'ಅಂದು-ಇಂದು ನಾವು ಒಂದು' ಎಂದ ವ್ಯಕ್ತಿ ಬಿಟ್ಟು ಹೋದಾಗ...ವೈರಲ್ ಆಗುತ್ತಿವೆ ಚಿರು ಸರ್ಜಾ ಇನ್ಸ್ಟಾಗ್ರಾಂ ಪೋಸ್ಟ್ ಗಳು!

ಜೂನ್ 7, 2020 ಸ್ಯಾಂಡಲ್ ವುಡ್ ಪಾಲಿಗೆ ಕರಾಳ ದಿನ. ಭರವಸೆಯ ಯುವ ನಟ ಚಿರಂಜೀವಿ ಸರ್ಜಾ ಹಠಾತ್ ನಿಧನ ಇಡೀ ಕಲಾವಿದ ಲೋಕವನ್ನು ಆಘಾತಗೊಳಿಸಿತು.
ಚಿರಂಜೀವಿ ಸರ್ಜಾ(ಸಂಗ್ರಹ ಚಿತ್ರ)
ಚಿರಂಜೀವಿ ಸರ್ಜಾ(ಸಂಗ್ರಹ ಚಿತ್ರ)
Updated on

ಜೂನ್ 7, 2020 ಸ್ಯಾಂಡಲ್ ವುಡ್ ಪಾಲಿಗೆ ಕರಾಳ ದಿನ. ಭರವಸೆಯ ಯುವ ನಟ ಚಿರಂಜೀವಿ ಸರ್ಜಾ ಹಠಾತ್ ನಿಧನ ಇಡೀ ಕಲಾವಿದ ಲೋಕವನ್ನು ಆಘಾತಗೊಳಿಸಿತು.

ಕಂಗಳಲ್ಲಿ ನೂರಾರು ಕನಸುಗಳು, ಸಾಧಿಸುವ ಛಲ, ಹತ್ತು ವರ್ಷ ಪ್ರೀತಿಸಿ ಎರಡು ವರ್ಷಗಳ ಹಿಂದಷ್ಟೇ ನಟಿ ಮೇಘನಾರನ್ನು ಮದುವೆಯಾಗಿ ಪುಟ್ಟ ಕಂದನ ನಿರೀಕ್ಷೆಯಲ್ಲಿದ್ದ ದಂಪತಿ, ಸದಾ ಬೆನ್ನೆಲುಬಾಗಿದ್ದ ಕಲಾವಿದ ತಮ್ಮ ಧ್ರುವ ಸರ್ಜಾ, ಮಾವ ಅರ್ಜುನ್ ಸರ್ಜಾರ ಬೆಂಬಲ, ಪ್ರೋತ್ಸಾಹ, ಕೂಡು ಕುಟುಂಬ ಇನ್ನೇನು ಬೇಕು, ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಿದ್ದ ಸಂಸಾರಕ್ಕೆ ಸಾವು ಬರಸಿಡಿಲಿನಂತೆ ಬಂದೊರಗಿತು.

ಕಲಾವಿದರು, ಸೆಲೆಬ್ರಿಟಿಗಳು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಏನಾದರೊಂದು ಹೊಸ ವಿಷಯಗಳನ್ನು, ಖುಷಿಯ ಸಂಗತಿಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಚಿರು ಸರ್ಜಾ ಕೂಡ ಕೊರೋನಾ ಲಾಕ್ ಡೌನ್ ಸಮಯದಲ್ಲಿ ತಮ್ಮ ಕುಟುಂಬದವರ ಜೊತೆ ಕಳೆದ ಸಂತೋಷದ ಅಮೂಲ್ಯ ಕ್ಷಣಗಳು, ನೆನಪುಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಅವರ ಸಾವಿನ ನಂತರ ಅದು ಸಾಕಷ್ಟು ಸುದ್ದಿಯಾಗುತ್ತಿದೆ. ಅವುಗಳನ್ನು ನೋಡಿದ ಎಂಥ ಕಲ್ಲು ಹೃದಯದವರಿಗೂ ಮನಸ್ಸು ಕರಗದೆ ಇರದು.

 
 
 
 
 
 
 
 
 
 
 
 
 

Then and now.. we r still the same... what say guys..??

A post shared by Chirranjeevi Sarja (@chirusarja) on

ಚಿರು ಸರ್ಜಾ ತಾವು ಬಾಲ್ಯದಲ್ಲಿರುವಾಗ ಸಹೋದರ ಧ್ರುವ ಸರ್ಜಾ, ಮಾವ ಕಿಶೋರ್ ಸರ್ಜಾ ಅವರ ಪುತ್ರ ಸೂರಜ್ ಸರ್ಜಾ ಜೊತೆಗೆ ಇರುವ ಫೋಟೋವನ್ನು ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಮೂವರು ಸುಮಾರು ವರ್ಷಗಳ ಹಿಂದೆ ಕ್ಯಾಮರಾಗೆ ಪೋಸ್‌ ನೀಡಿದ ರೀತಿಯಲ್ಲೇ ಈಗಲೂ ಪೋಸ್‌ ನೀಡಿ, ಆಗಿನ ಮತ್ತು ಈಗಿನ ಎರಡೂ ಫೋಟೋಗಳನ್ನು ಕೊಲಾಜ್ ಮಾಡಿ, ಅಪ್‌ಲೋಡ್ ಮಾಡಿದ್ದರು. ಅದಕ್ಕೆ, ಅಂದಿಗೂ ಇಂದಿಗೂ ನಾವು ಹಾಗೆಯೇ ಇದ್ದೇವೆ ಎಂದು ಖುಷಿಯಿಂದ ಹೇಳಿಕೊಂಡಿದ್ದರು.

ಪ್ರೀತಿಯಿಂದ ಚಿರು ಎಂದು ಕರೆಸಿಕೊಳ್ಳುವ ಚಿರು ಸರ್ಜಾಗೆ ಸಹೋದರ ಧ್ರುವ ಅವರ ಮೇಲೆ ಎಲ್ಲಿಲ್ಲದ ಪ್ರೀತಿ. ಅವರಿಬ್ಬರು ಅಣ್ಣ-ತಮ್ಮಂದಿರಿಗಿಂತ ಹೆಚ್ಚಾಗಿ ಗೆಳೆಯರಂತೆಯೇ ಇರುತ್ತಿದ್ದರು. ಬಿಡುವಿನ ವೇಳೆಯಲ್ಲಿ ಧ್ರುವ ತಲೆಗೆ ಎಣ್ಣೆ ಹಾಕಿ ಚಿರು ಮಸಾಜ್‌ ಮಾಡುತ್ತಿರುವ, ಅಣ್ಣನಿಗೆ ಧ್ರುವ ಕೈತುತ್ತು ತಿನ್ನಿಸುತ್ತಿರುವ, ಲಾಕ್ ಡೌನ್ ವೇಳೆಯಲ್ಲಿ ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ಚೌಕಾಬಾರ್, ಚೆಸ್ ಆಡುತ್ತಿರುವ ವಿಡಿಯೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಸೋದರಳಿಯನ ಸಾವಿನ ಸುದ್ದಿ ಕಿವಿಗೆ ಅಪ್ಪಳಿಸುತ್ತಿದ್ದಂತೆ ಮಾವ ಅರ್ಜುನ್ ಸರ್ಜಾರ ಫೇಸ್ ಬುಕ್ ಪೇಜ್ ನ ಡಿಪಿ ಸೂತಕದ ಛಾಯೆ ಕಪ್ಪು ಬಣ್ಣಕ್ಕೆ ತಿರುಗಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com