'ಫ್ರೆಂಚ್ ಬಿರಿಯಾನಿ' ಜನರಿಗೆ ಇಷ್ಟವಾಗುತ್ತದೆ ಎಂದು ಭಾವಿಸುತ್ತೇನೆ: ಪನ್ನಗಾ ಭರಣ

ಪನ್ನಗಾ ಭರಣ ಅವರ ಎರಡನೇ ನಿರ್ದೇಶನದ ಚಿತ್ರ ಫ್ರೆಂಚ್ ಬಿರಿಯಾನಿ. ಹಿಂದಿನ ಹ್ಯಾಪಿ ನ್ಯೂ ಇಯರ್ ನಂತರ ಕಾಮಿಡಿ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಫ್ರೆಂಚಿ ಬಿರಿಯಾನಿ ಪೋಸ್ಟರ್
ಫ್ರೆಂಚಿ ಬಿರಿಯಾನಿ ಪೋಸ್ಟರ್

ಪನ್ನಗಾ ಭರಣ ಅವರ ಎರಡನೇ ನಿರ್ದೇಶನದ ಚಿತ್ರ ಫ್ರೆಂಚ್ ಬಿರಿಯಾನಿ. ಹಿಂದಿನ ಹ್ಯಾಪಿ ನ್ಯೂ ಇಯರ್ ನಂತರ ಕಾಮಿಡಿ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಉತ್ತಮ ತಂಡವನ್ನಿಟ್ಟುಕೊಂಡು ಫ್ರೆಂಚ್ ಬಿರಿಯಾನಿ ತಯಾರಿಸಿದ್ದು ನಾಳೆ ಅಮೆಜಾನ್ ಪ್ರೈಮ್ ನಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಸಿನಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದಾರೆ.

ಚಿತ್ರ ನಿರ್ದೇಶನ ಮಾಡುವುದು ಎಂದು ನಿರ್ಧರಿಸಿದಾಗ ಪ್ರೊಡಕ್ಷನ್ ಕಂಪೆನಿ ಮುಖ್ಯವಾಗುತ್ತದೆ. ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಪ್ರೊಡಕ್ಷನ್ ಈ ಚಿತ್ರವನ್ನು ತಯಾರಿಸಲು ಮುಂದೆ ಬಂತು. ಪ್ರಯೋಗಾತ್ಮಕ ಚಿತ್ರಗಳನ್ನು ತಯಾರಿಸಲು ಇಷ್ಟಪಡುವ ಪುನೀತ್ ರಾಜ್ ಕುಮಾರ್ ಅವರು ಇಂತಹ ಕಥೆಗಳಿಗೆ ಮುಕ್ತವಾಗಿರುತ್ತದೆ. ಅವರ ಸಹಕಾರವಿಲ್ಲದಿದ್ದಿದ್ದರೆ ಈ ಚಿತ್ರ ತಯಾರಾಗುತ್ತಿತ್ತು ಎಂದು ನನಗನ್ನಿಸುವುದಿಲ್ಲ. ಈ ಪ್ರಾಜೆಕ್ಟ್ ಗೆ ರೆಕ್ಕೆ ಕೊಟ್ಟವರು ಪುನೀತ್ ರಾಜ್ ಕುಮಾರ್, ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ಗುರುದತ್ತ್ ಎ ತಲ್ವರ್.

ಫ್ರೆಂಚ್ ಬಿರಿಯಾನಿಗೆ ಕಥೆ ಬರೆದಿದ್ದು ನಾನೇ. ನಂತರ ಕಥೆಯನ್ನು ಅವಿನಾಶ್ ಬಳೆಕ್ಕಳ ಬೆಳೆಸಿಕೊಂಡು ಹೋದರು, ತುಂಬಾ ಚೆನ್ನಾಗಿ ಮಾಡಿದ್ದಾರೆ ಎಂದು ಖುಷಿಯಿಂದ ಕ್ರೆಡಿಟ್ ಕೊಟ್ಟರು ಪನ್ನಗಾಭರಣ.

ಡ್ಯಾನಿಶ್ ಸೇಠ್, ಸಲ್ ಯೂಸಫ್, ರಂಗಾಯಣ ರಘು, ದಿಶಾ ಮದನ್, ನಾಗಭೂಷಣ, ಸಿಂಧು, ಮಹಂತೇಶ್ ಮೊದಲಾದವರು ಇದ್ದಾರೆ. ಎಲ್ಲರೂ ಸೇರಿ ಬಿರಿಯಾನಿ ತಟ್ಟೆಗೆ ಮಸಾಲೆ ತುಂಬಿಸಿದ್ದಾರೆ.

ವಾಸುಕಿ ವೈಭವ್ ವಿಶಿಷ್ಟವಾಗಿ ಸಂಗೀತ ನಿರ್ದೇಶನ ಮಾಡಿದ್ದಾರೆ ಎನ್ನುವ ಪನ್ನಗಾ ಭರಣ ಚಿತ್ರದಲ್ಲಿ ನಾಲ್ಕು ಹಾಡುಗಳಿವೆಯಂತೆ.ಬೆಂಗಳೂರು ಹಾಡಿನಲ್ಲಿ ರ್ಯಾಪ್ ನ ಮಿಕ್ಸ್ ಇದೆ. ಯೇನು ಮಾಡೋದು ಸ್ವಾಮಿ ಬಾರ್ ಹಾಡಾಗಿದ್ದು ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. ಶಿವಾಜಿನಗರದಲ್ಲಿ ಚೇಸಿಂಗ್ ಹಾಡನ್ನು ಮಾಡಲಾಗಿದೆ.

ಕಾರ್ತಿಕ್ ಪಳನಿ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನವಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com