`ನಾನು ಮತ್ತು ಗುಂಡ’ ಶ್ವಾನವೇ ಡಬ್ಬಿಂಗ್ ಮಾಡಿರುವ ಭಾವನಾತ್ಮಕ ಚಿತ್ರ!

ಶ್ವಾನ ಹಾಗೂ ಆಟೋ ಚಾಲಕನ ನಡುವಿನ ಭಾವನಾತ್ಮಕ ಸಂಬಂಧವನ್ನು ಬಿಂಬಿಸುವ ಚಿತ್ರ ‘ನಾನು ಮತ್ತು ಗುಂಡ’ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಚಿತ್ರದ ಸ್ಟಿಲ್
ಚಿತ್ರದ ಸ್ಟಿಲ್
Updated on

ಬೆಂಗಳೂರು: ಶ್ವಾನ ಹಾಗೂ ಆಟೋ ಚಾಲಕನ ನಡುವಿನ ಭಾವನಾತ್ಮಕ ಸಂಬಂಧವನ್ನು ಬಿಂಬಿಸುವ ಚಿತ್ರ ‘ನಾನು ಮತ್ತು ಗುಂಡ’ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
  
‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಶಿವರಾಜ್ ಕೆ ಆರ್‍ ಪೇಟೆ ಆಟೋ ಚಾಲಕನಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
  
ಶ್ವಾನವೇ ಹೀರೋ:
‘ನಾನು ಮತ್ತು ಗುಂಡ’ ಚಿತ್ರದಲ್ಲಿ ಶ್ವಾನ ಸಿಂಬ ಅದ್ಭುತವಾಗಿ ನಟಿಸಿದೆ ಡ್ವಬ್ಬಿಂಗ್ ಕೂಡ ಮಾಡಿದೆ ಚಿತ್ರಕ್ಕೆ ನಿಜವಾದ ಹೀರೋ ಸಿಂಬ ಎಂದರೆ ತಪ್ಪಾಗದು ಚಿತ್ರೀಕರಣದ ಸಂದರ್ಭದಲ್ಲಿ ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು . ಪ್ರತಿಯೊಂದು ದೃಶ್ಯಗಳನ್ನೂ ‘ಸಿಂಬ’ ಒಂದೇ ಟೇಕ್‍ ನಲ್ಲಿ ಓಕೆ ಮಾಡಿದ ಆತನಿಗೆ ಅಷ್ಟರಮಟ್ಟಿಗೆ ತರಬೇತಿ ನೀಡಲಾಗಿದೆ ಎಂದು ಶಿವರಾಜ್ ಕೆ ಆರ್ ಪೇಟೆ ತಿಳಿಸಿದರು.
  
ನೈಜ ಘಟನೆ ಆಧಾರಿತ ಚಿತ್ರ:
ನಾನು ಮತ್ತು ಗುಂಡ ನೈಜ ಘಟನೆ ಆಧರಿಸಿದ ಚಿತ್ರ ಹಾಸನದ ಆಟೋ ಚಾಲಕನೊಬ್ಬ ತನ್ನ ನಾಯಿಯೊಡನೆ ಹೊಂದಿದ್ದ ಸ್ನೇಹದ ಬಗ್ಗೆ ಹಲವರು ತಿಳಿಸಿದ್ದರು. ಆತ ಯಾವಗಲೂ ಅದನ್ನು ತನ್ನ ಆಟೋದಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ, ಕಷ್ಟ, ಸುಖ ಹಂಚಿಕೊಳ್ಳುತ್ತಿದ್ದ. . .ಇದರ ಬಗ್ಗೆ ಕಿರುಚಿತ್ರ ಮಾಡುವ ಯೋಜನೆಯಿತ್ತು. ಆದರೆ ಶ್ವಾನ ಪ್ರೇಮದ ಬಗ್ಗೆ ಇನ್ನೂ ಅನೇಕ ಘಟನೆಗಳ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಸಿನಿಮಾ ಮಾಡುವ ನಿರ್ಧಾರಕ್ಕೆ ಬಂದೆವು ಎಂದು ನಿರ್ಮಾಪಕ ರಘು ಹಾಸನ್ ಹೇಳಿದರು.
  
ರಘು ಹಾಸನ್ ಸ್ವತಃ ನಿರ್ದೇಶಕರಾದರೂ ‘ನಾನು ಮತ್ತು ಗುಂಡ’ ಚಿತ್ರದ ಸಾರಥ್ಯವನ್ನು ಶ್ರೀನಿವಾಸ್ ತಿಮ್ಮಯ್ಯ ಅವರಿಗೆ ವಹಿಸಿದ್ದಾರೆ.
  
ಶಿವರಾಜ್ ಕೆ ಆರ್ ಪೇಟೆಯ ಗೆಳೆಯನ ಪಾತ್ರದಲ್ಲಿ ಗೋವಿಂದೇಗೌಡ ನಟಿಸಿದ್ದಾರೆ. “ಚಿತ್ರದಲ್ಲಿ ನನ್ನದು ‘ಬೂರಿ’ ಅಂದರೆ ಸುಳ್ಳು ಹೇಳುವ ಪಾತ್ರ. . . ಅತ್ಯಂತ ಹಾಸ್ಯಮಯವಾಗಿ ಮೂಡಿಬಂದಿದೆ. ಶ್ವಾನ ಸಿಂಬ ನಟನೆ ಹೃದಯಸ್ಪರ್ಶಿಯಾಗಿದ್ದು, ಅನೇಕ ಸಲ ನನ್ನ ಕಣ್ಣುಗಳು ಒದ್ದೆಯಾಗಿವೆ” ಎಂದು ಗೋವಿಂದೇಗೌಡ ಹೇಳಿಕೊಂಡರು.
  
ಚಿತ್ರದಲ್ಲಿ 5 ಹಾಡುಗಳಿದ್ದು, ಕಾರ್ತಿಕ್ ಶರ್ಮ ಸಂಗೀತ ನೀಡಿದ್ದಾರೆ. ಶಿವಾನಂದ್ ಛಾಯಾಗ್ರಹಣ, ಶರತ್ ಚಕ್ರವರ್ತಿ ಸಂಭಾಷಣೆಯಿದೆ. ಸಿನಿಮಾ ಹಕ್ಕುಗಳು ಜೀ ಟಿವಿಗೆ ಮಾರಾಟವಾಗಿದೆ ಎಂದು ಚಿತ್ರತಂಡ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com