ಷರ್ಲಾಕ್  ಹೋಮ್ಸ್ ನ ದೇಶೀಯ ಆವೃತ್ತಿಯೇ 'ಶಿವಾಜಿ ಸುರತ್ಕಲ್' - ರಮೇಶ್ ಅರವಿಂದ್ 

ಶಿವಾಜಿ ಸುರತ್ಕಲ್ - ದಿ ಕೇಸ್ ಆಫ್ ರಣಗಿರಿ ರಹಸ್ಯ ರಮೇಶ್ ಅರವಿಂದ್ ಅವರ 101 ನೇ ಚಿತ್ರ, ಆದರೆ ನಟ ಮಾತ್ರ 1, 21, 31ನೇ ಚಿತ್ರದಲ್ಲಿ ಅಭಿನಯಿಸುವಾಗಿದ್ದ ಅದೇ ಉತ್ಸಾಹವನ್ನು ಹೊಂದಿದ್ದಾರೆ.“ನನಗೆ ಇನ್ನೂ ಅದೇ ಉತ್ಸಾಹವಿದೆ ನಾನು ಶೂಟಿಂಗ್‌ಗೆ ಹೋಗುವಾಗಸೀನ್ ಗಳ ಇಂಪ್ರೂ ಮಾಡುವಾಗ ನನ್ನ ಚೊಚ್ಚಲಚಿತ್ರ ಮಾಡುವಾಗ ಯಾವ ಭಾವನೆ ಇದೆಯೋ ಅದೇ ಭಾವನೆ ಇರುತ್ತದೆಅದುವೇ ನನ್ನನ್
ರಮೇಶ್ ಅರವಿಂದ್
ರಮೇಶ್ ಅರವಿಂದ್

ಶಿವಾಜಿ ಸುರತ್ಕಲ್ - ದಿ ಕೇಸ್ ಆಫ್ ರಣಗಿರಿ ರಹಸ್ಯ ರಮೇಶ್ ಅರವಿಂದ್ ಅವರ 101 ನೇ ಚಿತ್ರ, ಆದರೆ ನಟ ಮಾತ್ರ 1, 21, 31ನೇ ಚಿತ್ರದಲ್ಲಿ ಅಭಿನಯಿಸುವಾಗಿದ್ದ ಅದೇ ಉತ್ಸಾಹವನ್ನು ಹೊಂದಿದ್ದಾರೆ.“ನನಗೆ ಇನ್ನೂ ಅದೇ ಉತ್ಸಾಹವಿದೆ ನಾನು ಶೂಟಿಂಗ್‌ಗೆ ಹೋಗುವಾಗಸೀನ್ ಗಳ ಇಂಪ್ರೂ ಮಾಡುವಾಗ ನನ್ನ ಚೊಚ್ಚಲಚಿತ್ರ ಮಾಡುವಾಗ ಯಾವ ಭಾವನೆ ಇದೆಯೋ ಅದೇ ಭಾವನೆ ಇರುತ್ತದೆಅದುವೇ ನನ್ನನ್ನು ಮುಂದುವರಿಸುತ್ತಿದೆ. 101ನೇ ಚಿತ್ರದಲ್ಲಿಯೂ ನಾನು ಮತ್ತೆ ಹೊಸ ಚಿತ್ರದ ಮೂಲಕ ಹೊಸ ಹಾದಿಯಲ್ಲಿ ಸಾಗುತ್ತಿರುವಂತೆ ಭಾಸವಾಗುತ್ತದೆ.ನಾನು ತುಸು ಬುದ್ದಿವಂತಿಕೆಯಿಂದ ಹೊಸ ಕೆಲಸಗಳನ್ನು ಮಾಡಲು ಬಯಸುತ್ತೇನೆ ”ಎಂದು ಅವರು ಹೇಳೀದ್ದಾರೆ.

"ಪುಷ್ಪಕ ವಿಮಾನ" ಚಿತ್ರ ಬಂದು ಮೂರು ವರ್ಷಗಳ ನಂತರ ಪ್ರೇಕ್ಷಕರು ರಮೇಶ್ ಅರವಿಂದ್ ಅವರನ್ನು ಮತ್ತೆ ಬೆಳ್ಳಿ ಪರದೆಯ ಮೇಲೆ ನೋಡುತ್ತಿದ್ದಾರೆ “ಕಳೆದ ಮೂರು ವರ್ಷಗಳಲ್ಲಿ ನಾನು ತುಂಬಾ ಕೆಲಸದಲ್ಲಿ ತೊಡಗಿದ್ದೆ.  ನಾನು ಎರಡು ಚಿತ್ರಗಳನ್ನು ನಿರ್ದೇಶಿಸಿದ್ದೇನೆ - ದಿ ಕ್ವೀನ್ ರೀಮೇಕ್ಸ್ -ಬಟರ್ಫ್ಲೈ ಇನ್ ಕನ್ನಡ ಮತ್ತು ಪ್ಯಾರಿಸ್  ತಮಿಳುಭಾಷೆಗಳಲ್ಲಿದೆ.ನಾನು ದೂರದರ್ಶನದಲ್ಲಿ ಎರಡು ರಿಯಾಲಿಟಿ ಶೋಗಳ ಭಾಗವಾಗಿದ್ದೆ. ಏತನ್ಮಧ್ಯೆ, ಶಿವಾಜಿ ಸೂರತ್ಕಲ್, 100 ಮತ್ತು ಭೈರಾದೇವಿ ಎನ್ನುವ ಮೂರು ಚಿತ್ರಗಳಲ್ಲಿ ನಾನು ಅಭಿನಯಿಸಿದೆ.ತಡೆರಹಿತವಾದ ಈ ಕೆಲಸ ಕಾರ್ಯಗಳು ಬಹುಷಃ 2020 ರಲ್ಲಿ ಮುಗಿಯಲಿದೆ"

ರೋಮ್ಯಾಂಟಿಕ್ ಕಾಮಿಡಿ ಹಾಗೂ ಫ್ಯಾಮಿಲಿ ಸೆಂಟಿಮೆಂಟ್  ಚಿತ್ರಗಳಲ್ಲಿ ಯಶಸ್ವಿಯಾದ ಈ ನಟ, ತಾನು ಸರಿಯಾದ ಕಥಾವಸ್ತುವಿಗಾಗಿ ಕಾಯುತ್ತಿದ್ದೆ ಎಂದು ಹೇಳುತ್ತಾರೆ.“ನನ್ನ ಹಿಂದಿನ ಚಿತ್ರ ಆಕ್ಸಿಡೆಂಟ್ ಥ್ರಿಲ್ಲರ್  ಆಗಿತ್ತು.ಈ ಬಾರಿ ನಾನು ಮೊದಲ ಬಾರಿಗೆ ಪತ್ತೇದಾರಿ ಪಾತ್ರ ವಹಿಸುತ್ತಿದ್ದೇನೆ. ಇತರ ಪ್ರಕಾರಗಳಿಗಿಂತ ಭಿನ್ನವಾಗಿ, ಸಾವು ಒಂದು ಭಾವನಾತ್ಮಕ ಸನ್ನಿವೇಶ ಕಲ್ಪಿಸುತ್ತದೆ.ಆದರೆ ಥ್ರಿಲ್ಲರ್ ನಲ್ಲಿ ಇದು ಒಂದು ಒಗಟು, ಮತ್ತು ಕ್ಲೈಮ್ಯಾಕ್ಸ್ ನಲ್ಲಿ ಇದು ಬೇರೆಯದೇ ಕಥೆಯಾಗಿರಲಿದೆ.ಅಂತಹ ಚಿತ್ರಗಳಲ್ಲಿ, ಪ್ರೇಕ್ಷಕರು ಭಾವನೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಆದರೆ ಅಪರಾಧಿ ಯಾರೆಂಬುದರ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ, ಇದು ಚಿತ್ರ್ವನ್ನು ನೋಡಲು ಅವರನ್ನು ಚಿತ್ರಮಂದಿರಕ್ಕೆ ಬರುವಂತೆ ಮಾಡಲಿದೆ.ನೀವು ಶಿವಾಜಿ ಸುರತ್ಕಲ್ ನ ಕಥೆಯಲ್ಲಿ ಮುಳುಗೇಳದೆ ನಿಮಗೆ ಕ್ಲೈಮ್ಯಾಕ್ಸ್ ಏನೆಂದು ಅರ್ಥವಾಗಲ್ಲ" ರಮೇಶ್ ವಿವರಿಸಿದ್ದಾರೆ.

ಅವರು ಮೊದಲ ಬಾರಿಗೆ ಥ್ರಿಲ್ಲರ್ಸ್ಟೋರಿಯೊಡನೆ ಬಂದಿದ್ದಾರೆ. ಹಾಗೆಂದು ಇದೇನೂ ತಡವಾಗಿದೆ ಎಂದು ಅವರು ಭಾವಿಸಿಲ್ಲ.“ಇಂದಿಗೂ, ನನ್ನ ಹೆಂಡತಿ ಮತ್ತು ಮಗಳು ನೆಟ್‌ಫ್ಲಿಕ್ಸ್‌ನಲ್ಲಿ ದಿ ಮೆಂಟಲಿಸ್ಟ್ ಅಥವಾ ಷರ್ಲಾಕ್ ಹೋಮ್ಸ್ ನಂತಹ ಚಲನಚಿತ್ರಗಳು ಮತ್ತು ಸೀರೀಸ್ ಗಳನ್ನು  ವೀಕ್ಷಿಸುತ್ತಾರೆ. ಮನೆಯ ಹೆಂಗಸರು ಈ ರೀತಿಯ ಚಲನಚಿತ್ರಗಳನ್ನು ಇಷ್ಟಪಡುವಾಗ, ನೀವು ಅದನ್ನು ತಯಾರಿಸಲೇಬೇಕು" ರಮೇಶ್ ಅವರ ಪ್ರಕಾರ, ಶಿವಾಜಿ ಸುರತ್ಕಲ್  ಷರ್ಲಾಕ್ ಹೋಮ್ಸ್ ಕಥೆಯ ದೇಶೀ ಆವೃತ್ತಿಯಾಗಿದೆ.

"ಪ್ರಪಂಚದಾದ್ಯಂತ ಡಿಟೆಕ್ಟಿವ್ ಗಳಿದ್ದಾರೆ.ಅವರು ಸಮಸ್ಯೆಗಳನ್ನು ಪರಿಹರಿಸಬಹುದು. ಆದರೆ ಷರ್ಲಾಕ್ರು ತುಂಬಾ ಆಕರ್ಷಕವಾಗಿರುತ್ತಾರೆ. ಶಿವಾಜಿಯೂ ವಿಭಿನ್ನವಾಗಿ ಯೋಚಿಸುತ್ತಾನೆ ಆತ ಖಿನ್ನತೆಗೆ ಜಾರುತ್ತಾನೆ.ಆದರೆ ಅವನು ಹೇಳಿದಂತೆ ಸುಂದರವಾದ ಮನಸ್ಸುಗಳು ಕೆಲವೊಮ್ಮೆ ಹುಚ್ಚುತನದ ಅಂಚಿನಲ್ಲಿರುತ್ತವೆ," ರಮೇಶ್ ವಿವರಿಸುತ್ತಾರೆ

ಆಕಾಶ್ ಶ್ರೀವತ್ಸ ಬಗೆಗೆ ಮಾತನಾಡಿದ ರಮೇಶ್ "ಅವರು ಆಕ್ಸಿಡೆಂಟಲಿ  ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅವರು ಸಿನೆಮಾಕ್ಕೆ ಪ್ರವೇಶಿಸಿದಾಗ. ಅವರು ವಿನ್ಯಾಸಗೊಳಿಸಿದ ಪೋಸ್ಟರ್‌ಗಳಲ್ಲಿ ಒಂದು ನನಗೆ ಇಷ್ಟವಾಗಿದೆ. . ಅವರು ಉತ್ತಮ ಎಡಿಟಿಂಗ್ ಸಾಮರ್ಥ್ಯ ಹೊಂದಿದ್ದಾರೆಂದು  ನನಗೆ ತಿಳಿದಿತ್ತು, ಮತ್ತು ಅವರು ಈ ಸ್ಕ್ರಿಪ್ಟ್ ಅನ್ನು ನನಗೆ ವಿವರಿಸಿದಾಗ, ನಾನು ಸಹ ಸಲಹೆಗಳನ್ನು ನೀಡಿದ್ದೇನೆ. ಬಳಿಕವೇ ಇದನ್ನು ತೆಗೆದುಕೊಳ್ಳಲು ನಿರ್ಧರಿಸಿದೆ. 

"ಚಿತ್ರದ ಕ್ಲೈಮ್ಯಾಕ್ಸ್ ಭಯಂಕರವಾದದ್ದು ಮತ್ತು ಹಿಂದೆಂದೂ ನೋಡದಿರುವಂತಹುದು. ಎಂದು ನಾನು ಬಯಸುತ್ತೇನೆ. ಅವರು ಪೂರ್ಣ ಪ್ರಮಾಣದ ಬೌಂಡ್ ಸ್ಕ್ರಿಪ್ಟ್‌ನೊಂದಿಗೆ ಆರು ಬಾರಿ ಕೆಲಸ ಮಾಡಿದರು, ನಂತರ ನಾವು ಅದನ್ನು ಅಂತಿಮಗೊಳಿಸಿದ್ದೇವೆ ”

“ಚಲನಚಿತ್ರ ನೋಡುವವರು ಚಲನಚಿತ್ರವನ್ನು ವೀಕ್ಷಿಸಲು, ಮನರಂಜನೆ ಪಡೆಯಲು 00 ರೂ ಖರ್ಚು ಮಾಡುತ್ತಾರೆ. ಹಾಗಾಗಿ ಅವನನ್ನು ತನ್ನ ಕುರ್ಚಿಯ ತುದಿಯಲ್ಲೇ ಕೂಡುವಂತೆ ಮಾಡುವುದು ದು ನಿರ್ದೇಶಕರ ಕರ್ತವ್ಯ. ಶಿವಾಜಿ  ಸುರತ್ಕಲ್  ಅದನ್ನು ಮಾಡಲು ಸಮರ್ಥವಾಗಿದೆ."ಅವರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com