ನಟಿ ಮೀರಾ ಚೋಪ್ರಾ
ನಟಿ ಮೀರಾ ಚೋಪ್ರಾ

ನಟಿ ಮೀರಾ ಚೋಪ್ರಾಗೆ ಆನ್ ಲೈನ್ ನಲ್ಲಿ ಬೆದರಿಕೆ: ಜ್ಯೂ.ಎನ್ ಟಿಆರ್ ಅಭಿಮಾನಿಗಳ ವಿರುದ್ಧ ದೂರು ದಾಖಲು!

ಟಾಲಿವುಡ್ ನ ಬಂಗಾರಂ ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ಮೀರಾ ಚೋಪ್ರಾಗೆ ಟ್ವಿಟರ್ ನಲ್ಲಿ ಜ್ಯೂ.ಎನ್ ಟಿಆರ್ ಅಭಿಮಾನಿಗಳು ಬೆದರಿಕೆ ಹಾಕಿ ಅಸಭ್ಯವಾಗಿ ನಿಂದಿಸಿದ್ದು, ಕಿರುಕುಳ ನೀಡಿದವರ ವಿರುದ್ಧ ನಟಿ ಸೈಬರ್ ಬೆದರಿಕೆ ದೂರು ದಾಖಲಿಸಿದ್ದಾರೆ. 
Published on

ಟಾಲಿವುಡ್ ನ ಬಂಗಾರಂ ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ಮೀರಾ ಚೋಪ್ರಾಗೆ ಟ್ವಿಟರ್ ನಲ್ಲಿ ಜ್ಯೂ.ಎನ್ ಟಿಆರ್ ಅಭಿಮಾನಿಗಳು ಬೆದರಿಕೆ ಹಾಕಿ ಅಸಭ್ಯವಾಗಿ ನಿಂದಿಸಿದ್ದು, ಕಿರುಕುಳ ನೀಡಿದವರ ವಿರುದ್ಧ ನಟಿ ಸೈಬರ್ ಬೆದರಿಕೆ ದೂರು ದಾಖಲಿಸಿದ್ದಾರೆ. 

ಜೂ.03 ರಂದು ಮಧ್ಯಾಹ್ನ ಆಸ್ಕ್ ಮೀರಾ ಎಂಬ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಮೀರಾ ಅಭಿಮಾನಿಗಳೊಂದಿಗೆ ಟ್ವಿಟರ್ ಸಂವಾದದಲ್ಲಿ ತೊಡಗಿದ್ದರು. ಈ ವೇಳೆ ಸಿನಿ ಪ್ರಿಯರು ಮೀರಾ ಅವರಿಗೆ "ತೆಲುಗು ಸಿನಿ ರಂಗದಲ್ಲಿ ತಮ್ಮ ಮೆಚ್ಚಿನ ನಟ ಯಾರು?" ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸುತ್ತಿದ್ದ  ಮೀರಾಗೆ ಮಧ್ಯದಲ್ಲಿ ಒಂದಷ್ಟು ಜನ, ಜ್ಯೂ.ಎನ್ ಟಿಆರ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಒಂದು ಪದದಲ್ಲಿ ತಿಳಿಸಿ ಎಂದು ಜ್ಯೂ. ಎನ್ ಟಿಆರ್ ಅಭಿಮಾನಿಯೊಬ್ಬರು ಕೇಳಿದ್ದರು. ಜ್ಯೂ. ಎನ್ ಟಿಆರ್ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ್ದ ಮೀರಾ ಚೋಪ್ರಾ ಅವರು ಯಾರು ಗೊತ್ತಿಲ್ಲ. ನಾನು ಅವರ ಅಭಿಮಾನಿಯಲ್ಲ ಎಂದಿದ್ದಾರೆ. 

ಇನ್ನೂ ಕೆಲವರು ಜ್ಯೂ.ಎನ್ ಟಿಆರ್ ಅವರ ಶಕ್ತಿ (2011) ದಮ್ಮು (2012) ಸಿನಿಮಾಗಳನ್ನು ವೀಕ್ಷಿಸುವಂತೆ ಸಲಹೆ ನೀಡಿದ್ದರು. ಇದಕ್ಕೂ ಪ್ರತಿಕ್ರಿಯಿಸಿದ್ದ ಮೀರಾ ಚೋಪ್ರಾ ಧನ್ಯವಾದ ಆದರೆ ನನಗೆ ಆಸಕ್ತಿ ಇಲ್ಲ ಎಂದು ಹೇಳಿದ್ದರು. ಇದರಿಂದ ಕೆರಳಿದ ಜ್ಯೂ.ಎನ್ ಟಿಆರ್ ಅಭಿಮಾನಿಗಳು, ಮೀರಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ. 

ಮೀರಾ ಚೋಪ್ರಾ ಈ ಘಟನೆಯನ್ನು ಜ್ಯೂ.ಎನ್ ಟಿಆರ್ ಅವರ ಖಾತೆಗೆ ಟ್ಯಾಗ್ ಮಾಡಿ, "ಈ ರೀತಿಯ ಅಭಿಮಾನಿಗಳಿಂದ ಯಶಸ್ವಿಯಾಗಿದ್ದೀರಿ ಅನಿಸುತ್ತಾ"? ಎಂದು ಪ್ರಶ್ನಿಸಿದ್ದಾರೆ. ಮೀರಾ ಚೋಪ್ರಾಗೆ ಗಾಯಕಿ ಚಿನ್ಮಯಿ ಶ್ರೀಪಾದ್ ಸಹ ಬೆಂಬಲ ನೀಡಿದ್ದಾರೆ. ಜ್ಯೂ.ಎನ್ ಟಿಆರ್ ಅಭಿಮಾನಿಗಳ ವಿರುದ್ಧ ಮೀರಾ ಚೋಪ್ರಾ ಸೈಬರ್ ಬೆದರಿಕೆ ದೂರು ದಾಖಲಿಸಿದ್ದಾರೆ.

ಬೆದರಿಕೆ, ಕಿರುಕುಳ ಘಟನೆಯನ್ನು ವಿರೋಧಿಸಿ ಟ್ವಿಟರ್ ನಲ್ಲಿ  #WeSupportMeeraChopra ಅಭಿಯಾನ ಪ್ರಾರಂಭವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com