ದಿಯಾ ಪೋಸ್ಟರ್
ದಿಯಾ ಪೋಸ್ಟರ್

ಸಕ್ಸಸ್ ಪಾರ್ಮುಲಾ ಸ್ಟಾರ್ ಗಳಿಗೆ ಮಾತ್ರ, ಹೊಸಬರಿಗೆ ವರ್ಕೌಟ್ ಆಗಲ್ಲ: ಕೆಎಸ್ ಅಶೋಕ್

ದೆವ್ವ ನಂಬಿದರೆ ದೊಡ್ಡ ಮಟ್ಟದಲ್ಲಿ ಗೆಲ್ಲಬಹುದು ಎಂದು ತೋರಿಸಿ ಕೊಟ್ಟವರು. ಹೆದರಿಸುತ್ತಲೇ ಥಿಯೇಟರ್‌ ತುಂಬಿಸಿದ ತಂಡ. ಆ ಹಾರರ್‌ ತಂಡ ಮತ್ತೆ ಬಂದಿದೆ. ಆ ತಂಡ ಬೇರಾರೂ ಅಲ್ಲ, ‘6-5=2’ ಚಿತ್ರತಂಡ. 
Published on

ಬೆಂಗಳೂರು: ದೆವ್ವ ನಂಬಿದರೆ ದೊಡ್ಡ ಮಟ್ಟದಲ್ಲಿ ಗೆಲ್ಲಬಹುದು ಎಂದು ತೋರಿಸಿ ಕೊಟ್ಟವರು. ಹೆದರಿಸುತ್ತಲೇ ಥಿಯೇಟರ್‌ ತುಂಬಿಸಿದ ತಂಡ. ಆ ಹಾರರ್‌ ತಂಡ ಮತ್ತೆ ಬಂದಿದೆ. ಆ ತಂಡ ಬೇರಾರ‍ಯರೂ ಅಲ್ಲ, ‘6-5=2’ ಚಿತ್ರತಂಡ. 

ಈಗ ಅದೇ ತಂಡ ಸೇರಿಕೊಂಡು ಮತ್ತೊಂದು ಸಿನಿಮಾ ಮಾಡಿ, ಚಿತ್ರೀಕರಣ ಕೂಡ ಮುಗಿಸಿ ಫೆ.7ಕ್ಕೆ ತೆರೆ ಮೇಲೆ ತರುವುದಕ್ಕೆ ಹೊರಟಿದೆ. ಪಕ್ಕಾ ಪ್ರೇಮ ಕತೆಯ ಸಿನಿಮಾ. ಚಿತ್ರದ ಹೆಸರು ‘ದಿಯಾ’. 

ಅಶೋಕ್‌ ಕೆ ಎಸ್‌ ನಿರ್ದೇಶನ. ಕೃಷ್ಣ ಚೈತನ್ಯ ನಿರ್ಮಾಣ. ದೀಕ್ಷಿತ್‌, ಪೃಥ್ವಿ ಅಂಬಾರ್‌, ಪವಿತ್ರಾ ಲೋಕೇಶ್‌, ಖುಷಿ ಚಿತ್ರದ ಮುಖ್ಯ ಪಾತ್ರಧಾರಿಗಳು. ಬದುಕಿನ ನೆನಪುಗಳ ಹೆಜ್ಜೆಗಳಂತೆ ಸಾಗುವ ಈ ಕತೆ, ಹೀಗೆ ನಾಲ್ಕಾರು ಪಾತ್ರಗಳನ್ನೇ ನಂಬಿಕೊಂಡು ಸಾಗುತ್ತದೆ.

ಒಂದೇ ರೀತಿಯ ಸಿನಿಮಾ ಮಾಡುವುದು ಅಂದರೆ ಒದು ಸಿನಿಮಾ ಸಕ್ಸಸ್ ಆಗಿದೆ ಎಂದ ಕೂಡಲೇ ಅದೇ ರೀತುಯ ಸಿನಿಮಾ ಮತ್ತೆ ಮಾಡುವುದು ಹೊಸಬರಿಗೆ ವರ್ಕೌಟ್ ಆಗುವುದಿಲ್ಲ, ಸಕ್ಸಸ್ ಫಾರ್ಮುಲಾ ಸ್ಟಾರ್ ಗಳಿನೆ ಮಾತ್ರ ಅನ್ವಯಸುತ್ತದೆ.  ಎಂದು ನಿರ್ದೇಶಕ ಕೆ.ಎಸ್ ಅಶೋಕ ಹೇಳಿದ್ದಾರೆ.

ನಾನು ಅವತಾರ್-2 ಸಿನಿಮಾ ಮಾಡುತ್ತಿಲ್ಲ ಎಂಬುದು ನನಗೆ ತಿಳಿದಿದೆ.  6-5=2 ಸಿನಿಮಾ ನನಗೆ ಯಶಸ್ಸು ತಂದುಕೊಟ್ಟಿತ್ತು. ಆ ಸಿನಿಮಾವನ್ನು ನಾನು ಅತಿ ಕಡಿಮೆ ಬಜೆಟ್ ನಲ್ಲಿ ಮುಗಿಸಿದೆ.  

ಪ್ರೀತಿಯ ಕಥೆಯುಳ್ಳ ಸಿನಿಮಾ ಮಾಡುವುದು ಸವಾಲಿನ ವಿಷಯವಾಗಿದೆ.  ನಿರರ್ಮಾಪಕರ ಒತ್ತಾಯದ ಮೇರೆಗೆ ಪ್ರಮೋಷನಲ್ ಟ್ರಾಕ್ ಅಳವಡಿಸಲಾಗುವುದು, ರೋಮ್ಯಾಂಟಿಕ್ ಹಾಡುಗಳಿಲ್ಲದ ಪ್ರೇಮ ಕಥೆಯ ಸಿನಿಮಾ ಮಾಡುವುದು ಕಷ್ಟ ಎಂದು ಹೇಳಿದ್ದಾರೆ.

ನಿರ್ಮಾಪಕ ಕೃಷ್ಣ ಚೈತನ್ಯ ಅವರಿಗೆ ತಡವಾದರೂ ಒಂದು ಒಳ್ಳೆಯ ಸಿನಿಮಾ ಮಾಡಿದ ತೃಪ್ತಿ ಅವರದ್ದು. ‘6-5=2 ಚಿತ್ರ ಆದ ಮೇಲೆ ಕರ್ವ ಚಿತ್ರ ನಿರ್ಮಿಸಿದೆ. ಈಗ ಒಂದು ಪ್ರೇಮಕತೆಯನ್ನೇ ಪ್ರಧಾನವಾಗಿಟ್ಟುಕೊಂಡ ಸಿನಿಮಾ ಮಾಡಿ ನಿಮ್ಮ ಮುಂದಿಟ್ಟಿದ್ದೇವೆ. ಇದು ಇಡೀ ತಂಡದ ಸಿನಿಮಾ. ನಟನೆಗೆ ಮಹತ್ವ ಇರುವ ಕತೆಯಾಗಿದ್ದು, ನನ್ನ ಸಂಸ್ಥೆಯಲ್ಲಿ ಒಂದು ಒಳ್ಳೆಯ ಸಿನಿಮಾ ಮಾಡಿದ ಖುಷಿ ಇದೆ’ ಎಂದರು ಕೃಷ್ಣ ಚೈತನ್ಯ.

ಈ ಚಿತ್ರವನ್ನು ಕೆಆರ್‌ಜಿ ಸ್ಟುಡಿಯೋ ವಿತರಣೆ ಮಾಡುತ್ತಿದೆ. ಕಾರ್ತಿಕ್‌ ಗೌಡ ಫೆ.7ರಂದು ಚಿತ್ರವನ್ನು 100 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ತಯಾರಿ ಮಾಡಿಕೊಂಡಿದ್ದಾರೆ.

ಚಿತ್ರದ ನಾಯಕ ದೀಕ್ಷಿತ್‌ ಅವರಿಗೆ ಇಲ್ಲಿ ವಿಶೇಷವಾದ ಪಾತ್ರ ಇದೆಯಂತೆ. ‘ತುಂಬಾ ಒಳ್ಳೆಯ ಹುಡುಗ. ಕಾಲೇಜಿನಿಂದ ಕೆಲಸದ ತನಕ ನನ್ನ ಪಾತ್ರ ಸಾಗುತ್ತದೆ. ಹೀಗಾಗಿ ಸಾಕಷ್ಟುಏರಿಳಿತಗಳನ್ನು ಪಾತ್ರ ಒಳಗೊಂಡಿದೆ. ಕತೆಯ ಟ್ರಾವಲ್‌ ಆಗುವುದೇ ವಿಶೇಷವಾಗಿದೆ’ ಎಂಬುದು ದೀಕ್ಷಿತ್‌ ಮಾತು. ಇನ್ನೂ ಚಿತ್ರದ ನಾಯಕಿ ಖುಷಿ ಅವರದ್ದು ಇಲ್ಲಿ ದಿಯಾ ಎನ್ನುವ ಪಾತ್ರ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com