ಕಾಶಿಯ 64 ಘಾಟ್ ಗಳಲ್ಲಿ ವಿನೂತನ ಚಿತ್ರೀಕರಣ: ನಿರ್ದೇಶಕ ಜಯತೀರ್ಥ

ಜಮೀರ್ ಅಹ್ಮದ್ ಖಾನ್ ಪುತ್ರ ಜಾಹಿದ್ ಅಹ್ಮದ್ ಖಾನ್ ಬನಾರಸ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರದ ನಿರ್ದೇಶಕ ಜಯತೀರ್ಥ ಕಾಶಿಯ 64 ಘಾಟ್ ಗಳಲ್ಲಿ ಚಿತ್ರೀಕರಣ ನಡೆಸಿದ್ದಾರೆ. 
ಕಾಶಿಯ 64 ಘಾಟ್ ಗಳಲ್ಲಿ ವಿನೂತನ ಚಿತ್ರೀಕರಣ, ನಿರ್ದೇಶಕ ಜಯತೀರ್ಥ!
ಕಾಶಿಯ 64 ಘಾಟ್ ಗಳಲ್ಲಿ ವಿನೂತನ ಚಿತ್ರೀಕರಣ, ನಿರ್ದೇಶಕ ಜಯತೀರ್ಥ!

ಜಮೀರ್ ಅಹ್ಮದ್ ಖಾನ್ ಪುತ್ರ ಜಾಹಿದ್ ಅಹ್ಮದ್ ಖಾನ್ ಬನಾರಸ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರದ ನಿರ್ದೇಶಕ ಜಯತೀರ್ಥ ಕಾಶಿಯ 64 ಘಾಟ್ ಗಳಲ್ಲಿ ಚಿತ್ರೀಕರಣ ನಡೆಸಿದ್ದಾರೆ. 

ನಾಯಕಿ ಪಾತ್ರದಲ್ಲಿ ಸೋನಾಲ್ ಮಾಂಟೆರೋ ನಟಿಸುತ್ತಿರುವ ರೊಮ್ಯಾಂಟಿಕ್ ಸಿನಿಮಾ ಬನಾರಸ್ ನಲ್ಲಿ ನಿರ್ದೇಶಕ ಕಾಶಿಯನ್ನು ವಿಭಿನ್ನವಾಗಿ ಪ್ರೇಕ್ಷಕರ ಮುಂದಿಡಲಿದ್ದಾರೆ. ಚಿತ್ರದ ನಟಿಸುತ್ತಿದ್ದು, ಎಲ್ಲಾ 64 ಘಾಟ್ ಗಳಲ್ಲಿಯೂ ಚಿತ್ರೀಕರಣ ನಡೆಸಲಾಗಿದೆ. 

ನಿರ್ದೇಶಕರ ಪ್ರಕಾರ, ಭಾರತೀಯ ಸಿನಿಮಾ ರಂಗದಲ್ಲೇ ಇದು ಮೊದಲ ಪ್ರಯತ್ನವಾಗಿದ್ದು, ಇದಕ್ಕಾಗಿ ಚಿತ್ರತಂಡ 45 ದಿನಗಳ ಕಾಲ ಕಾಶಿಯಲ್ಲೇ ತಾತ್ಕಾಲಿಕ ಕ್ಯಾಂಪ್ ನಿರ್ಮಿಸಿಕೊಂಡಿದೆ. ಸುಮಾರು 45 ದಿನಗಳ ಕಾಲ ಕಾಶಿ ಚಿತ್ರೀಕರಣ ನಿಗದಿಯಾಗಿತ್ತು. ಈಗಾಗಲೇ 35 ದಿನಗಳ ಚಿತ್ರೀಕರಣ ಪೂರ್ಣಗೊಂಡಿದದ್ದು ಜ.9 ಕ್ಕೆ ಉಳಿದ ಭಾಗವೂ ಪೂರ್ಣಗೊಳ್ಳಲಿದೆ.

ಸೆಟ್ ನಿಂದ ಕೆಲವು ಚಿತ್ರಗಳನ್ನು ಸೆರೆ ಹಿಡಿಯಲಾಗಿದ್ದು ಸಿನಿಮಾದಲ್ಲಿ ವಾರಾಣಾಸಿಯನ್ನು ಬಹುತೇಕ ಒಂದು ಪಾತ್ರದಂತೆಯೇ ತೋರಿಸಲಾಗಿದೆ. ದೈವತ್ವ ಹಾಗೂ ನಕಾರಾತ್ಮಕತೆ, ಶುದ್ಧತೆ ಹಾಗೂ ಅಶುದ್ಧತೆಯ ಎಳೆಯನ್ನು ಹೊಂದಿರುವ ಕಥಾಹಂದರ ಬನಾರಸ್ ನದ್ದಾಗಿದೆ. ಕಾಶಿಗೆ ಭೇಟಿ ನೀಡದವರಿಗೆ ಅಲ್ಲಿನ ಅನುಭೂತಿಯನ್ನು ಈ ಸಿನಿಮಾ ನೀಡಲಿದೆ ಎಂದು ನಿರ್ದೇಶಕ ಜಯತೀರ್ಥ ಹೇಳಿದ್ದಾರೆ. 

ಬನಾರಸ್ ನಲ್ಲಿ ಕೆಲವು ತುಣುಕುಗಳನ್ನು ಚಿತ್ರೀಕರಿಸಿದ ನಂತರ ಸಿಂಗಪೂರ್ ಗೆ ತೆರಳಲಿದ್ದು 15 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com