ಆಗಸ್ಟ್‌ನಲ್ಲಿ ರಾಜ ವೀರ ಮದಕರಿ ನಾಯಕ ಶೂಟಿಂಗ್ ಪುನಾರಂಭ: ರಾಕ್‌ಲೈನ್ ವೆಂಕಟೇಶ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಜಾ ವೀರ ಮದಕರಿ ನಾಯಕ ಚಿತ್ರದ ಶೂಟಿಂಗ್ ಆಗಸ್ಟ್‌ನಲ್ಲಿ ಪುನರಾರಂಭಗೊಳ್ಳಲಿದೆ.
ರಾಜ ವೀರ ಮದಕರಿ ನಾಯಕ
ರಾಜ ವೀರ ಮದಕರಿ ನಾಯಕ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಜಾ ವೀರ ಮದಕರಿ ನಾಯಕ ಚಿತ್ರದ ಶೂಟಿಂಗ್ ಆಗಸ್ಟ್‌ನಲ್ಲಿ ಪುನರಾರಂಭಗೊಳ್ಳಲಿದೆ.

ಶೂಟಿಂಗ್ ಪುನಾರಂಭದ ಬಗೆಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಪತ್ರಿಕೆಗೆ ತಿಳಿಸಿದ್ದು ಇದಾಗಲೇ ಶೂಟಿಂಗ್ ಸಿದ್ದತೆಗಳು ಪ್ರಾರಂಬವಾಗಿದೆ ಎಂದಿದ್ದಾರೆ. ಸಧ್ಯ ಅವರು ಮನರಂಜನಾ ಕ್ಷೇತ್ರದ ಮೇಲಿನ ಲಾಕ್ ಡೌನ್ ನಿರ್ಬಂಧ ತೆಗೆದುಹಾಕುವುದನ್ನು ಎದುರು ನೋಡುತ್ತಿದ್ದಾರೆ.

"ಶೂಟಿಂಗ್ ಸ್ಥಳಗಳ ಆದ್ಯತೆಯಲ್ಲಿಯೂ ಬದಲಾವಾಣೆಗಳು ಆಗಿದ್ದು ಮೊದಲಿಗೆ ಕರ್ನಾಟಕದಲ್ಲಿ ಶೂಟಿಂಗ್ ನಡೆಸಿ ಬಳಿಕ ರಾಜಸ್ಥಾನ ಹಾಗೂ ಇತರೆ ರಾಜ್ಯಗಳ ಶೂಟಿಂಗ್ ನಡೆಸಲಿದ್ದೇವೆ. "

ತಂಡವು ಪ್ರಸ್ತುತ ಟೇಬಲ್ ಕೆಲಸದಲ್ಲಿ ನಿರತರಾಗಿದ್ದು ನಿರ್ಮಾಪಕರು  ಸೆಟ್‌ಗಳಲ್ಲಿ ಹೊಸ ಮಾರ್ಗಸೂಚಿಯ ಅನುಸಾರ ಕೆಲಸ ಮಾಡಲು  ಬದ್ದವಾಗಿದ್ದಾರೆ.

"ಮೊದಲು ನಮ್ಮಲ್ಲಿ ಸೋಂಕುರಹಿತವಾಗಿರುವ ಸುರಂಗವನ್ನು ನಿರ್ಮಿಸಲಾಗಿದ್ದು ಶೂಟಿಂಗ್ ತಂಡದ ಪ್ರತಿಯೊಬ್ಬರೂ ಈ ಸುರಂಗದ ಮೂಲಕವೇ ಪ್ರವೇಶ ಹಾಗೂ ನಿರ್ಗಮನ ಮಾಡಬೇಕಿದೆ. ನಾವು ಮಾಸ್ಕ್ ಗಳನ್ನು ಧರಿಸುವುದು, ಸ್ಯಾನಿಟೈಸರ್ಗಳನ್ನು ಬಳಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದನ್ನು ಕಡ್ಡಾಯ ಮಾಡಲಿದ್ದೇವೆ. ಇದರೊಂದಿಗೆ ನಾವು ಆರೋಗ್ಯ ಇಲಾಖೆ ನೀಡಿದ ಮಾರ್ಗಸೂಚಿಗಳನ್ನು ಸಹ ಅನುಸರಿಸುತ್ತೇವೆ.

ಬೃಹತ್ ಬಜೆಟ್‌ನೊಂದಿಗೆ ನಿರ್ಮಿಸಲಾದ ಈ ಚಿತ್ರದಲ್ಲಿ ದೊಡ್ಡ ತಾರಾಂಗಣವಿರಲಿದೆ. ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಬೇಕಾಗಿದೆ., “ನಾವು ನಿರ್ದಿಷ್ಟ ಸಂಖ್ಯೆಯ ಸಿಬ್ಬಂದಿಗಳನ್ನು ಹೊಂದಿರಬೇಕು, ಅವರು ಕೆಲವು ಕೆಲಸ ನಿರ್ವಹಿಸಬೇಕಿದೆ. ಹಾಗಾಗಿ ಸಿಬ್ಬಂದಿ ಕಡಿತ ಸಾಧ್ಯವಿಲ್ಲ. ಆದಾಗ್ಯೂ, ಮೊದಲಿನಂತಲ್ಲದೆ ಅವಕಾಶವಿದ್ದಲ್ಲಿ ನಾವು ಬಳಸಿಕೊಳ್ಲಲಿದ್ದೇವೆ. . ನಾವು ಸೆಟ್‌ಗಳಿಗೆ ಪ್ರವೇಶಿಸುವ ಜನರ ಸಂಖ್ಯೆಯನ್ನು ಕಡಿಮೆ ಮಾಡುತ್ತೇವೆ. ಅಗತ್ಯವಿರುವ ಕಿರಿಯ ಕಲಾವಿದರು ಅಥವಾ ಫೈಟರ್ ಗಳ ಸಂಖ್ಯೆಯ ಬಗ್ಗೆ ತಂಡವು ವಿವರವಾದ ಚರ್ಚೆಯನ್ನು ನಡೆಸಲಿದೆ, ಮತ್ತು ಅವರಿಗೆ ತಮ್ಮ ಶೂಟಿಂಗ್ ಇರುವ ದಿನಗಳಲ್ಲಿ ಮಾತ್ರವೇ ಸೆಟ್ ಗೆ ಪ್ರವೇಶ ಕಲ್ಪಿಸಲಾಗುತ್ತದೆ. " ನಿರ್ಮಾಪಕರು ವಿವರಿಸಿದ್ದಾರೆ.

ನಾಯಕ ನಟ ದರ್ಶನ್ ಹಿರಿಯ ನಟಿ ಸುಮಲತಾ ಪ್ರಮುಖ ಪಾತ್ರ ವಹಿಸಿರುವ ಚಿತ್ರದ ಉಳಿದ ಪಾತ್ರವರ್ಗದ ಬಗ್ಗೆ ಇನ್ನೂ ಅಂತಿಮವಾಗಿಲ್ಲ.ನಾಯಕಿ ಸೇರಿದಂತೆ ಕೆಲವು ನಟರನ್ನು ನಂತರ ಅಂತಿಮಗೊಳಿಸಲಾಗುತ್ತದೆ, ಏಕೆಂದರೆ ಯೋಜನೆಯ ಪ್ರಕಾರ, ಆಗಸ್ಟ್‌ನಲ್ಲಿ ನಾವು ಪುನರಾರಂಭಿಸಲು ಯೋಜಿಸುತ್ತಿರುವ ಶೆಡ್ಯೂಲ್  ನಲ್ಲಿ ಅವರು ಅಗತ್ಯವಾಗಿಲ್ಲ.  ರಾಕ್‌ಲೈನ್ ಎಂಟರ್‌ಟೈನರ್ಸ್‌ನಡಿಯಲ್ಲಿ ನಿರ್ಮಿಸಲಾದ ಈ ಚಿತ್ರವು ಬಿ.ಎಲ್.ವೇಣು ಬರೆದ ಕಾದಂಬರಿಯನ್ನು ಆಧರಿಸಿದೆ,ಹಂಸಲೇಖಾ ಮತ್ತು ಅಶೋಕ್ ಕಶ್ಯಪ್ ಕ್ರಮವಾಗಿ ಸಂಗೀತ ನಿರ್ದೇಶಕರಾಗಿ ಮತ್ತು ಛಾಯಾಗ್ರಹಣ ನಿರ್ದೇಶಕರಾಗಿ  ಕಾರ್ಯನಿರ್ವಹಿಸಿದ್ದಾರೆ.

ಹಿರಿಯರಿಲ್ಲದೆ ಶೂನ್ಯ ಸೃಷ್ಟಿ

ಬಿಕ್ಕಟ್ಟಿನ ಸಂದರ್ಭದಲ್ಲಿ ಸೂಕ್ತ ಸಲಹೆ, ನಿರ್ದೇಶನ ನಿಡಲು ನಮ್ಮಲ್ಲಿ ಹಿರಿಯ ನಟರಿಲ್ಲದಿರುವುದು ದುರಂತ. ಚಿತ್ರರಂಗದಲ್ಲಿ ಡಾ. ರಾಜ್‌ಕುಮಾರ್ ಮತ್ತು ಅಂಬರೀಶ್‌ರಂತಹ ಯಾರೂ ಇಲ್ಲ ಎಂದು ರಾಕ್‌ಲೈನ್ ವೆಂಕಟೇಶ್. ಹೇಳಿದ್ದಾರೆ. ತೆಲುಗು ಚಿತ್ರೋದ್ಯಮ, ಚಿರಂಜೀವಿಯಂತಹ ಹಿರಿಯ ನಟರ ಮಾರ್ಗದರ್ಶನದಲ್ಲಿ ನಡೆಯುತ್ತದೆ. ಆದರೆ ನಾವು ಅಂತಹಾ ಅದೃಷ್ಟ ಶಾಲಿಗಳಲ್ಲ. ನಾವು ನಮ್ಮ ಜನರನ್ನು ಕಳೆದುಕೊಂಡಿದ್ದೇವೆ

ನಮ್ಮಲ್ಲಿ ಡಾ. ರಾಜ್‌ಕುಮಾರ್ ಇದ್ದರು, ಅವರು ಸಮಸ್ಯೆಗಳನ್ನು ಬಗೆಹರಿಸುವ ಮಾರ್ಗ ಸೂಚಿಸುತ್ತಿದ್ದರು. ನಿರ್ಮಾಪಕರ ಪಾಲಿಗೆ ಪಾರ್ವತಮ್ಮ  ರಾಜ್‌ಕುಮಾರ್ ಕೂಡ ಇದ್ದರು. ನಂತರ ನಾವು ಅಂಬರೀಶ್ ಅವರನ್ನೂ ನಾವು ಕಂಡಿದ್ದೆವು. ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಅವರೆಲ್ಲಾ ಸಾಕಷ್ಟು ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಪ್ರಸ್ತುತ, ಆ ಜಾಗವನ್ನು ತುಂಬಲು ನಮ್ಮಲ್ಲಿ ಯಾರೂ ಇಲ್ಲ. ಚಿತ್ರರಂಗದ ಹಿಂದೆ ನಿಂತ ಈ ಜನರ ಮೌಲ್ಯವನ್ನು ನಾವು ಈಗ ಅರ್ಥಮಾಡಿಕೊಂಡಿದ್ದೇವೆ. ಅವರಿಲ್ಲದಿದ್ದರೆ, ಈ ಉದ್ಯಮವು ಇಷ್ಟು ದೂರ ಸಾಗುವುದು ಸಾಧ್ಯವಿರಲಿಲ್ಲ. ಈಗಿನ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಮುಂದಾಳತ್ವ ವಹಿಸಲು ನಮ್ಮಲ್ಲಿ ಯಾರೂ ಇಲ್ಲದಂತಾಗಿದೆ ಎಂದು ನಿರ್ಮಾಪಕ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com