'ರಾಂಬೋ 2' ನನಗೆ ಹೆಸರು, ಪ್ರಸಿದ್ಧಿಯನ್ನು ತಂದುಕೊಟ್ಟಿದೆ: ಆಶಿಕಾ ರಂಗನಾಥ್

ಚಿತ್ರೋದ್ಯಮದ ಕೆಲ ಪ್ರಖ್ಯಾತ ನಿರ್ದೇಶಕರ ಚಿತ್ರದಲ್ಲಿ ಅಭಿನಯಿಸಲು ನನಗೆ ಅವಕಾಶ ದೊರಕಿರುವುದು ನನ್ನ ಅದೃಷ್ಟ ಎಂದು ನಟಿ ಆಶಿಕಾ ರಂಗನಾಥ್ ಹೇಳಿದ್ದಾರೆ. ಕಮರ್ಷಿಯಲ್ ಎಂಟರ್ಟೈನ್ಮೆಂಟ್ ನ ಭಾಗವಾಗಿ ಕಾಣಿಸಿಕೊಳ್ಳುತ್ತಿರುವ ನಟಿಗೆ ಪ್ರಬುದ್ಧ ಪಾತ್ರಗಳು, ಐತಿಹಾಸಿಕ, ಮಹಿಳಾ ಕೇಂದ್ರಿತ ಚಿತ್ರದಲ್ಲಿ ಅಭಿನಯಿಸಲು ಆಶಯವಿದೆ.
ಆಶಿಕಾ ರಂಗನಾಥ್
ಆಶಿಕಾ ರಂಗನಾಥ್
Updated on

ಚಿತ್ರೋದ್ಯಮದ ಕೆಲ ಪ್ರಖ್ಯಾತ ನಿರ್ದೇಶಕರ ಚಿತ್ರದಲ್ಲಿ ಅಭಿನಯಿಸಲು ನನಗೆ ಅವಕಾಶ ದೊರಕಿರುವುದು ನನ್ನ ಅದೃಷ್ಟ ಎಂದು ನಟಿ ಆಶಿಕಾ ರಂಗನಾಥ್ ಹೇಳಿದ್ದಾರೆ. ಕಮರ್ಷಿಯಲ್ ಎಂಟರ್ಟೈನ್ಮೆಂಟ್ ನ ಭಾಗವಾಗಿ ಕಾಣಿಸಿಕೊಳ್ಳುತ್ತಿರುವ ನಟಿಗೆ ಪ್ರಬುದ್ಧ ಪಾತ್ರಗಳು, ಐತಿಹಾಸಿಕ, ಮಹಿಳಾ ಕೇಂದ್ರಿತ ಚಿತ್ರದಲ್ಲಿ ಅಭಿನಯಿಸಲು ಆಶಯವಿದೆ.

ಆಶಿಕಾ ರಂಗನಾಥ್ ಸುನಿ ನಿರ್ದೇಶನದ, ಶರಣ್ ಅಭಿನಯದ ಅವತಾರ ಪುರುಷ  ಹಾಗೂ ಪವನ್ ಒಡೆಯರ್ ರೇಮೋ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.ಈ ಎರಡೂ ಚಿತ್ರಗಳು ಇದಾಗಲೇ ಅಂತಿಮ ಹಂತದಲ್ಲಿದ್ದು ಮಹೇಶ್ ಕುಮಾರ್ ನಿರ್ದೇಶನದ ಶ್ರೀಮುರಳಿ ಅಭಿನಯದ ಮದಗಜ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲು ಅವರು ಈಗ ಕಾಯುತ್ತಿದ್ದಾರೆ.ಈ ಮಧ್ಯೆ, ಒಂದೆರಡು ಚಲನಚಿತ್ರ  ನಿರ್ದೇಶಕರು  ತಮ್ಮ ಚಿತ್ರಗಳಲ್ಲಿ ನಟಿಸಲು ನಟಿಯನ್ನು ಸಂಪರ್ಕಿಸಿದರು. ಆದರೆ, ಅವರು ವೈಯಕ್ತಿಕವಾಗಿ ವಿವರವಾದ ಚರ್ಚೆ ನಡೆಯುವವರೆಗೆ ಕಾಯಬೇಕಿದೆ.

“ನಾನು ಫೋನ್‌ನಲ್ಲಿ ಸ್ಕ್ರಿಪ್ಟ್‌ಗಳನ್ನು ಕೇಳಲು ಇಷ್ಟಪಡುವುದಿಲ್ಲ, ಬದಲಾಗಿ ಟೀಂನೊಂದಿಗೆ  ವಿವರವಾಗಿ ಚರ್ಚಿಸಲು ಬಯಸುತ್ತೇನೆ. ನನಗೆ ಇದು ಒಳ್ಳೆಯ ಕಥೆ ಎನಿಸಿದಾಗ  ನಾನದಕ್ಕೆ ಒಪ್ಪಿಗೆ ಸೂಚಿಸುತ್ತೇನೆ."

ತನ್ನ ಚಲನಚಿತ್ರ ವೃತ್ತಿಜೀವನದ ಎರಡನೇ ಅವಧಿ ರಾಂಬೋ 2ನಿಂದ  ಪ್ರಾರಂಭವಾಯಿತು ಎಂದೆನ್ನುವ ಆಶಿಕಾ  “ಒಬ್ಬ ನಟಿಯಾಗಿ ಮೇಲೇರುವುದು ಎನ್ನುವ ಮಾತು ನನ್ನ ವೃತ್ತಿಬದುಕಿಗೆ ಹೊಂದಿಕೆಯಾಗುತ್ತದೆ. ಕ್ರೇಜಿ ಬಾಯ್ ಚಿತ್ರದ ಮೂಲಕ ಪ್ರಾರಂಭಿಸಿ  ರಾಜು ಕನ್ನಡ ಮೀಡಿಯಂ ಮತ್ತು ಮುಗುಳು ನಗೆಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ರಾಂಬೋ 2 ಮಾಡಿದಾಗ ಆ ಚಿತ್ರ  ನನಗೆನಾಯಕಿಯಾಗಿ ಗುರುತಿಸಿಕೊಳ್ಲಲು ಅವಕಾಶ ನೀಡಿದೆ. ಈ ಚಿತ್ರದ ಮೂಲಕ ಆಶಿಕಾ ರಂಗನಾಥ್ ಹೆಸರು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಇದು ನನಗೆ ಮನ್ನಣೆ ಮತ್ತು ಜನಪ್ರಿಯತೆಯನ್ನು ನೀಡಿತು, ”ಎಂದು ಅವರು ಹೇಳುತ್ತಾರೆ.

ರಾಂಬೋ 2 ನಿಂದ ನಂತರದಲ್ಲಿ ನಟಿ ತಾನು ಚಿತ್ರವನ್ನು ಒಪ್ಪಿಕೊಳ್ಳುವ ಮುನ್ನ ಸಾಕಷ್ಟು ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. "ಪ್ರಾರಂಭದಲ್ಲಿ  ಸ್ಕ್ರಿಪ್ಟ್ ಅನ್ನು ಹೇಗೆ ಆರಿಸಬೇಕೆಂದು ನನಗೆ ಗೊತ್ತಿರಲಿಲ್ಲ. ನಟನೆಯ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ನಿರ್ದೇಶಕರು ನನಗೆ ಹೇಳುವದನ್ನು ನಾನು ಮಾಡುತ್ತಿದ್ದೆ. ಆದರೆ ರಾಂಬೋ 2 ಒಬ್ಬ ನಟಿಗೆ ರಿಯಾದ ಸ್ಕ್ರಿಪ್ಟ್ ತೆಗೆದುಕೊಳ್ಳುವುದು ಬಹಳ ಮುಖ್ಯ ಎಂದು ಅರಿತುಕೊಳ್ಳುವಂತೆ ಮಾಡಿದೆ. ನಾನು 100 ದಿನಗಳ ಕಾಲ ಓಡಿದ  ಚಿತ್ರದ ನಾಯಕಿ ಎನಿಸಲು ಅದುವೇ ಕಾರಣವಾಗಿದೆ. "

ಇಲ್ಲಿಯವರೆಗೆ ಆರು ಚಲನಚಿತ್ರಗಳಲ್ಲಿ ಅಭಿನಯಿಸಿರುವ ನಟಿಗೆ ನಿರ್ದೇಶಕರು ಎಷ್ಟು ಪ್ರಮುಖವಾಗುತ್ತಾರೆ ಎನ್ನುವುದು ಅರಿವಾಗಿದೆ. "ನಾನು ಒಂದೆರಡು ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡಬೇಕಾಗಿದ್ದರೂ, ಅವರು ನನಗೆ ಕಲಿಯಲು ಅವಕಾಶ ಕಲ್ಪಿಸಿದ್ದರು.

“ನಾನು ಇಲ್ಲಿಯವರೆಗೆ ಮಾಡಿದ ಪ್ರತಿಯೊಂದು ಪಾತ್ರವೂ ನನ್ನ ವಯೋಮಾನದವರಿಗೆ ಸರಿಯಾಗಿ ಹೊಂದುವಂತಹುದು. ಆದರೆ ನಾನು ಐತಿಹಾಸಿಕ, ಪ್ರಬುದ್ಧ ಪಾತ್ರಗಳನ್ನು ಮಾಡಲು ಬಯಸುತ್ತೇನೆ. ಅಲ್ಲದೆ ಮಹಿಳಾ ಕೇಂದ್ರಿತ ಸ್ಕ್ರಿಪ್ಟ್ ಸಿಕ್ಕರೆ ಅಭಿನಯಿಸಲು ಸಿದ್ದವಿದ್ದೇನೆ. ನಾನು ಗಂಭೀರವಾದ ಪಾತ್ರಗಳನ್ನು ಮಾಡುವ ನಿರೀಕ್ಷೆ ಹೊಂದಿದ್ದೇನೆ" ಎನ್ನುವ ನಟಿ ಆಶಿಕಾ ಹಿಂದಿಯ ಥಪ್ಪಡ್, ಚಪಾಕ್ ನಂತಹಾ ಚಿತ್ರದ ಉದಾಹರಣೆ ಕೊಡುತ್ತಾರೆ. 

“ನಾನು ಕುಟುಂಬದೊಂದಿಗೆ ಕೆಲವು ಅಮೂಲ್ಯ ಸಮಯವನ್ನು ಕಳೆಯಲು ಈ ಲಾಕ್ ಡೌನ್ ಸಹಾಯ ಮಾಡಿದೆ. ನನ್ನ ತಾಯಿ ಹಾಗೂ ತಂಗಿ (ಅನುಷಾ ರಂಗನಾಥ್)  ಎಲ್ಲಾ ಒಟ್ತಾಗಿ ಇರುವುದಕ್ಕೆ ಸಂತಸವಾಗಿದೆ. ಗೃಹಿಣಿಯರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಈ ಸಮಯವು ನನಗೆ ಅವಕಾಶ ಮಾಡಿಕೊಟ್ಟಿದೆ" ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com