'ಚಾಂಪಿಯನ್' ಮರಾಠಿ ವರ್ಸನ್ ನಲ್ಲೂ ಅದಿತಿ ಪ್ರಭುದೇವ
ಸತೀಶ ನಿನಾಸಂ ನಟನೆಯ ಬ್ರಹ್ಮಾಚಾರಿ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಅದಿತಿ ಪ್ರಭುದೇವ ಮರಾಠಿಯಲ್ಲಿ ಬರುತ್ತಿರುವ ಚ್ಯಾಂಪಿಯನ್ ಸಿನಿಮಾಗೆ ಸಹಿ ಮಾಡಿದ್ದಾರೆ.
ಸಾಹುರಾಜ್ ಶಿಂಧೆ ನಿರ್ದೇಶನದ ಈ ಸಿನಿಮಾದಲ್ಲಿ ಸಚಿನ್ ಧನ್ ಫಾಲ್ ಗೆ ಅದಿತಿ ನಾಯಕಿಯಾಗಿದ್ದಾರೆ. ಇಬ್ಬರು ಎಂಜಿನೀಯರಿಂಗ್ ವಿದ್ಯಾರ್ಥಿಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸ್ಪೋರ್ಟ್ಸ್ ಕಥೆ ಇದಾಗಿದೆ. ಜೊತೆಗೆ ಪ್ರೀತಿ ಮತ್ತು ಕಾಮಿಡಿ ಕಥೆಯೂ ಇದೆ.
‘ಅದಿತಿ ಇಲ್ಲಿ ಸಂಪ್ರದಾಯಸ್ಥ ಮನೆತನದ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಶೂಟಿಂಗ್ ಈಗಾಗಲೇ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಚಿತ್ರದಲ್ಲಿ ದೇವರಾಜ್, ಅವಿನಾಶ್, ರಂಗಾಯಣ ರಘು, ಚಿಕ್ಕಣ್ಣ, ಸುಮನ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ’ ಎನ್ನುತ್ತಾರೆ ಶಿಂಧೆ.
ವಿಶೇಷವೆಂದರೆ, ಈ ಸಿನಿಮಾ ಕನ್ನಡ ಮಾತ್ರವಲ್ಲದೆ ಮರಾಠಿ ಭಾಷೆಯಲ್ಲೂ ಮೂಡಿಬರಲಿದೆ. ಹಾಗಂತ ಕನ್ನಡ ಚಿತ್ರವನ್ನು ಮರಾಠಿಗೆ ಡಬ್ ಮಾಡುತ್ತಿಲ್ಲ. ಬದಲಿಗೆ ಮರಾಠಿಯಲ್ಲಿ ಪ್ರತ್ಯೇಕವಾಗಿ ಶೂಟಿಂಗ್ ನಡೆಸಲಾಗವುದು. ಮರಾಠಿಯಲ್ಲಿ ಹೀರೋ ಸಚಿನ್ ಮಾತ್ರ ಇರಲಿದ್ದು, ಉಳಿದ ಪಾತ್ರವರ್ಗವೆಲ್ಲ ಪ್ರತ್ಯೇಕವಾಗಿರುತ್ತದೆ. ಆ ಪಾತ್ರಧಾರಿಗಳ ಆಯ್ಕೆ ಇನ್ನಷ್ಟೇ ಆಗಬೇಕಿರುವುದರಿಂದ ಶೂಟಿಂಗ್ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ ಎಂದು ಹೇಳುತ್ತಾರೆ ಶಾಹುರಾಜ್.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ