"777 ಚಾರ್ಲಿ" ನಾಯಕಿ ಸಂಗೀತ ಶೃಂಗೇರಿ ಇದೀಗ "ಮಾರಿಗೋಲ್ಡ್" ನಲ್ಲಿ ದಿಗಂತ್ ಜತೆ ರೊಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ.ರಾಘವೇಂದ್ರ ಎಂ ನಾಯಕ್ ನಿರ್ದೇಶನದ ಈ ಚಿತ್ರದಲ್ಲಿ ಸಂಗೀತಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಟೆಲಿಸೀರಿಯಲ್ ನಿಂದ ಬೆಳ್ಳಿತೆರೆಗೆ ಬಂದಿದ್ದ ಸಾಂಗೀತಾ "A+," ಎಂಬ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದರು.ಸದ್ಯ ಈಕೆ ರಕ್ಷಿತ್ ಶೆಟ್ಟಿ ಅಭಿನಯದ, ಕಿರಣ್‌ರಾಜ್ ನಿರ್ದೇಶನದ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಮುಂದಿನ ಮಾ.5 ರಿಂದ ಮಾರಿಗೋಲ್ಡ್ ಚಿತ್ರದ ಸೆಟ್ ಗೆ ನಟಿ ಆಗಮಿಸಲಿದ್ದಾರೆ.ಇದಾಗಿ ಚಿತ್ರತಯಾರಕರು ಸಹ ಅದೇ ವಾರದಲ್ಲಿ ಚಿತ್ರದ ಶೂಟಿಂಗ್ ಪ್ರಾರಂಬಕ್ಕೆ ಯೋಜಿಸಿದ್ದಾರೆ.
ರಘುವರ್ಧನ್ ನಿರ್ಮಾಣದ ಚಿತ್ರವಿದಾಗಿದ್ದು ಕವಲುದಾರಿ ಖ್ಯಾತಿಯ ಸಂಪತ್, ಯಶ್ ಶೆಟ್ಟಿ ಮತ್ತು ಸುಧೀ ಚಿತ್ರತಂಡದ ಭಾಗವಾಗಿದ್ದಾರೆ.ರ್ ಸಮರ್ತ್ ಸಂಗೀತ ಸಂಯೋಜನೆ ಹಾಗೂ ಸಂಬಾಷಣೆ ಕೆಲಸ ನೋಡಿಕೊಳ್ಲಲಿದ್ದಾರೆ.ವಿಕ್ರಮ್ ಮೋರ್ ಆಕ್ಷನ್ ಸ್ಟಂಟ್‌ಗ ಹಾಗೂ ನೃತ್ಯದ ಭಾಗಗಳ ಜವಾಬ್ದಾರಿ ಹೊರಲಿದ್ದಾರೆ.
Advertisement