ಶ್ರೀಮುರುಳಿ 'ಮದಗಜ' ಟೀಸರ್ ಗೆ ಅಭಿಮಾನಿಗಳು ಫಿದಾ!
ನಟ ಶ್ರೀಮುರಳಿ ‘ಭರಾಟೆ’ಯ ನಂತರ ಮತ್ತೊಂದು ಅದ್ಧೂರಿ ಚಿತ್ರ ‘ಮದಗಜ’ದ ಬೆನ್ನೇರಿ ಹೊರಟಿರುವುದು ಗೊತ್ತೇ ಇದೆ. ಎಸ್.ಮಹೇಶ್ ಕುಮಾರ್ ಆ್ಯಕ್ಷನ್ ಕಟ್ ಹೇಳಿರುವ, ಶ್ರೀಮುರಳಿ ಸ್ಟನ್ನಿಂಗ್ ಲುಕ್‌ನಲ್ಲಿ ಕಾಣಿಸಿರುವ ಈ ಚಿತ್ರದ ಕೂತೂಹಲಕಾರಿ ಫಸ್ಟ್‌ಲುಕ್ ಟೀಸರ್‌ವೊಂದು ಈಗ ಹೊರಬಿದ್ದಿದೆ.
ಈ ಟೀಸರ್ ಅನ್ನು ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಬಿಡುಗಡೆ ಮಾಡಿದ್ದು, ಯ್ಯೂಟೂಬ್, ಟ್ವಿಟರ್, ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್ ಪುಟಗಳಲ್ಲಿ ಹವಾ ಎಬ್ಬಿಸುತ್ತಿದೆ.
ಅಯೋಗ್ಯ ನಿರ್ದೇಶಕ ತಮ್ಮ ಎರಡನೇ ಪ್ರಾಜೆಕ್ಟ್ ಬಗ್ಗೆ ಅಭಿಮಾನಿಗಳು ಕುತೂಹಲಗೊಂಡಿದ್ದಾರೆ. ಹೆಬ್ಬುಲಿ ನಿರ್ಮಾಪಕ ಉಮಾಪತಿ ಎಸ್ ಗೌಡ ಸಿನಿಮಾ ನಿರ್ಮಿಸುತ್ತಿದ್ದಾರೆ.
ಭರಾಟೆ ನಂತರ ಶ್ರೀಮುರುಳಿ ನಟನೆದ ಮದಗಜ ಬರುತ್ತಿದೆ,. ಅಶಿಕಾ ರಂಗನಾಥ್ ನಾಯಕಿಯಾಗಿದ್ದಾರೆ. ಜಗಪತಿ ಬಾಬು ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರವಿ ಬಸ್ರೂರ್ ಸಂಗೀತ ನೀಡಿದ್ದಾರೆ, ಈಗಾಗಲೇ ಶೇ.70 ರಷ್ಟು ಶೂಟಿಂಗ್ ಪೂರ್ಣಗೊಂಡಿದ್ದು, ಜನವರಿ ಅಂತ್ಯದಲ್ಲಿ ಶೂಟಿಂಗ್ ಪೂರ್ಣಗೊಳ್ಳಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ