ನಾನು ಚಿಕ್ಕಣ್ಣನ ಸಮಯ ವ್ಯರ್ಥ ಮಾಡುತ್ತಿದ್ದೇನೆ ಎಂದು ಭಾವಿಸಿದ್ದೆ: ಸಾರಾ ಹರೀಶ್

ಮಾಡೆಲಿಂಗ್ ಕ್ಷೇತ್ರದಿಂದ ನಟನಾ ಕ್ಷೇತ್ರಕ್ಕೆ ಬಂದ ಸಾರಾ ಹರೀಶ್ ಶ್ರೀ ಭರತ ಬಾಹುಬಲಿ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದ್ದಾರೆ.  ಅವರು ತಮ್ಮ 17 ನೇ ವಯಸ್ಸಿನಲ್ಲಿ ಮಾಡೆಲಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಬಿಲ್ಬೋರ್ಡ್ ಮತ್ತು ಟಿವಿ ಜಾಹೀರಾತುಗಳಲ್ಲಿ ಜನಪ್ರಿಯರಾಗಿದ್ದರು. ಆದರೆ ಅವರು ಬೆಳ್ಳಿ ಪರದೆಗೆ ಆಗಮಿಸಲು  ಸುಮಾರು ಒಂಬತ್ತು ವರ್ಷಗಳನ್ನು ತ
ಸಾರಾ ಹರೀಶ್
ಸಾರಾ ಹರೀಶ್

ಮಾಡೆಲಿಂಗ್ ಕ್ಷೇತ್ರದಿಂದ ನಟನಾ ಕ್ಷೇತ್ರಕ್ಕೆ ಬಂದ ಸಾರಾ ಹರೀಶ್ ಶ್ರೀ ಭರತ ಬಾಹುಬಲಿ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದ್ದಾರೆ.  ಅವರು ತಮ್ಮ 17 ನೇ ವಯಸ್ಸಿನಲ್ಲಿ ಮಾಡೆಲಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಬಿಲ್ಬೋರ್ಡ್ ಮತ್ತು ಟಿವಿ ಜಾಹೀರಾತುಗಳಲ್ಲಿ ಜನಪ್ರಿಯರಾಗಿದ್ದರು. ಆದರೆ ಅವರು ಬೆಳ್ಳಿ ಪರದೆಗೆ ಆಗಮಿಸಲು  ಸುಮಾರು ಒಂಬತ್ತು ವರ್ಷಗಳನ್ನು ತೆಗೆದುಕೊಂಡರು.. “ಆರಂಭದಲ್ಲಿ ನಾನು ನಟನೆಯ ಬಗ್ಗೆ ಯೋಚಿಸುತ್ತಿರಲಿಲ್ಲ. ನನ್ನನ್ನು ವಿವಿಧಕಥೆಗಳೊಡನೆ ಸಂಪರ್ಕಿಸಿದರೂ ಶ್ರೀ ಭರತ ಬಾಹುಬಲಿ ವರೆವಿಗೂ ನಾನು ಆ ಒಂದು ಆಸಕ್ತಿಯನ್ನು ಹೊಂದಿರಲಿಲ್ಲ.  ”ಎಂದು ಕೂಡಗಿನ ನವ ನಾಯಕ ನಟಿ ಹೇಳಿದ್ದಾರೆ.“ನಿರ್ದೇಶಕ ಮಂಜು ಅವರು ನನ್ನನ್ನು ಜಾಹೀರಾತಿನಲ್ಲಿ ಗುರುತಿಸಿದರು, ಮತ್ತು ಅವರ ಕಥಾನಕ ನನ್ನನ್ನು ಸೆಳೆದಿದೆ. ನಾನು ಅನೇಕ ವರ್ಷಗಳಿಂದ ಮಾಡೆಲಿಂಗ್ ಮಾಡಿದ್ದರಿಂದ, ಒಂದು ಹೆಜ್ಜೆ ಮುಂದಿಡಲು ಮತ್ತು ನನಗಾಗಿ ಬದಲಾವಣೆಯನ್ನು ತರಲು ಇದು ಅತ್ಯುತ್ತಮ ಅವಕಾಶ ಎಂದು ನಾನು ಭಾವಿಸಿದೆ "ಎಂದು ಅವರು ಹೇಳುತ್ತಾರೆ.

ಶ್ರೀ ಭರತ ಬಾಹುಬಲಿ ಚಿತ್ರದ ಶೂಟಿಂಗ್‌ನಲ್ಲಿರುವಾಗ, ಟಿವಿ ಜಾಹೀರಾತಿಗಾಗಿ ನಟಿಸುವುದು ಮತ್ತು ಚಲನಚಿತ್ರ ಪಾತ್ರಕ್ಕಾಗಿ ಕ್ಯಾಮೆರಾವನ್ನು ಎದುರಿಸುವುದು ಸಂಪೂರ್ಣವಾಗಿ ವಿಭಿನ್ನ ಸಂಗತಿಗಳು ಎಂದು ಸಾರಾ ಅರಿತುಕೊಂಡರು.“ನೀವು ಟಿವಿ ಕಮರ್ಷಿಯಲ್ ಜಾಹೀರಾತು ಮಾಡುವಾಗ ಹೆಚ್ಚಿನ ನಟನೆ ಅಗತ್ಯವಿಲ್ಲ ಆದರೆ ಸಿನಿಮಾಗಳಲ್ಲಿ ಹಾಗಾಗದು. ನನ್ನ ಅಭಿನಯ ಕೌಶಲ್ಯವನ್ನು ಪರೀಕ್ಷಿಸಲು ಶ್ರೀ ಭರತ ಬಾಹುಬಲಿ ನನಗೆ ಸಹಾಯ ಮಾಡಿದೆ" ಹಾಗಾದರೆ ನಟಿ  ಶ್ರೀ ಭರತ ಬಾಹುಬಲಿಯನ್ನು ತನ್ನ ಪಾಲಿಗೆ ಪರಿಪೂರ್ಣ ನಾಯಕನಟನಾಗಲು ಅವಕಾಶ ನೀಡಿದ ಚಿತ್ರ ಎಂದು ಭಾವಿಸಿದ್ದಾರೆಯೆ? ಎಂದರೆ ಮನವರಿಕೆಯಾಗಲು ಸ್ವಲ್ಪ ಸಮಯ ಹಿಡಿಯಲಿದೆ ಎಂದು ಉತ್ತರ ನೀಡಿದ್ದಾರೆ.

ಆದರೆ ಕಥೆ ಮತ್ತು ನಿರ್ದೇಶಕರು ನನಗೆ ಪಾತ್ರವನ್ನು ನಿರೂಪಿಸಿದ ರೀತಿ ನನ್ನನ್ನು "ಯಸ್"ಎಂದು ಹೇಳುವಂತೆ ಮಾಡಿತು. ಅಭಿನಯಕ್ಕೆ ನನಗೆ ಸ್ಕೋಪ್ ಇದೆ ಎಂದು ನಾನು ಅರಿತುಕೊಂಡೆ, ಮತ್ತು ಈ ಚಿತ್ರದಲ್ಲಿ ಮಂಜುಮತ್ತು ಚಿಕ್ಕಣ್ಣ ನಿರ್ವಹಿಸಿದ ಪ್ರಮುಖ ಪಾತ್ರಗಳಷ್ಟೇನನ್ನ ಪಾತ್ರವೂ ಮುಖ್ಯವಾಗಿದೆ. ಇದು ನನ್ನ ಚೊಚ್ಚಲ ಚಿತ್ರವಾದ್ದರಿಂದ, ನನ್ನ ಪಾತ್ರದೊಂದಿಗೆ ನನ್ನನ್ನು ಸ್ಥಾಪಿಸುವ ಚಿತ್ರದ ಭಾಗವಾಗಲು ನನಗೆ ಸಂತೋಷವಾಯಿತು ”ಎಂದು ಚಿತ್ರದಲ್ಲಿ ಎನ್‌ಆರ್‌ಐ ಪಾತ್ರದಲ್ಲಿ ನಟಿಸಿರುವ ಸಾರಾ ಹೇಳುತ್ತಾರೆ. “ನನ್ನ ವೇಷಭೂಷಣಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಸಿಕ್ಕಿದ್ದಕ್ಕೆ ನನಗೆ ಸಂತೋಷವಾಯಿತು. ಒಟ್ಟಾರೆಯಾಗಿ, ಶ್ರೀ ಭರತ  ಬಾಹುಬಲಿಯ ಬಗ್ಗೆ ಹೇಳುವುದಾದರೆ ಎಲ್ಲವೂ ನನ್ನ ಪರವಾಗಿದೆ. 8 ಗಂಟೆಗಳ ಪಾಳಿಗಳನ್ನು ನಿರ್ವಹಿಸುವುದು ಒಂದು ಸವಾಲು ಎಂದು ಸಾರಾ ಒಪ್ಪಿಕೊಂಡಿದ್ದಾರೆ. ಆದರೆ ಚಿತ್ರ ಪೂರ್ಣವಾದ ನಂತರ ಅವರ ಭಾವನೆ ಬದಲಾಗಿದೆ. 

"ಪ್ರಾರಂಭದಲ್ಲಿ ಇಡೀ ಚಿತ್ರತಂಡದಲ್ಲಿದ್ದ ಏಕೈಕ ಮುಖ್ಯ ನಾಯಕಿ ತಾನಾಗಿದ್ದೆನೆನ್ನುವುದು ನನಗೆ ತುಸು ಹಿಂಜರಿಕೆ ಉಂಟುಮಾಡಿತ್ತು. ಏನು ನಿರೀಕ್ಷಿಸಬಹುದು ಮತ್ತು ಹೇಗೆ ಮುಂದುವರಿಯಬೇಕೆಂದುನನಗೆ ತಿಳಿದಿಲ್ಲ. ಹೇಗಾದರೂ, ನಾನು ಪ್ರಾರಂಭಿಸಿದ ನಂತರ, ಸನ್ನಿವೇಶವು ಬದಲಾಯಿತು, ಮತ್ತು ನನಗೆ ಸರಾಗ ಆಯಿತು.  ಈ ಚಿತ್ರವು ನನಗೆ ತಾಳ್ಮೆ ಬೆಳೆಸಲು ಸಹಾಯ ಮಾಡಿತು, ಮತ್ತು ನಾನು ಬಹಳಷ್ಟು ಕಲಿಯಬೇಕಾಯಿತು. ನಿರ್ದೇಶಕ ಮಂಜು  ಮತ್ತು ಚಿಕ್ಕಣ್ಣ ಅವರ ಸಹಾಯವಿಲ್ಲದೆ ಇದು ಸಂಭವಿಸುತ್ತಿರಲಿಲ್ಲ ”ಎಂದು ಸಾರಾ ವಿವರಿಸುತ್ತಾರೆ. ಚಿಕ್ಕಣ್ಣ ಅವರೊಂದಿಗಿನ ತನ್ನ ಮೊದಲ ಶ್ಕೆಡ್ಯೂಲ್ ನೆನಪಿಸಿಕೊಳ್ಳುತ್ತಾ, “ನನ್ನ ಮೊದಲ ಕೆಲವು ಶಾಟ್ ಗಳು ನನ್ನನ್ನು ತಲ್ಲಣಗೊಳಿಸಿದವು, ಮತ್ತು ನಾನು ಚಿಕ್ಕಣ್ಣ ಅವರ ಸಮಯ ವ್ಯರ್ಥ ಮಾಡುತ್ತಿದ್ದೇನೆ ಎಂದು ಭಾವಿಸಿ ರೀಟೇಕ್ ಗೆ ಹೋಗಲು  ಹಿಂಜರಿಯುತ್ತಿದ್ದೆ.ಆದರೆ ಅವರು  ಮತ್ತು ಮಂಜು ನನಗೆ ವಿಶ್ರಾಂತಿ ಪಡೆಯಲು ಹೇಳಿದರು, ಮತ್ತು ಅದು ಪಾತ್ರವನ್ನು ಪ್ರವೇಶಿಸಲು ನನಗೆ ಅನುಕೂಲ ಕಲ್ಪಿಸಿತು. . ”

ಫಿಲ್ಮ್ ಸೆಟ್‌ಗಳ ಬಗ್ಗೆ ಹೇಳಿದ ಸಾರಾ "ನಾನು ಊಟಕ್ಕಾಗಿ ಕಾಯುತ್ತಿದ್ದೆ. ಎಂಟು ತಿಂಗಳ ಅವಧಿಯಲ್ಲಿ 45 ದಿನಗಳ ಶೂಟಿಂಗ್ ವೇಳಾಪಟ್ಟಿಯಲ್ಲಿ ಪ್ರತಿದಿನ ರಾಗಿ ಮುದ್ದೆ. ಮೊದಲು ಬರುತ್ತಿದ್ದದ್ದರಿಂದ ಸೆಟ್‌ಗಳಲ್ಲಿ ನನಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು ಅದನ್ನು ನಾನು ಇಷ್ಟಪಡುತ್ತಿದ್ದೆ, ಅದನ್ನು ನಾನೀಗ ಮಿಸ್ ಮಾಡಿಕೊಳ್ಳುತ್ತಿದ್ದೇನೆ."

ಚಿಕ್ಕಣ್ಣ ಅವರೊಂದಿಗೆ ಕೆಲಸ ಮಾಡುವುದು ಚಿತ್ರದ ಅತ್ಯುತ್ತಮ ವಿಚಾರದಲ್ಲಿ ಒಂದಾಗಿದೆ. . "ಅವರ ಹಾಸ್ಯಪ್ರಜ್ಞೆ ತುಂಬಾ ಚೆನ್ನಾಗಿದೆ. ಇದು ಯಾವುದೇ ಸೆಟ್‌ಅಪ್‌ನಲ್ಲಿ ವಾತಾವರಣವನ್ನು ಹಗುರಗೊಳಿಸುತ್ತದೆ. ಚಿಕ್ಕಣ್ಣ ಅವರೊಂದಿಗೆ ಇರುವುದರಲ್ಲಿ ಉತ್ತಮವಾದದ್ದು ಅವನ ನಟನೆಯನ್ನು ನೋಡುವುದು. ಅವರು ಒನ್ ಟೇಕ್ ನಟ, ಮತ್ತು ಅದು ನಾನು ಅವರಿಂದ ಕಲಿಯಬೇಕಾದ ವಿಷಯ ”ಎಂದು ಅವರು ಹೇಳುತ್ತಾರೆ, ಚಿತ್ರದಲ್ಲಿ ಅನೇಕ ಪೋರ್ಟ್ಫೋಲಿಯೊಗಳನ್ನು ಹೊಂದಿರುವ ನಿರ್ದೇಶಕ ಮಂಜು ಅವರನ್ನು ಸಹ ಅವರು ಉಲ್ಲೇಖಿಸಿದ್ದಾರೆ."ಅವರು (ನಿರ್ದೇಶಕ)  ಬಹು-ಪ್ರತಿಭಾನ್ವಿತ ವ್ಯಕ್ತಿ, ಮತ್ತುಹೇಗೆ  ಎಷ್ಟೆಲ್ಲಾವನ್ನೂ ಮ್ಯಾನೇಜ್ ಂಆಡಿಕೊಂಡು ಹೋಗುತ್ತಾರೆಎಂದು ನಾನು ಆಶ್ಚರ್ಯ ಪಡುತ್ತೇನೆ ಮತ್ತು . ಸಾಕಷ್ಟು ಅವ್ಯವಸ್ಥೆ ಇದ್ದಾಗಲೂ, ಅವರು ಅದನ್ನು ತುಂಬಾ ತಾಳ್ಮೆಯಿಂದ ನಿಭಾಯಿಸಿದ್ದಾರೆ" ಸಾರಾ ಈಗ ಜನವರಿ 17 ರಂದು ತನ್ನ ಚಲನಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

"ಚಿತ್ರ ವೀಕ್ಷಣೆ ಮಾಡುವವರಿಗೆ ಬಂಪರ್ ಬಹುಮಾನಗಳ ಆಫರ್ ಇದೆ. ಮೊದಲ ಎರಡು ವಾರಗಳಲ್ಲಿ ಚಿತ್ರವನ್ನು ನೋಡುವವರಿಗೆ ಕಾರು, ಚಿನ್ನ ಮತ್ತು ಉಡುಗೊರೆಗಳನ್ನು ಗೆಲ್ಲುವ ಅವಕಾಶ ಸಿಗುತ್ತದೆ. ನಾನು ಕೂಡ ಪ್ರೇಕ್ಷಕರ ನಡುವೆ ಇರಲು ಬಯಸುವೆ. ಹಾಗೆಯೇ ಅದೃಷ್ಟಶಾಲಿ ವಿಜೇತಳಾಗಲು ಬಯಸುತ್ತೇನೆ!" ಸಾರಾ ನಗುತ್ತಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com