'ಮಂಗಳ' ಆಗಿ ಡಿಜಿಟಲ್ ಲೋಕಕ್ಕೆ ಕಾಲಿಟ್ಟ ಕಾವ್ಯಾ ಶಾಸ್ತ್ರಿ

ಆಂಕರಿಂಗ್ ನಿಂದ ನಟನೆಗೆ ಇಳಿದ ಕಾವ್ಯಾ ಶಾಸ್ತ್ರಿಇದೀಗ "ಮಂಗಳ" ವೆಬ್ ಸೀರೀಸ್ ಮೂಲಕ ತಮ್ಮ ಚೊಚ್ಚಲ ಒಟಿಟಿ  ಪ್ಲಾಟ್‌ಫಾರ್ಮ್ ಪ್ರವೇಶವನ್ನು ಎದುರು ನೋಡುತ್ತಿದ್ದಾರೆ. ಅಪರಿಚಿತ ತಾಯಿಯೊಂದಿಗಿನ ಪಯಣ ಎಂಬ ಸಬ್ ಟೈಟಲ್ ಹೊಂದಿರುವ ಈ ಸರಣಿಯ ಕಥೆ, ನಿರ್ದೇಶನ ಪ್ರಥ್ವಿ ಕುಣಿಗಲ್ ಅವರದ್ದಾಗಿದೆ.
ಕಾವ್ಯಾ ಶಾಸ್ತ್ರಿ
ಕಾವ್ಯಾ ಶಾಸ್ತ್ರಿ
Updated on

ಆಂಕರಿಂಗ್ ನಿಂದ ನಟನೆಗೆ ಇಳಿದ ಕಾವ್ಯಾ ಶಾಸ್ತ್ರಿಇದೀಗ "ಮಂಗಳ" ವೆಬ್ ಸೀರೀಸ್ ಮೂಲಕ ತಮ್ಮ ಚೊಚ್ಚಲ ಒಟಿಟಿ  ಪ್ಲಾಟ್‌ಫಾರ್ಮ್ ಪ್ರವೇಶವನ್ನು ಎದುರು ನೋಡುತ್ತಿದ್ದಾರೆ. ಅಪರಿಚಿತ ತಾಯಿಯೊಂದಿಗಿನ ಪಯಣ ಎಂಬ ಸಬ್ ಟೈಟಲ್ ಹೊಂದಿರುವ ಈ ಸರಣಿಯ ಕಥೆ, ನಿರ್ದೇಶನ ಪ್ರಥ್ವಿ ಕುಣಿಗಲ್ ಅವರದ್ದಾಗಿದೆ.

ಜೆಜಿ ಪ್ರೊಡಕ್ಷನ್ ತಯಾರಿಸಿದ ವೆಬ್ ಸೀರೀಸ್ ಕನ್ನಡದಲ್ಲಿ ತಯಾರಾದ ಮೊದಲ ಕೆಲವು ಸೀರೀಸ್ ಗಳಲ್ಲಿ ಒಂದಾಗಿದೆ.  ಇದು ಲಿಂಗಾಯತ ಸಮುದಾಯದ ಸುತ್ತ ಹರಿಯುವ ಕಥಾನಕವಾಗಿದ್ದು  8-ಎಪಿಸೋಡ್ ಹೊಂದಿರುವ ಥ್ರಿಲ್ಲರ್ ಸರಣಿಯಾಗಿರಲಿದೆ. ಕಾವ್ಯಾ ಅವರು ಸರ್ಕಾರದ ಅನುಮತಿಯನ್ನು ಪಡೆದು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ಪುಟಾಣಿ ಪಂಟ್ರು ಹಾಗೂ ಸ್ಟಾರ್ ಸಿಂಗರ್ ನಂತಹಾ ಶೋ ಗಳನ್ನು ನಡೆಸಿಕೊಟ್ಟಿರುವ ಕಾವ್ಯಾಕಿರುತೆರೆಯಲ್ಲಿ ಶುಭವಿವಾಹ, ತಮಿಳಿನ ಮಹಾಲಕ್ಷ್ಮಿ ಹಾಗೂ ಪೆಲ್ಲಿನೇಟ್ ಪ್ರಮಣಲು ರಾಣಿ ವಾಸಂ  ಮೊದಲಾದ ಧಾರಾವಾಹಿಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ಬಿಗ್ ಬಾಸ್- ಸೀಸನ್ 5 ರಲ್ಲಿ ಸಹ ಭಾಗವಹಿಸಿದ್ದ ಕಾವ್ಯಾ  ಈಗ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಅದೃಷ್ಟ ಪರೀಕ್ಷಿಸಲು ಸಿದ್ದವಿದ್ದಾರೆ.. "ವೆಬ್ ಸರಣಿಗಳು ಭವಿಷ್ಯ ಹೊಂದಿದೆ. ಅದು ಇಂದು ನಮಗೆ ಮನರಂಜನೆಯನ್ನು ಒದಗಿಸುತ್ತಿದೆ. ಇದಲ್ಲದೆ, ಈಗ ಜಾಗತಿಕ ವೇದಿಕೆಯಲ್ಲಿ ಮಹತ್ವ ಪಡೆಯುತ್ತಿರುವ ಕನ್ನಡದ ವೆಬ್ ಸೀರೀಸ್ ಭಾಗವಾಗಲು ನನಗೆ ಸಂತೋಷವಾಗಿದೆ. ನನ್ನ ಕೆಲಸಬೆಳ್ಳಿ ಪರದೆಯಲ್ಲಿರಲಿ, ಅಥವಾ ದೂರದರ್ಶನವಾಗಲಿ ಅಥವಾ ಡಿಜಿಟಲ್ ಪ್ಲಾಟ್‌ಫಾರ್ಮ್ ಆಗಿರಲಿ ನನಗೆ ಯಾವುದೇ ವ್ಯತ್ಯಾಸವಿಲ್ಲ. ವೆಬ್ ಸೀರಿಈಸ್ ನಲ್ಲಿ ಕೆಲಸ ಮಾಡುವುದು ಸವಾಲಿನದ್ದಾಗಿದೆ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ಅದು ಸೂಕ್ಷ್ಮ ಮತ್ತು  ನ್ಯಾಚುರಲ್ ಆಗಿರಲಿದೆ.

"ಡಿಜಿಟಲ್ ಜಗತ್ತು ಹೊರಟಿರುವ ವೇಗವನ್ನು ಗಮನಿಸಿದರೆ ನಾನು ಸರಿಯಾದ ಸಮಯದಲ್ಲಿ ಇಲ್ಲಿದ್ದೇನೆ ಎಂದು ನಾನು ಭಾವಿಸುತ್ತೇನೆ, ”ಎಂದು ಕಾವ್ಯಾ ಹೇಳುತ್ತಾರೆ, ಪ್ರಸ್ತುತ ನಂದಿನಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ "ನಾನು ಮಂಗಳ ದಲ್ಲಿ ಕಾಣಿಸಿಕೊಳ್ಳಲು ಉತ್ಸುಕಳಾಗಿದ್ದೇನೆ" ಎಂದರು.

"ಊರ್ವಿ" ಚಿತ್ರದ ಕೆಲಸ ಮಾಡಿದ್ದ  ಡಿಒಪಿ ಆನಂದ್ ಸುದರ್ಶೇಶ ಈ ವೆಬ್ ಸೀರೀಸ್ ಕೆಲಸ ಮಾಡಿದ್ದು ಮಯೂರೇಶ್ ಅಧಿಕಾರಿ ಸಂಗೀತ ಸಂಯೋಜನೆ ಮಾಡಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com