ಲಾಕ್ ಡೌನ್ ಅವಧಿಯಲ್ಲಿ ವಿ ಮನೋಹರ್ ಅವರ ‘ಚಾಟ್ ಮಸಾಲ’
ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಕಲಾವಿದರು, ತಂತ್ರಜ್ಞರು ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಸಿಕೊಂಡು ಎಲ್ಲಾ ಭಾಷೆಯ ಚಿತ್ರರಂಗದ ಅನೇಕರು ಸಣ್ಣ ಸಣ್ಣ ವಿಡಿಯೋ ತುಣುಕುಗಳನ್ನು ಬಿಟ್ಟರು.
ಎಲ್ಲರಿಗಿಂತ ಮೊದಲು ಬಿಗ್ ಬಿ ಅಮಿತಾಭ್ ಬಚ್ಚನ್ ಆರು ನಿಮಿಷದ ಒಂದು ವಿಡಿಯೋ ವನ್ನು ಏಪ್ರಿಲ್ ಮೊದಲ ವಾರದಲ್ಲಿ ಬಿಟ್ಟಿದ್ದರು. ಅದನ್ನು ನೋಡಿ ಎಲ್ಲರೂ ಪುಳಕಿತರಾಗಿ ಸ್ಫೂರ್ತಿ ಪಡೆದು, ತಾವು ಒಂದೊಂದು ವಿಡಿಯೋ ಬಿಟ್ಟರು. ಇವೆಲ್ಲ ನಾಲ್ಕು ನಿಮಿಷ, ಐದು ನಿಮಿಷಗಳ ವಿಡಿಯೋಗಳು. ಇದರಿಡ್ಂಆಗಿ ಸ್ಪೂರ್ತಿ ಪಡೆದ ಸಂಗೀತ ನಿರ್ದೇಶಕ ವಿ.ಮನೋಹರ್ ಲಾಕ್‌ಡೌನ್‌ನಲ್ಲಿ ಒಂದು ಸಿನಿಮಾವನ್ನೇ ಮಾಡಿ ಮುಗಿಸಿದ್ದಾರೆ.
ವಿ. ಮನೋಹರ್ ಒಟ್ಟಾರೆ 45 ನಿಮಿಷದ ಒಂದು ಸಣ್ಣ ಚಲನಚಿತ್ರವನ್ನೇ ಮಾಡಿ ಮಲ್ಲಿಗೆ ಮೂವೀಸ್ ಲಾಂಛನದಲ್ಲಿ ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಲು ತಯಾರಾಗಿದ್ದಾರೆ. ಸದ್ಯ ಟ್ರೇಲರ್ ರಿಲೀಸ್ ಆಗಿದೆ.
ಈ ಸಿನಿಮಾದಲ್ಲಿ ಒಟ್ಟು ಇಪ್ಪತ್ತು ಹಾಡುಗಳಿದ್ದು ಸಿನಿಮಾ ಪ್ರಾರಂಭ ಹಾಗೂ ಅಂತ್ಯ ಎರಡೂ ಹಾಡಿನಿಂದಲೇ ಆಗಲಿದೆ. ಈ ಎಲ್ಲಾ ಹಾಡುಗಳಿಗೆ ಸ್ವತಃ ವಿ. ಮನೋಹರ್ ಸಾಹಿತ್ಯ ಹಾಗೂ ರಾಗ ಸಂಯೋಜನೆ ಂಆಡಿದ್ದಾರೆ. ಇದಕ್ಕಾಗಿ 9 ಮಂದಿ ಪ್ರೋಗ್ರಾಮಿಂಗ್ ನಡೆಸಿದ್ದರು.
ಕಳೆದ ಏಪ್ರಿಲ್ ನಲ್ಲಿ ಈ ಸಿನಿಮಾದ ಕೆಲಸ ಪ್ರಾರಂಬಗೊಂಡಿದ್ದು ಲಾಕ್ ಡೌನ್ ಇದ್ದ ಕಾರಣ ಸಂಗೀತ ನಿರ್ದೇಶಕ, ಗಾಯಕರು, ಕಲಾವಿದರೆಲ್ಲಾ ಅವರವರ ಮನೆಯಲ್ಲಿಯೇ ಇದ್ದು ಈ ಸಿನಿಮಾ ಕೆಲಸ ನಿರ್ವಹಿಸಿದ್ದಾರೆ.ದೇಹದ ವಿವಿಧ ಅಂಗಾಗಗಳು ಹೇಳುವ ಕಥಾನಕವಾಗಿ ಈ ಸಿನಿಮಾ ಮೂಡಿಬಂದಿದೆ. . 23 ಕಲಾವಿದರು, 14 ಮಂದಿ ಗಾಯಕ-ಗಾಯಕಿಯರು ಒಂಬತ್ತು ಮಂದಿ ಸಂಗೀತಗಾರರು ಇದಕ್ಕೆ ದುಡಿದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ