಸಿದ್ದಾರೆ.

ಗೋವಾದಲ್ಲಿ ನವೆಂಬರ್ 20ರಿಂದ 28ರವರೆಗೂ 9 ದಿನಗಳ ಕಾಲ ನಡೆಯಬೇಕಾಗಿದ್ದ ಚಿತ್ರೋತ್ಸವವು ಕೋವಿಡ್ ಸಾಂಕ್ರಾಮಿಕ ಕಾರಣದಿಂದಾಗಿ ಜನವರಿ 16 ರಿಂದ 24ರವರೆಗೂ ನಡೆಯಲಿದೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪನೋರಮಾ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿರುವ ಭಾರತದ 20 ಸಾಕ್ಷ್ಯಚಿತ್ರ ಹಾಗೂ 23 ಕಥಾ ಚಿತ್ರಗಳ ಪಟ್ಟಿ ಬಿಡುಗಡೆಗೊಳಿಸಿರುವುದಕ್ಕೆ ಅತೀವ ಸಂತಸವಾಗಿದೆ ಎಂದು ಜಾವಡೇಕರ್ ಟ್ವೀಟ್ ಮಾಡಿದ್ದಾರೆ.

ತುಷಾರ್ ಹೀರಾನಂದಾನಿ ನಿರ್ದೇಶನದ ತಾಪ್ಸಿ ಪನ್ನು ಮತ್ತು ಭೂಮಿ ಪೆಡ್ನೇಕರ್ ಅಭಿನಯದ  ಸಾಂಡ್ ಕಿ ಆಂಖ್ ಪನೋರಮ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿರುವ ಮೊದಲ ಕಥಾ ಚಿತ್ರವಾಗಿದೆ. ವೆಟ್ರಿ ಮಾರನ್ ನಿರ್ದೇಶನದ ಅಸುರನ್ ( ತಮಿಳು) ಮುಸ್ತಾಫ ನಿರ್ದೇಶನದ ಕಾಪ್ಪೆಲಾ ( ಮಲಯಾಳಂ) ಖಲಿರಾ ಅತೀತ (ಒರಿಯಾ) ಗೋವಿಂದ ನಿಹಲಾನಿ ಅವರ ಅಪ್, ಅಪ್ ಆ್ಯಂಡ್ ಅಪ್  ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿವೆ.

ಬರಹಗಾರ ಹಾಗೂ ಚಿತ್ರ ನಿರ್ಮಾಪಕ ಜಾನ್ ಮ್ಯಾಥ್ಯೂ ಮ್ಯಾನಟ್ ನೇತೃತ್ವದಲ್ಲಿ ತೀರ್ಪುಗಾರರ ಸಮಿತಿಯು ಕನ್ನಡದ ಪಿಂಕಿ ಎಲ್ಲಿ? ಬ್ರಿಡ್ಜ್ ( ಅಸ್ಸಾಂ) ಅವಿಜಾತ್ರಿಕ್ ( ಬೆಂಗಾಲಿ) ಟ್ರಾನ್ಸ್ ( ಮಲಯಾಳಂ) ಹಗೂ ಪ್ರವಾಸ್ ( ಮಠಾಠಿ) ಚಿತ್ರಗಳನ್ನು ಆಯ್ಕೆ ಮಾಡಿವೆ.

ಹಾವೊಬಮ್ ಪಬಾನ್ ಕುಮಾರ್ ನೇತೃತ್ವದ ತೀರ್ಪುಗಾರರ ಸಮಿತಿಗೆ ಸಾಕ್ಷ್ಯಚಿತ್ರಗಳ ಆಯ್ಕೆಯನ್ನು ವಹಿಸಲಾಗಿತ್ತು. ಅಂಕಿತ್ ಕೊಠಾರಿ ನಿರ್ದೇಶನದ ಗುಜರಾತಿಯ ಭಾಷೆಯ ಪಾಂಚಿಕ, 100 ಇಯರ್ಸ್ ಆಫ್ ಕ್ರಿಸೊಟೊಮ್ -ಎ ಬಯೋಗ್ರಫಿಕ್ ಫಿಲ್ಮ್ ಸೇರಿದಂತೆ  20 ಸಾಕ್ಷ್ಯಚಿತ್ರಗಳು  ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com