'ಮೈ ನೇಮ್ ಇಸ್ ರಾಜ' ನಟನೆಗೆ ಮನೆಯವರು 'ಥೂ' ಅಂತಿದ್ದಾರೆ: ರಾಜ್ ಸೂರ್ಯನ್

ಚಂದನವನದಲ್ಲಿ ಈಗಾಗಲೇ ಎರಡು ಚಿತ್ರಗಳನ್ನು ನಿರ್ಮಿಸಿಯೂ ಅಸ್ತಿತ್ವ ಕಂಡುಕೊಳ್ಳಲಾಗದೆ ಪರಿತಪಿಸುತ್ತಿರುವ ನಾಯಕ ನಟ ಕಮ್ ನಿರ್ಮಾಪಕ ರಾಜ್ ಸೂರ್ಯನ್ ‘ಮೈ ನೇಮ್ ಇಸ್ ರಾಜ’ನಾಗಿ ಒಳ್ಳೆಯ ಅವಕಾಶ ನಿರೀಕ್ಷಿಸುತ್ತಿದ್ದಾರೆ.
ಚಿತ್ರದ ಪೋಸ್ಟರ್
ಚಿತ್ರದ ಪೋಸ್ಟರ್
Updated on

ಬೆಂಗಳೂರು: ಚಂದನವನದಲ್ಲಿ ಈಗಾಗಲೇ ಎರಡು ಚಿತ್ರಗಳನ್ನು ನಿರ್ಮಿಸಿಯೂ ಅಸ್ತಿತ್ವ ಕಂಡುಕೊಳ್ಳಲಾಗದೆ ಪರಿತಪಿಸುತ್ತಿರುವ ನಾಯಕ ನಟ ಕಮ್ ನಿರ್ಮಾಪಕ ರಾಜ್ ಸೂರ್ಯನ್ ‘ಮೈ ನೇಮ್ ಇಸ್ ರಾಜ’ನಾಗಿ ಒಳ್ಳೆಯ ಅವಕಾಶ ನಿರೀಕ್ಷಿಸುತ್ತಿದ್ದಾರೆ.

“ಈ ಚಿತ್ರವನ್ನು ಯುವಕರನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ. ರೊಮ್ಯಾಂಟಿಕ್, ಕಾಮಿಡಿ, ಫೈಟ್ ಎಲ್ಲವೂ ಇದ್ದರೂ, ಉತ್ತಮ ಸಂದೇಶ ಒಳಗೊಂಡಿದೆ ಸೆನ್ಸಾರ್ ಮಂಡಳಿ ‘ಎ’ ಸರ್ಟಿಫಿಕೆಟ್ ನೀಡಿದ್ದು, ಇದೇ 31ರಂದು ಬಿಡುಗಡೆಯಾಗಲಿದೆ’ ಎಂದು ನಾಯಕ ನಟ ರಾಜ್ ಸೂರ್ಯನ್ ಹೇಳಿದ್ದಾರೆ.

ಚಿತ್ರದ ಕೆಲ ತುಣುಕುಗಳನ್ನು ಪ್ರದರ್ಶಿಸಿದ ಬಳಿಕ ಮಾತನಾಡಿ, “ಈ ಚಿತ್ರದಲ್ಲಿ ಮೈ ಚಳಿ ಬಿಟ್ಟು ನಟಿಸಿದ್ದೇನೆ. ಇದಕ್ಕಾಗಿ ಹೆಂಡತಿ ಸೇರಿದಂತೆ ಮನೆಯವರೆಲ್ಲ ‘ಥೂ’ ಅಂತ ಉಗಿಯುತ್ತಿದ್ದಾರೆ. ಆದ್ರೂ ಪರವಾಗಿಲ್ಲ ಗಂಡ, ಹೆಂಡತಿ ಪರಸ್ಪರ ಹೇಗಿರಬೇಕೆಂಬ ಸಂದೇಶ ಚಿತ್ರದಲ್ಲಿದೆ” ಎಂದಿದ್ದಾರೆ.

ನಿರ್ದೇಶಕ ಅಶ್ಚಿನ್‍ ಚಿತ್ರಕಥೆ ಹೆಣೆದು ಆಕ್ಷನ್ ಕಟ್ ಹೇಳಿದ್ದಾರೆ. ಕಥೆಗೆ ಅನುಗುಣವಾಗಿ ಹಸಿಬಿಸಿ ದೃಶ್ಯಗಳನ್ನು ಹೆಣೆಯಲಾಗಿದೆ. ತೆಲುಗು ಹಾಗೂ ಕನ್ನಡ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಅಶ್ವಿನ್ ತಿಳಿಸಿದ್ದಾರೆ

“ಹೆಂಡತಿಯೇ ಸರ್ವಸ್ವ ಎಂದು ಪತಿ ಭಾವಿಸಿದ್ದ ಸಂದರ್ಭದಲ್ಲಿ ಯುವತಿಯೊಬ್ಬಳು ಆಕೆಯನ್ನು ಕೊಲ್ಲುತ್ತಾಳೆ ಎಂದು ತಿಳಿದಾಗ ಆತನ ಮನಃಸ್ಥಿತಿ ಹೇಗಿರುತ್ತದೆ ಎಂಬುದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ” ಎಂದು ಹೇಳಿದ್ದಾರೆ.

ಚಿತ್ರದಲ್ಲಿ 4 ಹಾಡುಗಳಿದ್ದು, ರಾಜ್‍ ಸೂರ್ಯನ್ ಜತೆಗೆ ನಸ್ರಿನ್‍ ಮೊದಲಾದ ನಟ, ನಟಿಯರ ಅಭಿನಯವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com