ಮಾನವೀಯತೆ ಮೆರೆದ ನವರಸನಾಯಕ, ಅಂಧ ಗಾಯಕಿಯರಿಗೆ ನೆರವಾದ ಜಗ್ಗೇಶ್
ಸ್ಯಾಂಡಲ್ ವುಡ್ ನವರಸನಾಯಕ ಜಗ್ಗೇಶ್ ತಮ್ಮ ನೇರಾನೇರ ಮಾತುಗಳಿಂದ ಸದಾ ಸುದ್ದಿ ಮಾಡುತ್ತಾರೆ. ಅದೇ ರೀತಿ ಮಾನವೀಯ ಗುಣದಿಂದಾಗಿ ಸಹ ಅವರು ಅಪಾರ ಜನಮೆಚ್ಚುಗೆ ಗಳಿಸಿದ್ದಾರೆ ಎನ್ನುಉವುದು ಸಹ ಸತ್ಯ.
ಇದೀಗ ಖಾಸಗಿ ವಾಹಿನಿ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ "ಸರಿಗಮಪ ಸೀಸನ್ ೧೭" ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಇಬ್ಬರು ಅಂಧ ಗಾಯಕಿಯರಿಗೆ ಜಗ್ಗೇಶ್ ನೆರವಿನ ಹಸ್ತ ಚಾಚಿದ್ದಾರೆ.
ತುಮಕೂರಿನ ಇಬ್ಬರು ಅಂಧ ಸಹೋದರಿಯರಿಗೆ ಜಗ್ಗೇಶ್ ನೆರವಾಗಿದ್ದಾರೆ.ಅಂಧ ಸೋದರಿಯರ ಕಷ್ಟ ಕೇಳಿದ ಜಗ್ಗೇಶ್ ಮನ ಮರುಗಿದ್ದು ಅವರಿಗೆ ಮನೆ ನಿರ್ಮಿಸಿಕೊಟ್ಟು ನೆರವಾಗಲು ನಿರ್ಧರಿಸಿದ್ದಾರೆ.
ಅಂಧ ಸೋದರಿಯರಿಗೆ ತಕ್ಷಣವೇ ಸೂರು ಕಲ್ಪಿಸಿಕೊಡಲು ಕೊರಟಗೆರೆ ಜಗ್ಗೇಶ್ ಅಭಿಮಾನಿಗಳ ಸಂಘದ ಫ್ರೆಂಡ್ಸ್ ಗ್ರೂಪ್ ಗೆ ಜವಾಬ್ಧಾರಿ ನೀಡಿದ್ದಾಗಿ ಜಗ್ಗೇಶ್ ಹೇಳಿದ್ದಾರೆ. ನಟನ ಈ ಔದಾರ್ಯಕ್ಕೆ ಅವರ ಅಭಿಮಾನಿಗಳು ಸಹ ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನೊಂದೆಡೆ ಸರಿಗಮಪ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಸಹ ಈ ಸೋದರಿಯರಿಗೆ ನೆರವಾಗಿದ್ದು ಇನ್ನು ಮುಂದೆ ತಿಂಗಳ ದಿನಸಿ ವ್ಯವಸ್ಥೆ ತಮ್ಮ ಕಡೆಯಿಂದ ಸಿಗಲಿದೆ ಎಂದಿದ್ದಾರೆ ಈ ಮೂಲಕ ಅಸಹಾಯಕ, ದುರ್ಬಲ ವರ್ಗದವರ ಸಹಾಯಕ್ಕೆ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಸದಾ ಸಿದ್ದವಾಗಿರುತ್ತಾರೆ ಎಂದು ಖಾತ್ರಿ ಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ