ಸೂರಿ
ಸೂರಿ

ಕಾಗೆ ಬಂಗಾರಕ್ಕೆ ನಿರ್ದೇಶಕ ಸೂರಿ ಹೊಸ ಟ್ವಿಸ್ಟ್!

ನಿರ್ದೇಶಕ ಸೂರಿ   'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾದ ಮಧ್ಯೆ 'ಕಾಗೆ ಬಂಗಾರ' ಕಥೆಯನ್ನು ತಂದಿದ್ದಾರೆ. ಸಿನಿಮಾ ಮುಗಿದಾಗ 'ಕಾಗೆ ಬಂಗಾರ' ಸಿನಿಮಾ 2020ಕ್ಕೆ ಬಿಡುಗಡೆ ಆಗುತ್ತದೆ ಎಂದು ತೋರಿಸುತ್ತಾರೆ.
Published on

ನಿರ್ದೇಶಕ ಸೂರಿ   'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾದ ಮಧ್ಯೆ 'ಕಾಗೆ ಬಂಗಾರ' ಕಥೆಯನ್ನು ತಂದಿದ್ದಾರೆ. ಸಿನಿಮಾ ಮುಗಿದಾಗ 'ಕಾಗೆ ಬಂಗಾರ' ಸಿನಿಮಾ 2020ಕ್ಕೆ ಬಿಡುಗಡೆ ಆಗುತ್ತದೆ ಎಂದು ತೋರಿಸುತ್ತಾರೆ. ಜೊತೆಗೆ ತೆರೆ ಮೇಲೆ ಚಾರ್ಲಿ ಚಾಪ್ಲಿನ್ ಫೋಟೋ ಹಾಗೂ ಅವರ 'let's burn the city' ಎಂಬ ವಾಕ್ಯ ಕೂಡ ಬರುತ್ತದೆ.

‘ಕಾಗೆಬಂಗಾರ’ದಲ್ಲಿ ಈ ಮೊದಲೇ ಹೇಳಿದಂತೆ ಪ್ರಶಾಂತ್ ಸಿದ್ಧಿ ಮತ್ತು ಪೂರ್ಣಚಂದ್ರ ಮೈಸೂರು ಮುಖ್ಯಭೂಮಿಕೆಯಲ್ಲಿರಲಿದ್ದಾರೆ. ‘ಕೆಂಡಸಂಪಿಗೆ’ ಸಿನಿಮಾ ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿತ್ತು. ಹಾಗಾದರೆ ‘ಕಾಗೆಬಂಗಾರ’ವೂ ಹಾಗೇ ಇರಲಿದೆಯೇ? ಇಲ್ಲ ಎಂಬ ಉತ್ತರ ಸೂರಿ ಅವರಿಂದಲೇ ಸಿಕ್ಕಿದೆ. ಕಾಮಿಡಿ ಶೈಲಿಯಲ್ಲಿ ‘ಕಾಗೆಬಂಗಾರ’ ಸಿನಿಮಾ ತೆರೆಗೆ ತರಲು ಪ್ಲಾ್ಯನ್ ಮಾಡಿದ್ದು, ಮೊದಲ ಬಾರಿ ನಗಿಸುವ ಕೆಲಸಕ್ಕೆ ಕೈಹಾಕಲಿದ್ದಾರೆ.

ಈಗಾಗಲೇ ಸಿನಿಮಾ ಚಿತ್ರೀಕರಣಕ್ಕಾಗಿ ಲೊಕೇಷನ್ ಹುಡುಕಾಟದಲ್ಲಿರುವ ಸೂರಿ ಆಂಡ್ ಟೀಮ್ ಶೀಘ್ರದಲ್ಲಿ ಶೂಟಿಂಗ್​ಗೆ ಚಾಲನೆ ನೀಡಲಿದೆ. ಈಗಾಗಲೇ ‘ಪಾಪ್​ಕಾರ್ನ್ ಮಂಕಿ ಟೈಗರ್’ ಸಿನಿಮಾಕ್ಕೆ ತಾಂತ್ರಿಕವಾಗಿ ಕೆಲಸ ಮಾಡಿದ ಸಂಗೀತ ನಿರ್ದೇಶಕ ಚರಣ್​ರಾಜ್, ಛಾಯಾಗ್ರಾಹಕ ಶೇಖರ್, ಸಂಕಲನಕಾರ ದೀಪು ಎಸ್. ಕುಮಾರ್ ಸೇರಿ ಹಲವರು ‘ಕಾಗೆಬಂಗಾರ’ದಲ್ಲೂ ಮುಂದುವರಿಯಲಿದ್ದಾರೆ ಎನ್ನಲಾಗುತ್ತಿದ್ದು, ಸುಧೀರ್ ಕೆ.ಎಂ. ಅವರೇ ನಿರ್ಮಾಣ ಮಾಡುವ ಸಾಧ್ಯತೆಗಳಿವೆ.

‘ಕಾಗೆಬಂಗಾರ’ದಲ್ಲಿ ಈ ಮೊದಲೇ ಹೇಳಿದಂತೆ ಪ್ರಶಾಂತ್ ಸಿದ್ಧಿ ಮತ್ತು ಪೂರ್ಣಚಂದ್ರ ಮೈಸೂರು ಮುಖ್ಯಭೂಮಿಕೆಯಲ್ಲಿರಲಿದ್ದಾರೆ. ‘ಕೆಂಡಸಂಪಿಗೆ’ ಸಿನಿಮಾ ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿತ್ತು. ಹಾಗಾದರೆ ‘ಕಾಗೆಬಂಗಾರ’ವೂ ಹಾಗೇ ಇರಲಿದೆಯೇ? ಇಲ್ಲ ಎಂಬ ಉತ್ತರ ಸೂರಿ ಅವರಿಂದಲೇ ಸಿಕ್ಕಿದೆ. ಕಾಮಿಡಿ ಶೈಲಿಯಲ್ಲಿ ‘ಕಾಗೆಬಂಗಾರ’ ಸಿನಿಮಾ ತೆರೆಗೆ ತರಲು ಪ್ಲಾ್ಯನ್ ಮಾಡಿದ್ದು, ಮೊದಲ ಬಾರಿ ನಗಿಸುವ ಕೆಲಸಕ್ಕೆ ಕೈಹಾಕಲಿದ್ದಾರೆ.

ಪಶಾಂತ್ ಸಿದ್ದಿ ಹಾಗೂ ಪೂರ್ಣಚಂದ್ರ ಮೈಸೂರು 'ಕಾಗೆ ಬಂಗಾರ'ದ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. '

ಈ ಬಗ್ಗೆ ಮಾತನಾಡಿದ ಸೂರಿ,   ಈಗಾಗಲೇ ‘ಪಾಪ್​ಕಾರ್ನ್ ಮಂಕಿ ಟೈಗರ್’ ಸಿನಿಮಾಕ್ಕೆ ತಾಂತ್ರಿಕವಾಗಿ ಕೆಲಸ ಮಾಡಿದ ಸಂಗೀತ ನಿರ್ದೇಶಕ ಚರಣ್​ರಾಜ್, ಛಾಯಾಗ್ರಾಹಕ ಶೇಖರ್, ಸಂಕಲನಕಾರ ದೀಪು ಎಸ್. ಕುಮಾರ್ ಸೇರಿ ಹಲವರು ‘ಕಾಗೆಬಂಗಾರ’ದಲ್ಲೂ ಮುಂದುವರಿಯಲಿದ್ದಾರೆ ಎಂದು ಸೂರಿ ಹೇಳಿದ್ದಾರೆ.

ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾವನ್ನು  ಕೆಲವು ಜನ ಮೆಚ್ಚಿದ್ದಾರೆ, ಎಲ್ಲರನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ ಎಂದು ಸೂರಿ ತಿಳಿಸಿದ್ದಾರೆ. 

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com