ತೆಲುಗಿನಲ್ಲೂ ಕಮಾಲ್ ಮಾಡೋಕೆ ಬರ್ತಿದೆ 'ಪೊಗರು' ಚಿತ್ರದ ಕರಾಬು ಸಾಂಗ್

ಧ್ರುವ ಸರ್ಜಾ ಬಹುನಿರೀಕ್ಷೆಯ ಪೊಗರು ಚಿತ್ರ ಸಖತ್ ಸದ್ದು ಮಾಡುತ್ತಿದೆ. ಇದಾಗಲೇ ರಿಲೀಸ್ ಆಗಿರುವ ಕರಾಬು ಸಾಂಗ್ 31 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ನಿರ್ಮಾಪಕರು ಇದೀಗ ಈ ಹಾಡಿನ ತೆಲುಗು ಆವೃತ್ತಿ ತರಲು ತಯಾರಿ ನಡೆಸಿದ್ದಾರೆ. 
ಧ್ರುವ ಸರ್ಜಾ
ಧ್ರುವ ಸರ್ಜಾ

ಧ್ರುವ ಸರ್ಜಾ ಬಹುನಿರೀಕ್ಷೆಯ ಪೊಗರು ಚಿತ್ರ ಸಖತ್ ಸದ್ದು ಮಾಡುತ್ತಿದೆ. ಇದಾಗಲೇ ರಿಲೀಸ್ ಆಗಿರುವ ಕರಾಬು ಸಾಂಗ್ 31 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ನಿರ್ಮಾಪಕರು ಇದೀಗ ಈ ಹಾಡಿನ ತೆಲುಗು ಆವೃತ್ತಿ ತರಲು ತಯಾರಿ ನಡೆಸಿದ್ದಾರೆ. 

ಕಮರ್ಷಿಯಲ್ ಎಂಟರ್ಟೈನರ್ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ಬರಲಿದೆ.  ಆಕ್ಷನ್ ಪ್ರಿನ್ಸ್ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಒಟ್ತಾಗಿ ತೆರೆ ಮೇಲೆ ತೋರಿಸಲಿರುವ ಈ ಚಿತ್ರದ ಖಡಕ್ ಸಾಂಗ್ ಟಾಲಿವುಡ್ ಪ್ರೇಕ್ಷಕರ ಮನ ಗೆಲ್ಲುತ್ತದೆ ಎಂದು ತಂಡವು ಆಶಿಸಿದೆ

ಕನ್ನಡ ಆವೃತ್ತಿಯನ್ನು ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಹಾಡಿದ್ದರೆ ಮತ್ತು ಸಾಹಿತ್ಯ ಸಹ ಅವರದ್ದೇ ಆಗಿದೆ. ತೆಲುಗು ಆವೃತ್ತಿಗೆ ಭಾಸ್ಕರಭಟ್ಲ ರವಿ ಕುಮಾರ್  ಸಾಹಿತ್ಯ ರಚನೆ ಮಾಡಿದ್ದಾರೆ.

 ತೆಲುಗಿನಲ್ಲಿ 125 ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಿತ್ಯ ಬರೆದಿರುವ .ಭಾಸ್ಕರಭಟ್ಲ ರವಿ ಈ ಟ್ರ್ಯಾಕ್ ಅನ್ನು ಖ್ಯಾತ ಗಾಯಕ ಅನುರಾಗ್ ಸಿಂಗ್ ಹಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಹಾಡನ್ನು ಪೊಗರು ತಂಡ ಅನಾವರಣಗೊಳಿಸಲಿದೆ.ಏತನ್ಮಧ್ಯೆ, ನಿರ್ದೇಶಕ ನಂದ ಕಿಶೋರ್  ಮತ್ತು ನಿರ್ಮಾಪಕ ಬಿ.ಕೆ.ಗಂಗಾಧರ್ ನೇತೃತ್ವದ ಪೊಗರು ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು  ಪೂರ್ಣಗೊಳಿಸಿದೆ ಮತ್ತು ಚಿತ್ರ ಬಿಡುಗಡೆಗೆ ಸಿದ್ದವಾಗುವ ಮುನ್ನ ಎರಡು ಹಾಡುಗಳನ್ನು  ಪೂರ್ಣಗೊಳಿಸಬೇಕಿದೆ. 

ಪೊಗರು ಚಿತ್ರದಲ್ಲಿ  ಆಕ್ಷನ್ ಪ್ರಿನ್ಸ್ ಮತ್ತು ರಶ್ಮಿಕಾ ಜೊತೆಗೆ, ಪಾತ್ರವರ್ಗದಲ್ಲಿ ಧನಂಜಯ್, ಮಯೂರಿ, ರವಿಶಂಕರ್, ಚಿಕ್ಕಣ್ಣ ಮತ್ತು ಕುರಿ ಪ್ರತಾಪ್ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಚಿತ್ರಕ್ಕೆ ಪೊಗರು ವಿ ಹರಿರಿಕೃಷ್ಣ ಮತ್ತು ಚಂದನ್ ಶೆಟ್ಟಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ವಿಜಯ್ ಮಿಲ್ಟನ್ ಕ್ಯಾಮೆರಾ ಕೆಲಸ ಮಾಡಿದ್ದಾರೆ.

ಇನ್ನು ಪೊಗರು ಚಿತ್ರದಲ್ಲಿ ಬಾಡಿಬಿಲ್ಡರ್‌ಗಳಾದ ಕೈ ಗ್ರೀನ್, ಮೋರ್ಗನ್ ಅಸ್ಟೆ, ಜೋಹಾನ್ ಲ್ಯೂಕಾಸ್, ಮತ್ತು ಜೋ ಲಿಂಡರ್ ಸಹ ಕಾಣಿಸಿಕೊಂಡಿರುವುದು ಪ್ರೇಕ್ಷಕರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com