‘ಶ್ರೀ ಭರತ ಬಾಹುಬಲಿ’ ಕಥೆ ಸರಳವಾದರೂ ಅಸಾಮಾನ್ಯವಾದ ಸ್ಕ್ರೀನ್ ಪ್ಕೇ ಹೊಂದಿದೆ: ಮಂಜು ಮಾಂಡವ್ಯ

ಕಥೆಗಾರ, ಸಂಭಾಷಣಾಗಾರ, , ನಿರ್ದೇಶಕ, ಗೀತರಚನೆಕಾರ, ನಟ ಮತ್ತು ಗಾಯಕನಾಗಿ ಮಂಜು ಮಾಂಡವ್ಯಅವರ ವೃತ್ತಿಜೀವನದಲ್ಲಿ ಅನೇಕ ಕ್ಷೇತ್ರಗಳಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ.ರಂಗಬೂಮಿಯ ಹಿನ್ನೆಲೆ ಇರುವ ಇವರಿಗೆ ಇದೆಲ್ಲವೂ ಸಲೀಸಾಗಿ ಒಲಿದಿದೆ..
ಶ್ರೀ ಭರತ ಬಾಹುಬಲಿ ಚಿತ್ರದ ದೃಶ್ಯ
ಶ್ರೀ ಭರತ ಬಾಹುಬಲಿ ಚಿತ್ರದ ದೃಶ್ಯ

ಕಥೆಗಾರ, ಸಂಭಾಷಣಾಗಾರ, , ನಿರ್ದೇಶಕ, ಗೀತರಚನೆಕಾರ, ನಟ ಮತ್ತು ಗಾಯಕನಾಗಿ ಮಂಜು ಮಾಂಡವ್ಯಅವರ ವೃತ್ತಿಜೀವನದಲ್ಲಿ ಅನೇಕ ಕ್ಷೇತ್ರಗಳಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ.ರಂಗಬೂಮಿಯ ಹಿನ್ನೆಲೆ ಇರುವ ಇವರಿಗೆ ಇದೆಲ್ಲವೂ ಸಲೀಸಾಗಿ ಒಲಿದಿದೆ.. ವಿವಿಧ ಚಿತ್ರಗಳಲ್ಲಿ ವಿವಿಧ ವಿಭಾಗಗಳನ್ನು ನಿಭಾಯಿಸಿರುವ ಚಲನಚಿತ್ರ ನಿರ್ದೇಶಕ  ಈಗ ತಮ್ಮ ಮುಂಬರುವ ಚಿತ್ರ ಶ್ರೀ ಭರತ ಬಾಹುಬಲಿಯಲ್ಲಿ ತಮ್ಮ ಎಲ್ಲ ಪ್ರತಿಭೆಯನ್ನುಧಾರೆ ಎರೆದಿದ್ದಾರೆ. "ನಾನು ಈ ಮೊದಲು ಮಾಡಿದ ಎಲ್ಲದರ ಹೊರತಾಗಿ, ಗಾಯಕ ಮತ್ತು ನಿರ್ಮಾಣದ ಸಲುವಾಗಿ ಈ ಚಿತ್ರ ನನಗೆ ಹೊಸದೊಂದು ಅನುಭವ ಕೊಟ್ಟಿದೆ"ಮಂಜು ಹೇಳಿದ್ದಾರೆ. 

"ನನ್ನ ಕಾಲೇಜು ದಿನಗಳಲ್ಲಿ ನಾವು ನಾಟಕ ತಂಡವನ್ನು ರಚಿಸಿ  ಅದನ್ನು ನಾವು ಜಿಪಿಐಇಆರ್ ಎಂದು ಕರೆಯುತ್ತಿದ್ದೆವು.ನಮ್ಮ ತಂಡವು ರಂಗ ನಾಟಕಗಳನ್ನು ನಿರ್ದೇಶಿಸುವಲ್ಲಿ ತೊಡಗಿಸಿಕೊಂಡಿತ್ತು. ಇದು ಪ್ರತಿ ವಿಭಾಗದಲ್ಲೂ ನನ್ನನ್ನು ತರಬೇತಿ ಹೊಂದುವಂತೆ ಂಆಡಿತು.ರಂಗಭೂಮಿ ಹಿನ್ನೆಲೆಯಿಂದ ಬರುವ ಪ್ರತಿಯೊಬ್ಬರೂ ಕಲಿಯುವ ಮೊದಲ  ಪಾಠವೆಂದರೆ ಅದು ಬಹು ವಿಭಾಗಗಳಲ್ಲಿ ಕೆಲಸ"ಅವರು ವಿವರಿಸಿದ್ದಾರೆ.

ನಟನಾಗಬೇಕೆಂಬ ಹಂಬಲದೊಡನೆ ಚಿತ್ರರಂಗಕ್ಕೆ ಬಂದ ಮಂಜು ಅವರು ಹುಡುಕುತ್ತಿರುವ ರೀತಿಯ ಅವಕಾಶ ಅವರಿಗೆ ಸಿಕ್ಕಿರಲಿಲ್ಲಹಾಗಾಗಿ ಅವರ ಗಮನ ಬರವಣಿಗೆಯತ್ತ ವಾಲಿತು.ಕೆಲವೇ ಸಮಯದಲ್ಲ್ಲಿ ಅದು ಅವರ ಪ್ರಮುಖ ಶಕ್ತಿ ಎಂದು ಅರಿತರು.“ನನ್ನ ಗುರು ಟಿ.ಎನ್. ಸೀತಾರಾಮ್, ಅವರು ನನ್ನ ಬರವಣಿಗೆಯಲ್ಲಿ ಪ್ರಬುದ್ಧರಾಗಲು ಸಹಾಯ ಮಾಡಿದರು. ಮುಕ್ತ ಮುಕ್ತ, ಮಾಯಾಮೃಗದಂತಹಾ ಧಾರಾವಾಹಿಗಳಿಗೆ ನಾನು ದೊಡ್ಡ ಅಭಿಮಾನಿಯಾಗಿದ್ದೆ ಮತ್ತು ಅದು ಸಂಭಾಷಣೆ ಬರಹಗಾರನಾಗಿ ನನಗೆ ವಿಶ್ವಾಸವನ್ನು ನೀಡಿತುಇದು ರಂಗ ನಾಟಕಗಳ ಕಥೆಗಿಂತ ವಿಭಿನ್ನವಾಗಿದೆ.ನಾನು ಆರಂಭದಲ್ಲಿ ಉಪೇಂದ್ರರಿಂದ ಕೆಲವು ಪಾಠ ಕಲಿಯಲು ಯತ್ನಿಸಿದ್ದೆ. ಆದರೆ ಅವರನ್ನು ಸಮೀಪಿಸಲು ನನ್ನಿಂದಾಗಲಿಲ್ಲ”ಎಂದು ಅವರು ನುಡಿದರು

ಸಂಭಾಷಣೆಗಾರರ ತಂಡದ ಭಾಗವಾಗಿ 7 ಒ ಕ್ಲಾಕ್ಮತ್ತು ಮಟ್ಟಾದಂತಹ ಚಿತ್ರಗಳೊಂದಿಗೆ ಮಂಜು ಕೆಲಸ ಮಾಡಿದ್ದು ಅವರಿಗೆ ನಂದ ಲವ್ಸ್ ನಂದಿತಾ ಮತ್ತು ರಾಜಾ ಹುಲಿ, ಸವಾರಿ, ಪೃಥ್ವಯಂತಹಾ ಚಿತ್ರಗಳು ಸಿಗುವಂತೆ ಂಆಡಿತ್ತು.ಅವರು ಪೂರ್ಣ ಪ್ರಮಾಣದ ಬರಹಗಾರರಾಗಿ ಬದಲಾದರು. . “ಇಲ್ಲಿಯೇ ನಾನು ಬರವಣಿಗೆಗೆ ವಿರಾಮ ನೀಡಲು ಮತ್ತು ಚಿತ್ರರಂಗದಲ್ಲಿ ಬೇರೆ ಕ್ಷೇತ್ರಗಳಲ್ಲಿ  ಗಮನಹರಿಸಲು ಬಯಸಿದ್ದೆ. ನನ್ನ ಪ್ರತಿಭೆಯನ್ನು ಅಳೆಯುವ ಯಶ್, ನಾನು ನನ್ನ ಸೀಮಿತ ಕ್ಷೇತ್ರದಿಂದ ಹೊರಬರಬೇಕು ಎಂದು ಹೇಳಿದಾಗ ಅದು.ಅವರದೇ "ಮಾಸ್ಟರ್ ಪೀಸ್" ಮೂಲಕ ನಾನು  ನಿರ್ದೇಶಕನಾಗಲು ಅವಕಾಶ ಕಲ್ಪಿಸಿತು"

ಶ್ರೀ ಭರತ ಬಾಹುಬಲಿಯಲ್ಲಿ ಪೂರ್ಣ ಪ್ರಮಾಣದ ನಾಯಕನಾಗಲು ಅವರ ಆಸಕ್ತಿಯನ್ನು ಹುಟ್ಟುಹಾಕಿದ್ದನ್ನು ವಿವರಿಸಿದ ಅವರು, “ನನ್ನ ಎರಡನೆಯ ನಿರ್ದೇಶನದ ಯೋಜನೆಯು ಉಪೇಂದ್ರ ಅವರೊಂದಿಗೆ ಇತ್ತು, ಅದು ನೋಟ್ ಬ್ಯಾನ್ ನಂತಹಾಕಾರಣದಿಂದಾಗಿ ರದ್ದಾಯಿತು. ನಾನು ಮೂರು ವರ್ಷಗಳ ಕಾಲ ಕಾಯುತ್ತಿದ್ದೆ. ನಾನು ಒಂದು ಸಣ್ಣ ಬಜೆಟ್ ಚಿತ್ರ ಮಾಡಲು ನಿರ್ಧರಿಸಿದಾಗ ಅದು ಶ್ರೀ ಭರತ ಬಾಹುಬಲಿ ಚಿತ್ರಕ್ಕೆ ಕಾರಣವಾಗಿತ್ತು.ಹೊಸಬರನ್ನು ಪರಿಚಯಿಸುವ ಪ್ರಯತ್ನ ನಿರ್ಮಾಪಕ ಹೂಡಿಕೆಯನ್ನು ಆಕರ್ಷಿಸುವುದಿಲ್ಲಎಂದು ನಾನು ಅರಿತುಕೊಂಡೆ. ಹಾಗಾಗಿ ನಾನು ಪೂರ್ಣ ಪ್ರಮಾಣದ ನಾಯಕನಾಗಲು ನಿರ್ಧರಿಸಿದೆ ಮತ್ತು ಚಿಕ್ಕಣ್ಣನನ್ನು ಸಮಾನಾಂತರ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡೆ.ನಮ್ಮ ಜೋಡಿ ರಾಜಾ ಹುಲಿಯಲ್ಲಿ ಸಹ ಒಳ್ಳೆ ಹೆಸರಾಗಿತ್ತು. ಹಾಗಾಗಿ ಈ ಕಥೆಗೆ ಅವರು ತಕ್ಕದಾಗಿದ್ದಾರೆ ಎಂದು ಭಾವಿಸಿದೆ."

“ನಾನು ಶ್ರವಣ ಬೆಳಗೊಳಕ್ಕೆ ಹಲವಾರು  ಬಾರಿ ತೆರಳಿದ್ದೆ.ಅಲ್ಲಿನ ಸ್ಥಳ, ಬಾಹುಬಲಿ ಪ್ರತಿಮೆಯ ಇತಿಹಾಸ ನನ್ನ ಆಸಕ್ತಿಯನ್ನು ಕೆರಳಿಸಿತ್ತು. ನಾನು ಬಾಹುಬಲಿಯ ಬಗ್ಗೆ ಓದಿದಾಗ, ಅದನ್ನು ಫಿಲ್ಮ್ ಸ್ಕ್ರಿಪ್ಟ್ ನಲ್ಲಿ ತರಲು  ಬಯಸಿದ್ದೆ. ನಾನು ರಾಜಾ ಹುಲಿಯಲ್ಲಿ ಅಭಿನಯಿಸಿದ ಭರತ ಪಾತ್ರದ ಹೆಸರಿಂದ ಪ್ರೇರಿತನಾದೆ.  ಈ ಎಲ್ಲ ಅಂಶಗಳು ಈ ಚಿತ್ರದ ಚಿತ್ರಕಥೆಯನ್ನು ಬರೆಯಲು ನನ್ನನ್ನು ಪ್ರೇರೇಪಿಸಿದವು ”ಎಂದು ಮಂಜು ವಿವರಿಸಿದ್ದಾರೆ.ಕಥೆಯನ್ನು ಬರೆಯುವಾಗ ಅವರು‘ ತ್ಯಾಗ ’ದ ಉಲ್ಲೇಖವನ್ನು ಮುನ್ನಲೆಗೆ ತರುತ್ತಾರೆ. ಅದು ಚಿತ್ರದಲ್ಲಿ ಒಂದು ಒಳಹರಿವಿನಂತೆ ಬರುತ್ತದೆ.

ಚಿತ್ರದಲ್ಲಿ ಮೂರು ಪದರಗಳಿವೆ - ಶ್ರೀ, ಭರತ ಮತ್ತು ಬಾಹುಬಲಿ, ಕ್ರಮವಾಗಿ ಸಾರಾ ಹರೀಶ್, ಮಂಜು  ಮಾಂಡವ್ಯ ಹಾಗೂ ಚಿಕ್ಕಣ್ಣ ಈ ಪಾತ್ರಗಳಾಗಿದ್ದಾರೆ. “ಇದು ಹಳ್ಳಿಯ ಹಿನ್ನೆಲೆಯಕಾಮಿಡಿ  ಥ್ರಿಲ್ಲರ್. ಬೌಂಡ್ ಸ್ಕ್ರಿಪ್ಟ್ ಸಿದ್ಧವಾದ ನಂತರವೇ ನಾನು ಶೂಟ್ ಮಾಡಲು ಹೋಗಿದ್ದೆ. ಶ್ರೀ ಭರತ ಬಾಹುಬಲಿ ಸರಳವಾದ ಕಥೆಯಾಗಿದ್ದು ಅದು ಅಸಾಮಾನ್ಯ ಸ್ಕ್ರೀನ್ ಪ್ಲೇ ಜತೆ ಬರುತ್ತದೆ.ನೇರ ನಿರೂಪಣೆಯೊಂದಿಗೆ ಬರುವುದಿಲ್ಲ ”ಎಂದು ಅವರು ವಿವರಿಸುತ್ತಾರೆ.

ಶ್ರೀ ಭರತ ಬಾಹುಲಿಯನ್ನು ಐಶ್ವರ್ಯಾ ಪ್ರೊಡಕ್ಷನ್ಸ್‌ನ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ ಮತ್ತು ಇದನ್ನು ಶಿವ ಪ್ರಕಾಶ್ ಟಿ ನಿರ್ಮಿಸಿದ್ದಾರೆ. “ನಮ್ಮ ಚಿತ್ರವನ್ನು ನೋಡುವ ಜನರಿಗೆ` 1 ಕೋಟಿ ಬಂಪರ್ ಬಹುಮಾನವನ್ನು ಗೆಲ್ಲುವ ಅವಕಾಶವಿದೆ, ಇದಕ್ಕಾಗಿ ಅವರು ಚಿತ್ರಮಂದಿರಗಳಿಗೆ ಬರಬೇಕಿದೆ" ಅವರು ಹೇಳಿದ್ದಾರೆ..
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com