ಮತ್ತೆ ಬಂದ ಗುರು-ಶಿಷ್ಯರು: ಕಾಮಿಡಿ ಕಮಾಲ್ ಮಾಡಲಿದ್ದಾರೆ ಶರಣ್

ಗುರು ಶಿಷ್ಯರು ಸಿನಿಮಾ ಮತ್ತೆ ಬರ್ತಿದೆ. ಆದರೆ ಈ ಬಾರಿ ದ್ವಾರಕೀಶ್ ಇರಲ್ಲ. ಬದಲಾಗಿ ಕಾಮಿಡಿ ಕಿಂಗ್ ಶರಣ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಗುರು ಶಿಷ್ಯರು ಪೋಸ್ಟರ್
ಗುರು ಶಿಷ್ಯರು ಪೋಸ್ಟರ್
Updated on

ಗುರು ಶಿಷ್ಯರು ಸಿನಿಮಾ ಮತ್ತೆ ಬರ್ತಿದೆ. ಆದರೆ ಈ ಬಾರಿ ದ್ವಾರಕೀಶ್ ಇರಲ್ಲ. ಬದಲಾಗಿ ಕಾಮಿಡಿ ಕಿಂಗ್ ಶರಣ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ

ಗುರು ಶಿಷ್ಯರು ಎಂದಾಕ್ಷಣ ಹಿರಿಯ ನಟ ದ್ವಾರಕೀಶ್‌ ಮತ್ತು ಡಾ.ವಿಷ್ಣುವರ್ಧನ್‌ ಅವರ ನಟನೆಯ ‘ಗುರು ಶಿಷ್ಯರು’ ಚಿತ್ರ ನೆನಪಾಗುವುದು ಸಹಜ. 1981ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ದ್ವಾರಕೀಶ್‌ ಅವರೇ ನಿರ್ಮಿಸಿದ್ದರು. ಎಚ್‌.ಆರ್‌. ಭಾರ್ಗವ ನಿರ್ದೇಶಿಸಿದ್ದರು. ಈ ಚಿತ್ರದ ಟೈಟಲ್‌ ಅನ್ನು ಆಯ್ಕೆ ಮಾಡಿಕೊಂಡಿರುವ ಶರಣ್‌ ಮತ್ತು ತರುಣ್‌ ತಂಡ,
ಪೋಸ್ಟರ್‌ನಲ್ಲಿರುವ ಅಡಿ ಟಿಪ್ಪಣಿ ಸುಳಿವು ನೀಡುವಂತೆ 1995ರ ಅವಧಿಯ ಕಥೆಯೊಂದನ್ನು ತೆರೆಯ ಮೇಲೆ ತರಲಿದೆ.

ಚಿತ್ರದಲ್ಲಿ ಮಂಜುಳ, ಜಯಮಾಲಿನಿ ಹೇಮ ಚೌಧರಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದ್ದ ಈ ಸಿನಿಮಾದ ಬಗ್ಗೆ ಈಗ್ಯಾಕೆ ಮಾತು ಅಂತೀರಾ? ಗುರು ಶಿಷ್ಯರು ಸಿನಿಮಾ ಮತ್ತೆ ಬರ್ತಿದೆ. ಆದರೆ ಈ ಬಾರಿ ದ್ವಾರಕೀಶ್ ಇರಲ್ಲ. ಬದಲಾಗಿ ಕಾಮಿಡಿ ಕಿಂಗ್ ಶರಣ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಶರಣ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು, ದ್ವಾರಕೀಶ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ನಮ್ಮ ಮುಂದಿನ ಪ್ರಯತ್ನ ಗುರು ಶಿಷ್ಯರು. ಹರಸಿ, ಹಾರೈಸಿ ಎಂದು ಹೇಳಿದ್ದಾರೆ. 40 ವರ್ಷಗಳ ಬಳಿಕ ಇದೇ ಹೆಸರಿನಲ್ಲಿ ಸಿನಿಮಾ ಮೂಡಿಬರುತ್ತಿವುದು ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ. ಅಂದಹಾಗೆ ಈ ಬಾರಿಯ ಗುರು ಶಿಷ್ಯರು ಸಿನಿಮಾಗೆ ನಿರ್ದೇಶನ ಮಾಡುತ್ತಿರುವುದು ತರುಣ್ ಸುಧೀರ್. 

ಈ ಬಗ್ಗೆ ನಟ ಶರಣ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಫಸ್ಟ್ ಲುಕ್ ನಲ್ಲಿ ಒಂದೆಡೆ ಶರಣ್ ಮತ್ತೊಂದೆಡೆ ಮಕ್ಕಳು ಹಗ್ಗಜಗ್ಗಾಡುತ್ತಿರುವ ಚಿತ್ರವಿದೆ. ವಿಶೇಷ ಎಂದರೆ 1995ರ ಕಾಲಘಟ್ಟದ ಕಥೆ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸದ್ಯ ಫಸ್ಟ್ ಲುಕ್ ಅನೌನ್ಸ್ ಮಾಡಿರುವ ಸಿನಿಮಾತಂಡ ಜನವರಿಯಿಂದ ಚಿತ್ರೀಕರಣ ಪ್ರಾರಂಭ ಮಾಡುವ ಸಾಧ್ಯತೆ ಇದೆ.

ಗುರು ಶಿಷ್ಯರು ಸಿನಿಮಾ ಶೀರ್ಷಿಕೆಯು ನಿಮ್ಮನ್ನು ದ್ವಾರಕೀಶ್ ಹಾಸ್ಯಕ್ಕೆ ಕರೆದೊಯ್ಯುತ್ತದೆ ಮತ್ತು ಜನಪ್ರಿಯ ಗೀತೆ, ದೊಡ್ಡವರೆಲ್ಲಾ ಜಾಣರಲ್ಲ ಎಂಬ ಹಾಡನ್ನು ನೆನಪಿಸುತ್ತದೆ, ಈ ಚಲನಚಿತ್ರವು ಜನಪ್ರಿಯ ಸ್ಥಳೀಯ ಆಟ ಖೋ ಖೋವನ್ನು ಮತ್ತೆ ಮುನ್ನೆಲೆಗೆ ತರುತ್ತದೆ ಎಂದು  ನಿರ್ದೇಶಕ ತರುಣ್ ಸುಧೀರ್ ಹೇಳಿದ್ದಾರೆ. ಈ ಚಿತ್ರವನ್ನು ಜಡೇಶ್‌ ಕೆ. ಹಂಪಿ ನಿರ್ದೇಶನ ಮಾಡಲಿದ್ದು, ಲಡ್ಡು ಸಿನಿಮಾಸ್‌ ಹೌಸ್‌ ಮತ್ತು ತರುಣ್‌ ಸುಧೀರ್‌ ಕ್ರಿಯೇಟಿವ್ಸ್‌ ಜಂಟಿಯಾಗಿ ಈ ಚಿತ್ರ ನಿರ್ಮಿಸಲಿವೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com