ಎಂಜಿ ಶ್ರೀನಿವಾಸ್ ಅವರ 'ಓಲ್ಡ್ ಮಾಂಕ್' ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ ಹೊಸ ಪ್ರತಿಭೆ ಸುದೇವ್ ನಾಯರ್!
ನಿರ್ದೇಶಕ ಎಂ ಜಿ ಶ್ರೀನಿವಾಸ್ ಅವರ ಮುಂದಿನ ಚಿತ್ರ ಓಲ್ಡ್ ಮಾಂಕ್. ರೊಮ್ಯೊಂಟಿಕ್ ಡ್ರಾಮಾ ಚಿತ್ರದಲ್ಲಿ ನಾಯಕನ ಪಾತ್ರ ನಿರ್ವಹಿಸುತ್ತಿರುವ ಶ್ರೀನಿವಾಸ್ ಮಲಯಾಳಂ ಮತ್ತು ಹಿಂದಿಯಲ್ಲಿ ಜನಪ್ರಿಯವಾಗಿರುವ ಸುದೇವ್ ನಾಯರ್ ಅವರನ್ನು ಸಹ ಕರೆತರಲು ಉತ್ಸುಕವಾಗಿದ್ದಾರೆ.
ಕೇರಳ ಮೂಲದ ಪ್ರಶಸ್ತಿ ವಿಜೇತ ನಟ ಸುದೇವ್ ನಾಯರ್ ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡುತ್ತಿದ್ದಾರೆ. ವಿಲನ್ ಪಾತ್ರಕ್ಕೆ ಹೊಸ ಮುಖವನ್ನು ಹುಡುಕುತ್ತಿದ್ದ ಶ್ರೀನಿವಾಸ್ ಗೆ ಸುದೆವ್ ನಾಯರ್ ತಕ್ಕ ಆಯ್ಕೆ ಎಂದು ಭಾವಿಸಿದ್ದಾರೆ.
ಬಾಲಿವುಡ್ ನಲ್ಲಿ ಅರ್ಜುನ್ ಕಪೂರ್ ಅವರು ಭಾಗವಹಿಸಿದ್ದ ಇಂಡಿಯಾಸ್ ಮೋಸ್ಟ್ ವಾಂಟೆಡ್, ಗುಲಾಬ್ ಗ್ಯಾಂಗ್ ನ ಭಾಗವಾಗಿದ್ದರು. ನೊ ಫಿಟ್ ಫಾರ್ ದ ವೈರಲ್ ಫೀವರ್ ಅಂಡ್ ಡೈಸ್ ಮೀಡಿಯಾ ವೆಬ್ ಸಿರೀಸ್ ನಲ್ಲಿ ನಟಿಸಿದ್ದಾರೆ.
ಮಲಯಾಳಂನಲ್ಲಿ ಅನಾರ್ಕಲಿ, ಕರಿಂಕುನ್ನಮ್ 6, ಸ್ಲೀಪ್ ಲೆಸ್ಲಿ ಯುವರ್ಸ್, ಎಜ್ರಾದಲ್ಲಿ ಸುದೇವ್ ನಾಯರ್ ನಟಿಸಿದ್ದಾರೆ. ಓಲ್ಡ್ ಮಾಂಕ್ ಚಿತ್ರದಲ್ಲಿ ನಿರ್ದೇಶಕ ಹಾಗೂ ನಟ ಎಸ್ ನಾರಾಯಣ್, ಅರುಣ ಬಾಲರಾಜ್ ಇರುತ್ತಾರೆ. ಸೌರಭ್ ವೈಭವ್ ಸಂಗೀತ, ಭರತ್ ಪರಶುರಾಮ್ ಛಾಯಾಗ್ರಹಣ ಚಿತ್ರಕ್ಕಿರುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ