ಬಿಫ್ಸ್ ಸಮಾರಂಭದ ಸಿದ್ಧತೆ
ಬಿಫ್ಸ್ ಸಮಾರಂಭದ ಸಿದ್ಧತೆ

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಅತಿಥಿಗಳಲ್ಲಿ 67 ರಾಜಕಾರಣಿಗಳು, 4ಮಂದಿ ಮಾತ್ರ ಸಿನಿಮಾದವರು!

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭಗೊಳ್ಳಲು ದಿನಗಣನೆ ಆರಂಭವಾಗಿದೆ. ಫೆ. 27ರಿಂದ ಸಿನಿಮಾ ಪ್ರದರ್ಶನ ಆರಂಭವಾಗಲಿದೆ. 48 ದಿನಗಳ ಅವಧಿಯಲ್ಲಿಯೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಳಿಸಲಾಗಿದೆ.

ಬೆಂಗಳೂರು:  ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭಗೊಳ್ಳಲು ದಿನಗಣನೆ ಆರಂಭವಾಗಿದೆ. ಫೆ. 27ರಿಂದ ಸಿನಿಮಾ ಪ್ರದರ್ಶನ ಆರಂಭವಾಗಲಿದೆ. 48 ದಿನಗಳ ಅವಧಿಯಲ್ಲಿಯೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಳಿಸಲಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಕೇಂದ್ರ ಸಚಿವ ಡಿವಿ ಸದಾನಂದ ಗೌಡ, ನಿರ್ಮಲಾ ಸೀತಾರಾಮನ್, ಡಿಸಿಎಂ ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ,ಸೇರಿದಂತೆ ಹಲವು ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಆಹ್ವಾನಿಸಲಾಗಿದೆ.

ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಯಶ್,  ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್, ಸೋನು ನಿಗಮ್, ಹಾಗೂ ಜಯಪ್ರದಾ ಅವರನ್ನು ಕೂಡಾ ಆಹ್ವಾನಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ  ಕನ್ನಡ ಸಿನಿಮಾ ರಂಗ ಪ್ರಸಿದ್ಧವಾಗುತ್ತಿದೆ,  ವಿದೇಶಗಳಲ್ಲಿ ನಮ್ಮ ಹಲವು ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ.  ಆದರೆ ನಮ್ಮ ಸರ್ಕಾರವೇ ನಮ್ಮನ್ನು ಗುರುತಿಸದಿರುವುದು ದುರಾದೃಷ್ಟಕರ ಎಂದು ನಿರ್ದೇಶಕರೊಬ್ಬರು ಬೇಸರ ವ್ಯಕ್ತ ಪಡಿಸಿದ್ದಾರೆ.

ಅನಂತನಾಗ್, ದ್ವಾರಕೀಸ್, ಬಿ ಸರೋಜಾ ದೇವಿ, ಸೇರಿದಂತೆ ಹಲವು ದಿಗ್ಗಜರು ನಮ್ಮೊಂದಿಗಿದ್ದಾರೆ, ಇವರ ಕೊಡುಗೆ ಸಿನಿಮಾಅಪಾರವಾಗಿದೆ, ಆದರೆ ಆಹ್ವಾನ ಪತ್ರಿಕೆಯಲ್ಲಿ ನಮ್ಮ ಯಾವುದೇ ಕಲಾವಿದರ ಹೆಸರಿಲ್ಲ. ಕಾರ್ಯಕ್ರಮವನ್ನು ಸರ್ಕಾರ ಆಯೋಜಿಸುತ್ತಿದೆ ಎಂಬ ವಿಷಯ ನಮಗೆ ತಿಳಿದಿದೆ, ಹಾಗಂತ ಅದೊಂದು ಸರ್ಕಾರಿ ಕಾರ್ಯಕ್ರವಾಗಬಾರದು ಎಂದು ಸಲಹೆ ನೀಡಿದ್ದಾರೆ.

2020ರ BIFFes ವೆಬ್ ಸೈಟ್ ನಲ್ಲಿ ಕನ್ನಡವಿಲ್ಲ ಏಕೆ ಎಂದು ನಿರ್ದೇಶಕ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್ ನಾಗಾಭರಣ ಪ್ರಶ್ನಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com